ಸಾರಾಂಶ
ಕುರುಬ ಸಮುದಾಯದ ಬಡವರಿಗೆ ಸಮುದಾಯದ ಅಧಿಕಾರಿಗಳು ಹೆಚ್ಚಿನ ಸಹಾಯ ಮಾಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ .
ಕನ್ನಡಪ್ರಭ ವಾರ್ತೆ ಶಿರಾ
ಕನಕದಾಸರು ೧೬ನೇ ಶತಮಾನದಲ್ಲಿ ಸಾಮಾಜಿಕ ಅಸಮಾನತೆ ವಿರುದ್ಧ ಸಮರ ಸಾರಿದರು. ಸಮಾಜದ ತಾರತಮ್ಯ ಅಸಮಾನತೆಯನ್ನು ಅಳಿಸಿ ಹಾಕುವ ಪ್ರಯತ್ನ ಮಾಡಿದವರು. ನಾವೂ ಸಹ ಸಮಾಜದಲ್ಲಿನ ಜಾತಿ ವ್ಯವಸ್ಥೆ ತೊಡೆದು ಹಾಕಿ ನಾವೆಲ್ಲರೂ ಒಂದೇ ಎಂದು ಸಾಗೋಣ ಎಂದು ತೆಂಗು ಮತ್ತು ನಾರು ನಿಗಮದ ಮಾಜಿ ಅಧ್ಯಕ್ಷ ಬಿ.ಕೆ. ಮಂಜುನಾಥ್ ಹೇಳಿದರು.ತಾಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಶ್ರೀ ಕನಕ ದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕನಕದಾಸರು ತಮ್ಮ ಕೀರ್ತನೆಗಳಲ್ಲಿ ಭಕ್ತಿ, ವೈರಾಗ್ಯ, ಭಜನೆಗಳಷ್ಟೇ ಅಲ್ಲದೇ ಕುಲ ಕುಲ ಎಂದು ಹೊಡೆದಾಡದಿರಿ, ಸಮಾಜದಲ್ಲಿ ಎಲ್ಲರೂ ಒಂದೇ. ನಾವೆಲ್ಲರೂ ಒಗ್ಗಟ್ಟಾಗಿ ಸಾಗೋಣ ಎಂಬ ಸಂದೇಶ ಸಾರಿದವರು ಎಂದರು.
ತಹಸೀಲ್ದಾರ್ ಆನಂದ್ ಕುಮಾರ್ ಮಾತನಾಡಿ, ಕನಕದಾಸರು ಕೀರ್ತನೆ, ವಚನಗಳ ಮೂಲಕ ಸಮಾಜದಲ್ಲಿನ ಅನೇಕ ಕೆಟ್ಟ ಪದ್ಧತಿಗಳನ್ನು ಖಂಡಿಸಿದರು. ಮತ್ತು ಸುಧಾರಣೆಗೆ ಶ್ರಮಿಸಿದರು ಎಂದು ತಿಳಿಸಿದರು.ಕನಕ ಬ್ಯಾಂಕ್ ಮಾಜಿ ಅಧ್ಯಕ್ಷರು ಹಾಗೂ ನಗರಸಭಾ ಸದಸ್ಯರಾದ ಎಸ್.ಎಲ್.ರಂಗನಾಥ್ ಮಾತನಾಡಿ, ಕುರುಬ ಸಮುದಾಯದ ಬಡವರಿಗೆ ಸಮುದಾಯದ ಅಧಿಕಾರಿಗಳು ಹೆಚ್ಚಿನ ಸಹಾಯ ಮಾಡಿದರೆ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಾ.ಪಂ. ಕಾರ್ಯನಿರ್ವಹಣ ಅಧಿಕಾರಿ ಹರೀಶ್, ಕನಕ ಬ್ಯಾಂಕ್ ಅಧ್ಯಕ್ಷ ಡಾ.ಮಂಜುನಾಥ್, ಮಾಜಿ ಅಧ್ಯಕ್ಷ ರಂಗನಾಥ್ ಎಸ್.ಕೆ.ದಾಸಪ್ಪ, ತಾಲೂಕು ಕುರುಬ ಸಮಾಜದ ಅಧ್ಯಕ್ಷ ನಟರಾಜ್ ಬರಗೂರು, ಉಪಾಧ್ಯಕ್ಷ ಆಶೋಕ್ ಜಿ, ಪ್ರಧಾನ ಕಾರ್ಯದರ್ಶಿ ರಮೇಶ್.ಜಿ, ನಗರಸಭಾ ಸದಸ್ಯರಾದ ಶಿವಶಂಕರಪ್ಪ, ತೇಜು ಭಾನುಪ್ರಕಾಶ್, ಸುಶೀಲ ವಿರೂಪಾಕ್ಷ, ವಿ.ಜಿ.ದೃವಕುಮಾರ್, ಮಾಜಿ ತಾ.ಪಂ. ಅಧ್ಯಕ್ಷೆ ಹಂಸವೇಣಿ ಶ್ರೀನಿವಾಸ್, ಕನಕ ಮಹಿಳಾ ಸಂಘದ ಅಧ್ಯಕ್ಷೆ ಲಕ್ಷ್ಮಿದೇವಿ ದಯಾನಂದ್, ಕನಕ ಬ್ಯಾಂಕ್ ನಿರ್ದೇಶಕ ಕಡೇಮನೆ ಎಸ್.ರವಿಕುಮಾರ್, ಕಸಬಾ ಕಂದಾಯ ನಿರೀಕ್ಷಕ ಶಿವಕುಮಾರ್, ಎಸ್.ಆರ್.ಹರೀಶ್, ಗೋಪಾಲ್ ಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.)
)
;Resize=(128,128))
;Resize=(128,128))
;Resize=(128,128))
;Resize=(128,128))