ಕೆಎಂಸಿ ಆಸ್ಪತ್ರೆ ಮಂಗಳೂರು ವತಿಯಿಂದ ನಗರದ ಡಾ.ಟಿಎಂಎ ಪೈ ಅಂತಾರಾಷ್ಟ್ರೀಯ ಕನ್ವೆನ್ಶನ್‌ ಸೆಂಟರ್‌ನಲ್ಲಿ ಡಾ. ಸುದರ್ಶನ್‌ ಬಲ್ಲಾಳ್‌ ಉಪನ್ಯಾಸ- 2025 ಕಾರ್ಯಕ್ರಮ ನಡೆಯಿತು.

ಮಂಗಳೂರು: ಕೆಎಂಸಿ ಆಸ್ಪತ್ರೆ ಮಂಗಳೂರು ವತಿಯಿಂದ ನಗರದ ಡಾ.ಟಿಎಂಎ ಪೈ ಅಂತಾರಾಷ್ಟ್ರೀಯ ಕನ್ವೆನ್ಶನ್‌ ಸೆಂಟರ್‌ನಲ್ಲಿ ಡಾ. ಸುದರ್ಶನ್‌ ಬಲ್ಲಾಳ್‌ ಉಪನ್ಯಾಸ- 2025 ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮದಲ್ಲಿ ಮಾತನಾಡಿದ ಇನ್ಫೋಸಿಸ್‌ ಸಂಸ್ಥಾಪಕ ಎನ್‌.ಆರ್‌. ನಾರಾಯಣ ಮೂರ್ತಿ, ಡಾ.ಬಲ್ಲಾಳ್‌ ಅವರು ವೃತ್ತಿಪರತೆಯ ಉತ್ಕೃಷ್ಟತೆ ಮತ್ತು ಮನುಷ್ಯ ಮೌಲ್ಯದ ಮಿಶ್ರಣ ಎಂದು ಶ್ಲಾಘಿಸಿದರು. ಅವರ ನಾಯಕತ್ವವು ಮಾನವೀಯತೆ, ಬದ್ಧತೆ ಮತ್ತು ಸೇವಾ ಮನೋಭಾವದ ಮೇಲೆ ನಿಂತಿದೆ ಎಂದು ಹೇಳಿದರು.ಡಾ. ಸುದರ್ಶನ್‌ ಬಲ್ಲಾಳ್‌ ಮಾತನಾಡಿ, ಈ ಉಪನ್ಯಾಸ ಸರಣಿಯು ಕಲಿಕೆ ಮತ್ತು ವಿಚಾರ ವಿನಿಮಯಕ್ಕೆ ವೇದಿಕೆಯಾಗಿ ಮುಂದುವರಿಯುತ್ತಿರುವುದು ಸಂತೋಷಕರ ಎಂದರು.ಕಾರ್ಯಕ್ರಮವನ್ನು ಕೆಎಂಸಿ ಮಂಗಳೂರಿನ ನೆಫ್ರಾಲಾಜಿ ವಿಭಾಗ ಆಯೋಜಿಸಿದ್ದು ಅನೇಕ ಮುಖಂಡರು, ಆರೋಗ್ಯ ಕ್ಷೇತ್ರದ ತಜ್ಞರು, ಶೈಕ್ಷಣಿಕ ಮುಖ್ಯಸ್ಥರು, ಮಣಿಪಾಲ್ ಅಕಾಡೆಮಿ ಉನ್ನತ ಶಿಕ್ಷಣದ ಸದಸ್ಯರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ “ವೈದ್ಯಕೀಯ ವೃತ್ತಿಪರತೆಯ ಮೇಲೆ ಡಾ. ಬಲ್ಲಾಳ್‌ ಅವರ ಪ್ರಭಾವ”ದ ಕುರಿತು ಚರ್ಚೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಉನ್ನತ ಶಿಕ್ಷಣದ ಸಹ ಕುಲಪತಿ ಡಾ.ಎಚ್‌ಎಸ್‌ ಬಲ್ಲಾಳ್‌ ವಹಿಸಿದ್ದರು. ಮಂಗಳೂರು ಕಸ್ತೂರ್ಬಾ ಮೆಡಿಕಲ್‌ ಕಾಲೇಜಿನ ಡೀನ್‌ ಡಾ.ಬಿ. ಉನ್ನಿಕೃಷ್ಣನ್‌, ನೆಫ್ರಾಲಾಜಿ ವಿಭಾಗದ ಪ್ರೊಫೆಸರ್ ಡಾ. ಸುಶಾಂತ್‌ ಕುಮಾರ್‌, ನೆಫ್ರಾಲಾಜಿ ವಿಭಾಗದ ಮುಖ್ಯಸ್ಥ ಡಾ. ಮಯೂರ್‌ ವಿ. ಪ್ರಭು ಮತ್ತು ವಿಭಾಗದ ಫ್ರೊಫೆಸರ್‌ ಡಾ. ಅಶೋಕ್‌ ಭಟ್‌ ಇದ್ದರು.

ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾಹೆಯ ಉಪ ಕುಲಪತಿ ಲೆಫ್ಟಿನೆಂಟ್‌ ಜನರಲ್‌ ಡಾ.ಎಂಡಿ ವೆಂಕಟೇಶ್‌ ಇದ್ದರು. ಮಾಹೆಯ ಹೆಲ್ತ್‌ ಸೈನ್ಸ್‌ನ ಸಹ ಉಪ ಕುಲಪತಿ ಡಾ. ಶರತ್‌ ಕೆ. ರಾವ್‌, ಮಾಹೆ ಮಂಗಳೂರು ಕ್ಯಾಂಪಸ್‌ನ ಸಹ ಉಪ ಕುಲಪತಿ ಡಾ. ದಿಲೀಪ್‌ ಜಿ. ನಾಯ್ಕ್‌ , ಎಂಎಚ್‌ಇಪಿಎಲ್‌ ಕ್ರಿಟಿಕಲ್‌ ಕೇರ್‌ ಸರ್ವಿಸ್‌ ಚೇರ್ಮನ್‌ ಡಾ. ಸುನಿಲ್‌ ಕಾರಂತ್‌ ಮತ್ತು ಮಣಿಪಾಲ್‌ ಅಕಾಡೆಮಿ ಉನ್ನತ ಶಿಕ್ಷಣದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ. ಆನಂದ ವೇಣುಗೋಪಾಲ್‌ ಇದ್ದರು.

----------

ಫೋಟೊ

11ಕೆಎಂಸಿ