ಸಾರಾಂಶ
ಪಟ್ಟಣದ ಆಸರಕೇರಿಯ ಕನ್ನಡ ಭುವನೇಶ್ವರಿ ಸಂಘದಿಂದ ಏರ್ಪಡಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಮಾಲಕ ಗಣೇಶ ಹರಿಕಾಂತ ಉದ್ಘಾಟಿಸಿದರು.
ಕನ್ನಡಪ್ರಭ ವಾರ್ತೆ ಭಟ್ಕಳ
ಪಟ್ಟಣದ ಆಸರಕೇರಿಯ ಕನ್ನಡ ಭುವನೇಶ್ವರಿ ಸಂಘದಿಂದ ಏರ್ಪಡಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಯಮಿ ಹಾಗೂ ಮುರುಡೇಶ್ವರದ ನೇತ್ರಾಣಿ ಅಡ್ವೆಂಚರ್ ಮಾಲಕ ಗಣೇಶ ಹರಿಕಾಂತ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು, ಆಸರಕೇರಿಯ ಕನ್ನಡ ಭುವನೇಶ್ವರಿ ಸಂಘದವರು ಕಳೆದ 28 ವರ್ಷಗಳಿಂದ ರಾಜ್ಯೋತ್ಸವ ಆಚರಿಸಿಕೊಂಡು ಬರುತ್ತಿದ್ದಾರೆ. ಕನ್ನಡದ ಕಾರ್ಯಕ್ರಮಕ್ಕೆ ಇಲ್ಲಿನ ಯುವಕರೇ ಸತತ ಹಣವನ್ನು ಹೊಂದಿಸಿಕೊಂಡು ಅದ್ಧೂರಿ ಕಾರ್ಯಕ್ರಮವನ್ನು ನಡೆಸಿ ಇಡೀ ಜಿಲ್ಲೆಗೆ ಮಾದರಿಯಾಗಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ನಾಮಧಾರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ ಮಾತನಾಡಿ, ಕನ್ನಡವನ್ನು ಕೇವಲ ವರ್ಷದ ಒಂದು ದಿನ ಮಾತ್ರ ನೆನಪು ಮಾಡಿಕೊಳ್ಳದೇ ನಮ್ಮ ಉಸಿರು ಇರುವವರೆಗೂ ನಾವು ಕನ್ನಡ ಭಾಷೆಯ ಉಳಿವಿಗಾಗಿ ಹೋರಾಟ ಮಾಡಬೇಕಾಗಿದೆ ಎಂದರು.ಭಟ್ಕಳ ಅರ್ಭನ್ ಬ್ಯಾಂಕಿನ ನಿರ್ದೇಶಕ ಶ್ರೀಧರ್ ನಾಯ್ಕ ಮಾತನಾಡಿ, ಕನ್ನಡ ಭಾಷೆ ಉಳಿಸಿ ಬೆಳೆಸುವ ಪರಿಪಾಠ ಮೊದಲು ನಾವು ನಮ್ಮ ಮನೆಯಿಂದಲೇ ಆರಂಭಿಸಬೇಕು. ಈ ಭಾಗದ ಯುವಕರು ಹಲವು ವರ್ಷಗಳಿಂದ ಕನ್ನಡ ಭುವನೇಶ್ವರಿ ಸಂಘ ಕಟ್ಟಿಕೊಂಡು ಕನ್ನಡಕ್ಕೆ ಧಕ್ಕೆ ಬಂದಾಗ ಅನೇಕ ಹೋರಾಟದಲ್ಲಿ ಪಾಲ್ಗೊಂಡು ಕನ್ನಡ ಉಳಿಸುವ ಕಾರ್ಯಕದಲ್ಲಿ ತೊಡಗಿಕೊಂಡಿದ್ದಾರೆ. ಮುಂದೆಯೂ ನಾವೆಲ್ಲರೂ ಒಗ್ಗೂಡಿಕೊಂಡು ಕನ್ನಡದ ಉಳಿವಿಗಾಗಿ ಹೋರಾಟ ಮಾಡಬೇಕಾಗಿದೆ ಎಂದರು.
ಗುರುಮಠ ದೇವಸ್ಥಾನದ ಗುರು ಅಧ್ಯಕ್ಷ ಕೃಷ್ಣನಾಯ್ಕ ಮಾತನಾಡಿದರು. ಕನ್ನಡ ಭುವನೇಶ್ವರಿ ಸಂಘದ ಅಧ್ಯಕ್ಷ ಅಣ್ಣಪ್ಪ ನಾಯಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪುರಸಭಾ ಮಾಜಿ ಸದಸ್ಯ ವೆಂಕಟೇಶ್ ನಾಯ್ಕ, ಪ್ರಕಾಶ ನಾಯ್ಕ, ನಿವೃತ್ತ ಸೈನಿಕ ಶ್ರೀಕಾಂತ್ ನಾಯ್ಕ, ಪತ್ರಕರ್ತ ಮನಮೋಹನ್ ನಾಯ್ಕ, ಯುವಕ ಸಂಘದ ಅಧ್ಯಕ್ಷ ಶ್ರೀಧರ್ ನಾಯ್ಕ, ಪಾಂಡುರಂಗ ನಾಯ್ಕ, ಕನ್ನಡ ಭುವನೇಶ್ವರಿ ಸಂಘದ ಮಾಜಿ ಅಧ್ಯಕ್ಷ ರಮೇಶ ನಾಯ್ಕ, ಗುರುರಾಜ್ ಶೇಟ್, ರೂಪೇಶ್ ಮಹಾಲೆ, ವಿನಾಯಕ ಮಡಿವಾಳ, ಮಣಿ ಪೂಜಾರಿ, ಮಹೇಶ ನಾಯ್ಕ ಮುಂತಾದವರಿದ್ದರು.;Resize=(128,128))
;Resize=(128,128))
;Resize=(128,128))