ಸಾರಾಂಶ
ಶನಿವಾರ ಕ್ಷೇತ್ರದ ಮಾಡಾಳು ಗ್ರಾಮದಲ್ಲಿ ₹ 2 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ
ಕನ್ನಡಪ್ರಭ ವಾರ್ತೆ, ಕಡೂರುಭದ್ರಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನದಲ್ಲಿ ಕಡಿಮೆ ಹಣ ಬಂದಿರುವ ಬಗ್ಗೆ ಕೋರ್ಟಿನ ಮೆಟ್ಟಿಲೇರಿದ್ದ ರೈತರ ಸಮಸ್ಯೆ ಬಗೆಹರಿವ ಮೂಲಕ ಎಕರೆಗೆ ₹42 ಲಕ್ಷ ರು. ಸಿಗಲಿದೆ ಎಂದು ಶಾಸಕ ಕೆ.ಎಸ್. ಆನಂದ್ ತಿಳಿಸಿದರು.
ಶನಿವಾರ ಕ್ಷೇತ್ರದ ಮಾಡಾಳು ಗ್ರಾಮದಲ್ಲಿ ₹ 2 ಕೋಟಿ ವೆಚ್ಚದಲ್ಲಿ ಜೋಡಿಲಿಂಗದಹಳ್ಳಿ, ಬಂಜೇನಹಳ್ಳಿ, ಚೀಲನಹಳ್ಳಿ ಮತಿಘಟ್ಟ, ಮಾಡಾಳು, ಸಾದರಹಳ್ಳಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಭದ್ರಾ ಮೇಲ್ದಂಡೆ ಯೋಜನೆ ಭೂ ಸ್ವಾಧೀನದಲ್ಲಿ ರೈತರಿಗೆ ಕಡಿಮೆ ಹಣ ಬಂದಿದೆ ಎಂದು ರೈತರು ಕೋರ್ಟಿನ ಮೆಟ್ಟಿಲೇರಿದ್ದರು. ಈ ಕುರಿತು ಕಳೆದ ಗುರುವಾರ ಒಂದು ತಂಡ ಬಂದು ಪರಿಶೀಲನೆ ನಡೆಸಿ ಹೋಗಿದೆ. ಅದರಂತೆ ಕೋರ್ಟಿಗೆ ಹೋಗಿದ್ದ ತಾಲೂಕಿನ ವೈ.ಮಲ್ಲಾಪುರ, ಅಣ್ಣೀಗೆರೆ ಹುಲೆಗೊಂದಿ, ಮತಿಘಟ್ಟ, ಯಳಗೊಂಡನಹಳ್ಳಿ ರೈತರ ಪರವಾಗಿ ತೀರ್ಪು ಬಂದಿದೆ.ಆದರೆ ವಿಸ್ತೃತ ವರದಿ ಆಗಿಲ್ಲದ ಕಾರಣ ಕಡತ ಮುಂದಿನ ಕ್ಯಾಬಿನೆಟ್ ಮುಂದೆ ಬರಲಿದೆ. ಭೂ ಸ್ವಾಧೀನದ ಸಮಸ್ಯೆ ಎಲ್ಲೆಡೆ ಮುಗಿದಿದ್ದು ಈ ಭಾಗದ 221ಎಕರೆ ಸಮಸ್ಯೆ ಕುರಿತು ತಾವುಗಳು ಮಾತನಾಡಿದ್ದು, 1ಎಕರೆಗೆ ₹42 ಲಕ್ಷ ರು.ನಂತೆ ಪರಿಹಾರದ ಹಣ 1 ತಿಂಗಳಲ್ಲಿ ದೊರೆವ ಮೂಲಕ ಸಮಸ್ಯೆ ಬಗೆಹರಿಯಲಿದೆ ಎಂದರು. ಮಾಡಾಳು ಗ್ರಾಮ ನನ್ನ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದ ಗ್ರಾಮ. ಅಂದು 47 ಸಾವಿರ ಮತ ಪಡೆದು ಸೋತರೂ ಕೂಡ ಮಧ್ಯರಾತ್ರಿಯಲ್ಲಿ ತಮಗೆ ನೀಡಿದ ಅಭಿಮಾನ ಮರೆಯಲು ಸಾಧ್ಯವಿಲ್ಲ. ಜಾತ್ಯಾತೀತವಾಗಿ ಮತ ನೀಡಿ ಗೆಲ್ಲಿಸಿದ್ದೀರಿ . ಕೋಟಿ ಕೋಟಿ ರು.ಗಳ ಚುನಾವಣೆ ನಡೆದರೂ ಕೂಡ ನನಗೆ ಅತಿ ಹೆಚ್ಚು ಮತ ನೀಡಿ ಗೆಲ್ಲಿಸಿದ್ದೀರಿ ಎಂದರು.
ನಾನು ನೀಡಿದ ಭರವಸೆಯಂತೆ ಈಗಾಗಲೇ ₹2 ಕೋಟಿ ರು.ನ ರಸ್ತೆ ನಿರ್ಮಾಣದ ಕಾಮಗಾರಿ ನಡೆಯುತ್ತಿದೆ. ಇದೀಗ ಉಳಿದ ರಸ್ತೆಗೆ ಚಾಲನೆ ನೀಡಿ, ರಾ.ಹೆ. ಯಿಂದ ಮಾಡಾಳಿಗೆ ತೆರಳುವ ರಸ್ತೆಗೆ ಒಟ್ಟು ₹4 ಕೋಟಿ ವೆಚ್ಚ ಆಗಿದೆ ಎಂದರು. ಗ್ರಾಮದ ಶಾಲೆ ದುರಸ್ತಿಗೆ, ಭವನ ನಿರ್ಮಾಣಕ್ಕೆ, ವಿವಿಧ ದೇವಾಲಯಗಳಿಗೆ ಅನುದಾನ ನೀಡಿದ್ದೇನೆ. ಇನ್ನು ಗ್ರಾಮದ ಸೇವಾಲಾಲ್ ದೇವಾಲಯ ನಿರ್ಮಾಣಕ್ಕೆ ಸರಕಾರದಿಂದ ಮತ್ತು ವೈಯಕ್ತಿಕವಾಗಿ ಅನುದಾನ ಕೊಡಿಸುತ್ತೇನೆ. ಗ್ರಾಮದ ಒಳಗೆ ಕಾಂಕ್ರೀಟ್ ರಸ್ತೆಗಳನ್ನು ಮಾಡಿಸುತ್ತೇನೆ ಎಂದರು. ಗ್ರಾಮದಲ್ಲಿರುವ 22 ಎಕರೆ ಜಾಗದಲ್ಲಿ ಶಾಲಾ ಆಟದ ಮೈದಾನಕ್ಕೆ 5ಎಕರೆ, ನಿವೇಶನಕ್ಕಾಗಿ 4 ಎಕರೆ ನೀಡುತ್ತಿದ್ದು ಗ್ರಾಮದವರು ನಿವೇಶನ ರಹಿತರ ಪಟ್ಟಿಮಾಡಿ ನೀಡಿದರೆ ಸರಕಾರಕ್ಕೆ ಕಳುಹಿಸಿ ಅನುಮೋದನೆ ಪಡೆಯಲಾಗುವುದು. ಎಂದು ತಿಳಿಸಿದರು. ಜನರಿಗೆ ಅನ್ನ, ನೀರು, ಸೂರು, ವಿದ್ಯೆ ಬಹು ಮುಖ್ಯವಾಗಿದ್ದು ಇದನ್ನು ತಾವು ಒದಗಿಸಲು ಆದ್ಯತೆ ನೀಡುತ್ತೇನೆ. ನಮ್ಮ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳಿಂದ ವರ್ಷಕ್ಕೆ ಒಬ್ಬರಿಗೆ ₹64 ಸಾವಿರ ರು. ಸಿಗಲಿದ್ದು, ಇದನ್ನು ಬಿಜೆಪಿ, ಜೆಡಿಎಸ್ ನವರು ಪಡೆದಿಲ್ಲವೆ ಎಂದು ಪ್ರಶ್ನಿಸಿ ವಿರೋಧ ಪಕ್ಷ ದವರ ಟೀಕೆಗೆ ಉತ್ತರಿಸುವ ಅಗತ್ಯವಿಲ್ಲ. ನೀವು ನೀಡಿದ ಅಧಿಕಾರದಿಂದ ಶಾಸಕನಾಗಿದ್ದು ನಾನು ನಿಮ್ಮಸೇವಕ ಎಂಬುದನ್ನು ಮರೆಯುವುದಿಲ್ಲ ಎಂದರು. ಗ್ರಾಮದ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ ಕೊಡಿ ಎಂದ ಆನಂದ್, ಎಲ್ಲ ವರ್ಗಗಳಿಗೂ ಆದ್ಯತೆ ನೀಡುತ್ತಿದ್ದು. ನೀಡಿರುವ ಬೇಡಿಕೆಯಂತೆ ಕೆಲಸ ಮಾಡುತ್ತೇನೆ. ಬರುವ ಜನವರಿಯೊಳಗೆ ಗೆದ್ಲೆಹಳ್ಳಿ ಬಳಿ ನಿರ್ಮಾಣ ಗೊಳ್ಳುತ್ತಿರುವ ಗಾರ್ಮೆಂಟಿನಲ್ಲಿ 6 ಸಾವಿರ ಮಹಿಳೆಯರಿಗೆ ಕೆಲಸ ದೊರಕಲಿದೆ ಎಂದು ಹೇಳಿದರು. ಪಿಕಾರ್ಡ್ ಬ್ಯಾಂಕಿನ ಮಾಜಿ ಅಧ್ಯಕ್ಷ ಡಿ.ಎಸ್. ಉಮೇಶ್ ಮಾತನಾಡಿ, ಜಾತ್ಯತೀತ ಶಾಸಕರಾಗಿ ಹೊರಹೊಮ್ಮಿರುವ ನಮ್ಣ ನಾಯಕ ಕೆ. ಎಸ್. ಆನಂದ್ ಜನ ಸಾಮಾನ್ಯರ ಸಮಸ್ಯೆ ಗಳಿಗೆ ಸ್ಪಂದಿಸುತ್ತಿದ್ದು ಕೇವಲ 2 ವರ್ಷದ ಅವಧಿಯಲ್ಲಿ ಕ್ಷೇತ್ರದ ಜನರ ಮತ್ತು ಗ್ರಾಮಗಳ ಅಭಿವೃದ್ದಿಗೆ ಕಂಕಣ ತೊಟ್ಟು ದುಡಿಯುತ್ತಿದ್ದಾರೆ ಎಂದರು. ಗ್ರಾಪಂ ಉಪಾಧ್ಯಕ್ಷ ನಾಗೇಂದ್ರ, ಗ್ರಾಮದ ಜನರಿಗೆ ನಿವೇಶನ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು. ಮುಖಂಡರಾದ ಗ್ರಾಪಂ ಉಪಾಧ್ಯಕ್ಷ ನಾಗೇಂದ್ರಪ್ಪ, ಗಂಗಾನಾಯ್ಕ, ಮಹೇಶ್ವರಪ್ಪ,ಗಂಗಾಧರ್, ಗೋವಿಂದನಾಯ್ಕ, ಹೊಸೂರು ಕುಮಾರ್, ತಿಮ್ಮಾನಾಯ್ಕ ರತ್ನಾಬಾಯಿ, ನಮಿತ್, ಎಚ್.ಜಿ.ಪ್ರಭು, ಮಂಜುನಾಥ್, ಪ್ರಕಾಶ್, ಜಯಪ್ಪ ಚೇತನ್, ಪ್ರಸಾದ್, ತಿಮ್ಮಾನಾಯ್ಕ, ಮಲ್ಲಿದೇವಿಹಳ್ಳಿ ಗ್ರಾ. ಪಂ.ನ ಪ್ರಕಾಶ್ ಮತ್ತಿತರರು ಇದ್ದರು.9ಕೆಕೆಡಿಯು1.
ಕಡೂರು ವಿಧಾನಸಭಾ ಕ್ಷೇತ್ರದ ಮಾಡಾಳು ಗ್ರಾಮದಲ್ಲಿ ಡಾಂಬರ್ ರಸ್ತೆ ಕಾಮಗಾರಿಗೆ ಶಾಸಕ ಕೆ.ಎಸ್. ಆನಂದ್ ಚಾಲನೆ ನೀಡಿದರು.