ತಾಲೂಕಿನ ನಿಟ್ಟೂರು ಹೋಬಳಿಯ ಸೋಮಲಾಪುರ ಕೆರೆಯಲ್ಲಿ ಕೆರೆಯ ಒಡ್ಡು ಅಗೆದು ಮಣ್ಣು ಸಾಗಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಕನ್ನಡಪ್ರಭ ವಾರ್ತೆ ಗುಬ್ಬಿ

ತಾಲೂಕಿನ ನಿಟ್ಟೂರು ಹೋಬಳಿಯ ಸೋಮಲಾಪುರ ಕೆರೆಯಲ್ಲಿ ಕೆರೆಯ ಒಡ್ಡು ಅಗೆದು ಮಣ್ಣು ಸಾಗಿಸುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿ ದಿನ ಸೋಮಲಾಪುರ ಕೆರೆಯಲ್ಲಿ ಮಣ್ಣು ಲೂಟಿ ಆಗುತ್ತಿದ್ದರೂ ಸಹ ಅಧಿಕಾರಿಗಳು ಯಾವುದೇ ಕ್ರಮ ತೆಗೆದುಕೊಳ್ಳದೆ ತಮಗೆ ಸಂಬಂಧವಿಲ್ಲವೆಂದು ಕಣ್ಣು ಮುಚ್ಚಿ ಕುಳಿತಿದ್ದಾರೆ. ಸೋಮಲಾಪುರ ಕೆರೆ ಕುಡಿಯುವ ನೀರಿನ ಕೆರೆಯಾಗಿದ್ದು ಹೇಮಾವತಿ ನೀರು ಹರಿಯುತ್ತದೆ. ಸುತ್ತಮುತ್ತಲಿನ ಹತ್ತಾರು ಹಳ್ಳಿಗಳಿಗೆ ಈ ಕೆರೆಯಿಂದ ನೀರು ಹೋಗುತ್ತದೆ. ಮಣ್ಣು ಲೂಟಿಯಿಂದ ಅಂತರ್ಜಲ ಬತ್ತಿ ಹೋಗುತ್ತಿದೆ. ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ತಡೆಯಬೇಕು. ಕೆರೆಯ ಮಣ್ಣು ತುಂಬಿಕೊಂಡು ಹೋಗುವ ಟ್ರ್ಯಾಕ್ಟರ್ ಗಳು ಗ್ರಾಮದ ರಸ್ತೆಗಳಲ್ಲಿ ಚಲಿಸುವಾಗ ರಸ್ತೆ ಹಾಳಾಗಿದೆ. ರಸ್ತೆಯ ಪಕ್ಕದಲ್ಲಿರುವ ಮನೆಗಳಿಗೆ ಧೂಳು ತುಂಬಿ ಆರೋಗ್ಯ ಕೆಡುವಂತ ಪರಿಸ್ಥಿತಿ ಬಂದಿದೆ ಹಾಗೂ ಓಡಾಡಲು ತೊಂದರೆಯಾಗಿದೆ ಈ ಬಗ್ಗೆ ಅಧಿಕಾರಿಗಳಿಗೆ ಗಮನ ತಂದರೂ ಸಹ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಇದೇ ರೀತಿ ಮಣ್ಣು ಸಾಗಾಣಿಕೆ ಮುಂದುವರೆದರೆ ಮಣ್ಣು ಹೊಡೆಯುವವರ ವಿರುದ್ಧ ಹಾಗೂ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೋಮಲಾಪುರದ ಗ್ರಾಮಸ್ಥರು ಬೃಹತ್ ಪ್ರತಿಭಟನೆ ನಡೆಸುವುದಾಗಿ ತಿಳಿಸಿದ್ದಾರೆ.