ಕುಪ್ಪಾಳು ಶಾಲೆ ದುರಂತ ದುಃಖಕರ: ಶಾಸಕ ಆನಂದ್

| Published : Jun 20 2024, 01:07 AM IST

ಸಾರಾಂಶ

ಕಡೂರು, ನಿರ್ಲಕ್ಷ್ಯದಿಂದಾಗಿ ಕ್ಷೇತ್ರದ ಕುಪ್ಪಾಳು ಮೊರಾರ್ಜಿ ವಸತಿ ಶಾಲೆ ಬಾಲಕ ಆಕಾಶ್ ವಿದ್ಯುತ್ ತಗುಲಿ ಸಾವನ್ನಪ್ಪಿರುವುದು ದುಃಖದ ಸಂಗತಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ವಿದ್ಯುತ್ ತಗುಲಿ ಬಾಲಕನ ಸಾವು ದುಃಖದ ಸಂಗತಿ

ಕನ್ನಡಪ್ರಭ ವಾರ್ತೆ ಕಡೂರು

ನಿರ್ಲಕ್ಷ್ಯದಿಂದಾಗಿ ಕ್ಷೇತ್ರದ ಕುಪ್ಪಾಳು ಮೊರಾರ್ಜಿ ವಸತಿ ಶಾಲೆ ಬಾಲಕ ಆಕಾಶ್ ವಿದ್ಯುತ್ ತಗುಲಿ ಸಾವನ್ನಪ್ಪಿರುವುದು ದುಃಖದ ಸಂಗತಿ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.

ಪಟ್ಟಣದ ಶಾಸಕರ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ತಾವು ಶಾಲೆಗೆ ಭೇಟಿ ನೀಡಿದ್ದು ಶಾಲೆ ವಾರ್ಡ್‍ನ್ ಮತ್ತು ಮೆಸ್ಕಾಂ ನಿರ್ಲಕ್ಷ್ಯ ಬಾಲಕನ ಸಾವಿಗೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಮರದಲ್ಲಿ ವಿದ್ಯುತ್ ತಂತಿ ಹಾದು ಹೋಗಿರುವುದನ್ನು ಶಾಲೆ ಪ್ರಾಂಶುಪಾಲರು ಹಾಗೂ ವಾರ್ಡ್‍ನ್ ನೋಡಿಕೊಳ್ಳಬೇಕಾಗಿತ್ತು. ಜೊತೆಗೆ ಮೆಸ್ಕಾಂ ಲೈನ್ ಮ್ಯಾನ್‍ಗಳು ಸಹ ಭೇಟಿ ನೀಡಿ ಆಗಿಂದಾಗ್ಗೆ ಪರಿಶೀಲನೆ ನಡೆಸಿದ್ದರೆ ಸಾವು ಸಂಭವಿಸುತ್ತಿರಲಿಲ್ಲ ಇಲ್ಲಿ ಕರ್ತವ್ಯದ ನಿರ್ಲಕ್ಷ್ಯವೇ ಮೂಲ ಕಾರಣ ಎಂದರು.

ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಕೂಡಲೆ ವಸತಿ ನಿಲಯಗಳ ಒಳಗಿರುವ ವಿದ್ಯುತ್ ಕಂಬಗಳಿಗೆ ತಾಗಿರುವ ಮರಗಳ ರೆಂಬೆ, ಕೊಂಬೆ ಕತ್ತರಿಸಲು ಸೂಚನೆ ನೀಡಿದ್ದು, ಶಿಕ್ಷಕರು ಸಹ ಎಚ್ಚರಿಕೆಯಿಂದ ಮಕ್ಕಳ ಬಗ್ಗೆ ಹೆಚ್ಚಿನ ಒತ್ತು ನೀಡಬೇಕೆಂದು ಆದೇಶಿಸಿರುವುದಾಗಿ ತಿಳಿಸಿದರು.

ಕುಪ್ಪಾಳು ಶಾಲೆ ಆವರಣದಲ್ಲಿ ಯಗಟಿ ಮೊರಾರ್ಜಿ ವಸತಿ ಶಾಲೆ ನಡೆಯುತ್ತಿರುವುದರಿಂದ ಸಮಸ್ಯೆ ಹೆಚ್ಚಿದೆ ಯಗಟಿ ಶಾಲೆ ಸ್ಥಳಾಂತರಿಸಿದರೆ ಸಮಸ್ಯೆ ಕಡಿಮೆಯಾಗುತ್ತದೆ. ಸಂಬಂಧಿಸಿದ ಇಲಾಖೆಗೆ ಕ್ರಮ ಕೈ ಗೊಳ್ಳಲು ಸೂಚಿಸಿದ್ದು, ಕಡೂರು ಪಟ್ಟಣದಲ್ಲಿ ಯಗಟಿ ಶಾಲೆಗೆ ಬೇಕಾದಂತಹ ಬಾಡಿಗೆ ಕಟ್ಟಡ ಜಿಲ್ಲೆಯ ಯಾವುದೇ ಭಾಗದಲ್ಲಿ ಖಾಸಗಿ ಕಟ್ಟಡ ದೊರಕಿದರೆ ಕೂಡಲೆ ಬದಲಾವಣೆ ಮಾಡಿ ಯಗಟಿ ಶಾಲೆಯನ್ನು ಕುಪ್ಪಾಳು ಶಾಲೆಯಿಂದ ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡಿದ್ದೇನೆ ಎಂದು ನುಡಿದರು.ಫೋಟೊ ಕ್ಯಾಪ್ಷನ್‌:

ಕಡೂರು ತಾಲೂಕು ಮೊರಾರ್ಜಿ ವಸತಿ ಶಾಲೆಗೆ ಶಾಸಕ ಕೆ.ಎಸ್.ಆನಂದ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.