ಡಂಬಳ: ಮನುಷ್ಯ ಕೇವಲ ಐಹಿಕ ಸುಖ ಸಂಪತ್ತಿಗಿಂತ ತಾನು ಉತ್ತಮವಾಗಿ ಬದುಕುವುದರ ಜತೆಗೆ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವ ಗುಣ ಬೆಳೆಸಿಕೊಳ್ಳಬೇಕು. ಜೀವನ ಶಾಶ್ವತವಲ್ಲ, ಬದುಕಿದ್ದಾಗ ಮಾಡಿದ ಸೇವೆ ಸಾರ್ಥಕವಾದದು ಎಂದು ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು ತಿಳಿಸಿದರು.
ಗ್ರಾಮದಲ್ಲಿ ಸೋಮವಾರ ಸಂಜೆ ವೀರಶೈವ ಲಿಂಗಾಯತ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ನಡೆದ 2ನೇ ದಿನದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಜಂಗಮ ವಟುಗಳ ಲಿಂಗದೀಕ್ಷಾ ಕಾರ್ಯಕ್ರಮ ಶ್ಲಾಘನೀಯ. ಇತ್ತೀಚೆಗೆ ಮಠಮಾನ್ಯಗಳ ಅಸ್ತಿತ್ವ ಕಡಿಮೆಯಾಗುತ್ತಿದೆ. ಸಾವಿರಾರು ಮಠಗಳು ಅವನತಿ ಸ್ಥಿತಿ ತಲುಪಿವೆ ಎಂದರು.ಭಗವಂತ ಮನುಷ್ಯ ಹುಟ್ಟಲು 9 ತಿಂಗಳ ನಿರ್ದಿಷ್ಟ ಅವಧಿ ಗೊತ್ತುಪಡಿಸಿರುತ್ತಾನೆ. ಆದರೆ ಸಾವಿಗೆ ನಿರ್ದಿಷ್ಟ ಅವಧಿ ಇರುವುದಿಲ್ಲ. ಹೀಗಾಗಿ ಬದುಕಿರುವ ಸಮಯದಲ್ಲಿಯೇ ದೇವರ ಸ್ಮರಣೆ ಸಮಾಜಕ್ಕೆ ಉಪಕಾರ, ನೊಂದವರ ಕಣ್ಣೀರು ಒರೆಸುವ ಕೆಲಸದಲ್ಲಿ ತೊಡಗಬೇಕು ಎಂದರು.
ಹಿರೇವಡ್ಡಟ್ಟಿ ವೀರೇಶ ಶಿವಾಚಾರ್ಯ ಶ್ರೀ, ಬೆಂಗಳೂರು ಅಕ್ಷಯ ಸೇವಾ ಫೌಂಡೇಶನ್‌ನ ಎಸ್.ಎಸ್. ಹಿರೇಮಠ, ಚಿತ್ರನಟ ಶಿವಕುಮಾರ ಆರಾಧ್ಯ, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಇಟಗಿ, ನ್ಯಾಯವಾದಿ ಶಿವು ನಾಡಗೌಡ್ರ ಇತರರು ಮಾತನಾಡಿದರು.ಸನ್ಮಾನಿತರ ಪರವಾಗಿ ಚನ್ನಪ್ಪ ಗಣಪ್ಪನವರ ಮಾತನಾಡಿದರು. ಜಾನಪದ ಕಲಾವಿದರಾದ ಹುಲಗಪ್ಪ ಜೊಂಡಿ, ಗವಿಸಿದ್ದಯ್ಯ ಹಳ್ಳಿಕೇರಿಮಠ, ಕುಮಾರ ಗೌಡಣ್ಣವರ, ಗುಡದಪ್ಪ ತಳಗೇರಿ ನಿಂಗಪ್ಪ ಗುಡ್ಡದ ತಂಡದವರಿಂದ ಸಾಂಸ್ಕೃತಿಕ ಸಂಗೀತ ಕಾರ್ಯಕ್ರಮಗಳು ಜರುಗಿದವು.ಕಾರ್ಯಕ್ರಮದಲ್ಲಿ ಧಾರವಾಡ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಎಸ್ ಪಾಟೀಲ, ಸಿದ್ದಪ್ಪ ನಂಜಪ್ಪನವರ, ಮಂಜಯ್ಯಸ್ವಾಮಿ ಅರವಟಗಿಮಠ, ಯಂಕಣ್ಣ ಗಡಗಿ, ವಿ.ಜೆ. ಹಿರೇಮಠ, ಮಹೇಶ ಗಡಗಿ, ಬಸವರಡ್ಡಿ ಬಂಡಿಹಾಳ, ಉಮೇಶ ಅಂಕದ, ನಾಗರಾಜ ಕಾಟ್ರಳ್ಳಿ, ಸಿದ್ದಲಿಂಗಯ್ಯ ಸ್ಥಾವರಮಠ, ಸೋಮನಾಥ ಹೂಗಾರ, ಗವಿಸಿದ್ದಪ್ಪ ಹಳ್ಳಾಕಾರ, ಮಲ್ಲಪ್ಪ ರೇವಡಿ, ಬಸವರಾಜ ಗಾಣಿಗೇರ, ಅಶೋಕ ಹಡಪದ, ಬಸವರಾಜ ಗಂಗಾವತಿ, ಹಾಲಯ್ಯ ಹಿರೇಮಠ, ಮಲ್ಲಣ್ಣ ಪ್ಯಾಟಿ, ಮುತ್ತು ಹಿರೇಮಠ, ಮುತ್ತು ಕೊಂತಿಕಲ್ ಇತರರು ಇದ್ದರು. ಮಂಜುನಾಥ ಬಿಸನಳ್ಳಿ ನಿರೂಪಿಸಿದರು.