ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ಪುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ತಾಲೂಕಿನ ಗರ್ವಾಲೆ ಗ್ರಾಮದಲ್ಲಿ ಪುತ್ತರಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ ಎಂದು ಗ್ರಾಮದ ಅಧ್ಯಕ್ಷ ಆರುಡ ಅಪ್ಪಾಜಿ ತಿಳಿಸಿದ್ದಾರೆ.ಗ್ರಾಮದ ಅಂಬಲದಲ್ಲಿ ತಕ್ಕ ಮುಖ್ಯಸ್ಥರು ಹಾಗೂ ಗ್ರಾಮಸ್ಥರು ಸೇರಿ ಕೆಂಗನೇರಿ ಮಂದ್ ಬಾಣೆಯಲ್ಲಿ ಕೋಲ್ ಮಂದ್ ಆಚರಿಸಿದರು. ನಂತರ ಹಾಲುಮರದ ಕೆಳಗೆ ಗ್ರಾಮಸ್ಥರು ಚಿತ್ತಮರದ ಕೆಳಗೆ ಇಗ್ಗುತಪ್ಪ ದೇವರಿಗೆ ಪೂಜೆ ಸಲ್ಲಿಸಿ ಅಕ್ಕಿ ಹಾಕಿ ಪುತ್ತರಿ ಕೋಲು ಹಾಗೂ ದುಡಿಯನ್ನಿಟ್ಟು ಪೂಜಾ ಕಾರ್ಯಕ್ರಮ ನಡೆಸಿದರು.ಮೂರು ದಿನಗಳ ಕಾರ್ಯಕ್ರಮದಲ್ಲಿ ಕೊತ್ತನಮಟ್ಟೆ ಕೋಲು ಮಂದೆ ಆಚರಣೆಯನ್ನು ಕೋಲುಮಂದ್ ಬಾಣೆಯಲ್ಲಿ ಶುಕ್ರವಾರ ನಡೆಸಲಾಯಿತು.ಗ್ರಾಮದ ಅಧ್ಯಕ್ಷ ಆರುಡ ಅಪ್ಪಾಜಿ, ಊರಿನ ಮೂರು ದೇವರ ತಕ್ಕ ಮುಖ್ಯಸ್ಥರಾದ ಟಿ.ಎನ್. ಈರಪ್ಪ, ಪಾಸುರ ಪ್ರಕಾಶ್, ಸೋಮಯ್ಯ, ಆರುಡ ರಾಜಪ್ಪ, ಗೀಜಿಗಂಡ ಲೋಕೇಶ್ ಹಾಗೂ ಗ್ರಾಮಸ್ಥರು ಇದ್ದರು.