ಕಾಪು: ‘ಕೊರಗರ ಕೂಡು ಕುಟುಂಬದ ಕಟ್ಟುಕಟ್ಟಲೆಗಳು-ಆರಾಧನೆ ಮತ್ತು ಆಚರಣೆ’ ಎಂಬ ಮಾರ್ಗದರ್ಶಕ ಪುಸ್ತಕವನ್ನು ಸೋಮವಾರ ಪಾಂಗಾಳ ಕೊರಗರ ದೈವ ಸಾನಿಧ್ಯದಲ್ಲಿ ಬಿಡುಗಡೆಗೊಳಿಸಲಾಯಿತು.

ಇಲ್ಲಿನ ಪಾಂಗಾಳ ಕೊರಗರ ಕೂಡು ಕುಟುಂಬದ ಹಿರಿಯ ಮಹಿಳೆಯರಾದ ಗುರ್ಬಿ ಮತ್ತು ಅಮಣಿ ಅವರು ಜಂಟಿಯಾಗಿ ಪುಸ್ತಕ ಬಿಡುಗಡೆಗೊಳಿಸಿದರು. ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಕೊರಗರ ಬಲೆಪಿನ ಗುರಿಕಾರ ಕುಡುಪ ಕೊರಗ ಅವರು, ಕೊರಗ ಸಮುದಾಯದಲ್ಲಿ ಇದೊಂದು ಹೊಸ ಪ್ರಯತ್ನವಾಗಿದ್ದು, ಇತರರಿಗೂ ಮಾದರಿಯಾಗಿದೆ ಎಂದರು.ಸಭೆಯಲ್ಲಿ ಪಾದೆಬೆಟ್ಟು ಬಲೆಪಿನ ಪ್ರತಿನಿಧಿ ಸೋಮಶೇಖರ್, ಮುಂಡ್ಕೂರು ಬಲೆಪಿನ ಗುರಿಕಾರ ಅಣ್ಣು ಸಾಲಿಯಾನ್, ಕುರ್ಕಾಲು ಬಲೆಪಿನ ಗುರಿಕಾರ ಸುರೇಶ್ ಕುಂದರ್ ಮಾತನಾಡಿದರು. ಸಚ್ಚೇರಿಪೇಟೆಯ ಕರ್ಣಾ ಸಾಲಿಯಾನ್, ಕಬ್ಯಾಡಿ ಬಲೆಪಿನ ಶಂಭು, ಪಾಂಗಾಳ ಕುಟುಂಬದ ಹಿರಿಯರಾದ ಕುಡ್ಡು ಕೊರಗ, ಗುರುವ ಮೂಡುಬೆಳ್ಳೆ, ಅಣ್ಣು ಕಡಂದಲೆ ಉಪಸ್ಥಿತರಿದ್ದರು. ಕುಟುಂಬದ ಗುರಿಕಾರ ವಸಂತ ಪಾಂಬೂರು ಅಧ್ಯಕ್ಷತೆ ವಹಿಸಿದ್ದರು. ಸೌಮ್ಯಾ ಮತ್ತು ತಂಡದವರು ಪ್ರಾರ್ಥನಾ ಗೀತೆ ಹಾಡಿದರು. ಅಣ್ಣು ಪಿಲಾರು ವಂದಿಸಿದರು. ಜ್ಯೋತಿ ಪಾಂಬೂರು ನಿರೂಪಿಸಿದರು.