ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಶಿಕ್ಷಣ ಇರುವುದು ಕೇವಲ ಸರ್ಕಾರಿ ಕೆಲಸಕ್ಕಾಗಿ ಅಲ್ಲ, ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ಕಿವಿ ಮಾತು ಹೇಳಿದರು.ಕಾರ್ಮಿಕರ ದಿನಾಚರಣೆ ಅಂಗವಾಗಿ ಹಮಾಲಿ ಸಂಘ ಶುಕ್ರವಾರ ನಗರದ ಶ್ರೀ ಬೋಳರಾಮೇಶ್ವರ ದೇವಾಲಯದಿಂದ ಹಮ್ಮಿಕೊಂಡಿದ್ದ ಬೈಕ್ ಜಾಥಕ್ಕೆ ಚಾಲನೆ ನೀಡಿ ಮಾತನಾಡಿ ಶಿಕ್ಷಣ ಪಡೆದವರಿಗೆ ಬದುಕಲು ನೂರಾರು ದಾರಿಗಳು ಇವೆ. ದುಡಿಮೆಯಲ್ಲಿನ ಒಂದಿಷ್ಟು ಹಣ ಕೂಡಿಡಬೇಕು. ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಬೇಕು. ನೀವುಗಳು ಶ್ರಮ ಜೀವಿ ಗಳು, ನಿಮ್ಮ ಮಕ್ಕಳಿಗೆ ಒಳ್ಳೆಯ ಶಿಕ್ಷಣ ನೀಡಿದರೆ ಮುಂದೆ ಅವರು ತಮ್ಮ ಭವಿಷ್ಯರೂಪಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.ಕಾರ್ಮಿಕರ ಹಕ್ಕು ಪ್ರತಿಪಾದನೆ ಮಾಡಲು ಕಾರ್ಮಿಕರ ದಿನಾಚರಣೆಯನ್ನು ಮೊದಲ ಬಾರಿಗೆ ಹಮ್ಮಿಕೊಳ್ಳಲಾಯಿತು, ರೈತರು ಈ ದೇಶದ ಬೆನ್ನೆಲುಬು ಎನ್ನುತ್ತೇವೆ. ಹಾಗೆಯೇ ಕಾರ್ಮಿಕರು ಈ ದೇಶದ ಬೆನ್ನೆಲುಬು. ಎಲ್ಲಾ ವಿಭಾಗಗಳಲ್ಲೂ ಕಾರ್ಮಿಕ ರಿದ್ದಾರೆ, ಎಲ್ಲಾ ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಲು ದಿನಾಚರಣೆಯನ್ನು ಮಾಡಲಾಗುತ್ತಿದೆ ಎಂದರು.ಎಲ್ಲರಿಗೂ ಉತ್ತಮ ವೇತನ ಸಿಗಲಿ, ಕೆಲಸದ ವಾತಾವರಣ ಇರಲಿ, ಸಾಮಾಜಿಕ ಭದ್ರತೆ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಈ ಕಾರ್ಯಕ್ರಮಗಳ ಮೂಲಕ ಮಾಡಲಾಗುತ್ತಿದೆ ಎಂದ ಅವರು, ಒಗ್ಗಟ್ಟು ಮತ್ತು ಸಾಮಾಜಿಕ ನ್ಯಾಯ ಕಾರ್ಮಿಕರಿಗೆ ಸಿಗಬೇಕು ಎಂದು ಹೇಳಿದರು.ಹಕ್ಕು ಪತ್ರ ಪರಿಶೀಲಿಸಿಹಕ್ಕುಪತ್ರ ಕೊಡಲಾಗಿದೆಯಾ, ಪರಿಶೀಲನೆ ಮಾಡಿಕೊಳ್ಳಿ. ಏಕೆಂದರೆ ತುಂಬಾ ಹಕ್ಕು ಪತ್ರಗಳಲ್ಲಿ ಸರಿಯಾದ ದಾಖಲೆಗಳು ಇಲ್ಲ, ಪತ್ರಗಳನ್ನು ಅಧಿಕಾರಿಗಳ ಬಳಿ ತೆಗೆದುಕೊಂಡು ಹೋಗಿ ಪರಿಶೀಲಿಸಿ, ಅದಕ್ಕೆ ಬೇಕಾದ ಪೂರಕದ ದಾಖಲೆ ನಾನು, ನಮ್ಮ ಸರ್ಕಾರ ಒದಗಿಸಿ ಕೊಡಲಿದ್ದೇವೆ ಎಂದ ಶಾಸಕರು, ನಿವೇಶನ ರಹಿತ ಕಾರ್ಮಿಕರ ಪಟ್ಟಿ ಸಿದ್ಧಪಡಿಸಿ ತೆಗೆದುಕೊಂಡು ಬನ್ನಿ ಎಂದು ಹೇಳಿದರು. ಕಾರ್ಮಿಕರ ಕಠಿಣ ಪರಿಶ್ರಮ, ದೇಶದ ಅಭಿವೃದ್ಧಿಯಲ್ಲಿ ಅವರ ಪಾತ್ರ ಗುರುತಿಸುವ ಮಹತ್ವದ ಜವಾಬ್ದಾರಿ ಸರ್ಕಾರದ್ದಾಗ ಬೇಕು. ಅವರಿಗೆ ನ್ಯಾಯಯುತ ವೇತನವನ್ನು ಕೊಡುವಂತಹ, ಅವರು ಮಾಡುವಂತಹ ಕೆಲಸಕ್ಕೆ ಸಮಯ ನಿಗದಿಪಡಿ ಸುವುದು, ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ, ಇಂತಹ ಕಾರ್ಯಕ್ರಮಗಳ ಮೂಲಕ ಆಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಹಮಾಲಿ ಸಂಘದ ಅಧ್ಯಕ್ಷ ರಹಿಂ, ಕಾರ್ಯದರ್ಶಿ ಮಂಜುನಾಥ್, ನಗರಸಭಾ ಮಾಜಿ ಸದಸ್ಯ ಮಧು ಇದ್ದರು.---ಫೋಟೋ---ಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆದ ಬೈಕ್ ರ‍್ಯಾಲಿಗೆ ಚಾಲನೆ ನೀಡಿದ ಶಾಸಕ ಎಚ್.ಡಿ. ತಮ್ಮಯ್ಯ, ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಮಿಕರೊಂದಿಗೆ ಬೈಕ್ ಚಾಲನೆ ಮಾಡಿದರು.