ಕನ್ನಡಪ್ರಭ ವಾರ್ತೆ ಹೊನ್ನಾವರ

ಶಿಕ್ಷಣದ ಬಗ್ಗೆ ಅಭಿಮಾನ ಪ್ರತಿಯೊಬ್ಬ ಸಾರ್ವಜನಿಕರಲ್ಲಿ ಮೂಡಿದಾಗ ಮಾತ್ರ ಸರ್ಕಾರಿ ಶಾಲೆಗಳು ಉನ್ನತ ಮಟ್ಟಕ್ಕೆ ತಲುಪಲಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಗುಣಗುಣಿ ರಾಯಲಕೇರಿಯ 125ನೇ ವರ್ಷದ ರಜತ ಶತಮಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸರ್ಕಾರಿ ಶಾಲೆಯ ಗುಣಮಟ್ಟ ಸುಧಾರಿಸಲು ಶಿಕ್ಷಣ ಇಲಾಖೆ ಸಹಕಾರ ನೀಡುತ್ತಿದೆ. ಸರ್ಕಾರವು ಕೂಡಾ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಹಲವು ಬದಲಾವಣೆ ತರುತ್ತಿದೆ. ದಿ.ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದಾಗ ಮೊದಲು ಸಮವಸ್ತ್ರ ನೀಡಿದರು. ಆ ನಂತರ ಬಿಸಿಯೂಟ, ಪಠ್ಯ ಪುಸ್ತಕ ನೀಡುವ ಮೂಲಕ ಹಲವು ಸೌಲಭ್ಯ ಸರ್ಕಾರ ನೀಡುತ್ತಾ ಬಂದಿದೆ. ಪಾಲಕರಾದವರು ಮಕ್ಕಳನ್ನು ಶಾಲೆಗೆ ಕಲಿಸುವುದೇ ದೊಡ್ಡ ಜವಾಬ್ದಾರಿ ಆಗಿದೆ ಅದನ್ನು ನಾವೆಲ್ಲರೂ ಸರಿಯಾಗಿ ನಿಭಾಯಿಸೋಣ ಎಂದು ಸಲಹೆ ನೀಡಿದರು.

ಬಾಲ ಬೆಳಕು ಹಸ್ತಪತ್ರಿಕೆ ಬಿಡುಗಡೆಗೊಳಿಸಿ ತಾಪಂ ಆಡಳಿತಾಧಿಕಾರಿ ಎನ್.ಆರ್. ಹೆಗಡೆ ಮಾತನಾಡಿ, ರಾಜ್ಯ ಶಿಕ್ಷಣ ನೀತಿ ಜಾರಿಯಲ್ಲಿದ್ದು, ದ್ವಿಭಾಷಾ ನೀತಿ ಅನುಷ್ಠಾನಕ್ಕೆ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಾ ಬಂದಿದೆ.‌ ನಮ್ಮ ರಾಜ್ಯದ 15 ಜಿಲ್ಲೆಯಲ್ಲಿ ಮುಂದಿನ ಜೂನ್ ತಿಂಗಳಿನಿಂದ ಕನ್ನಡ ಮತ್ತು ಆಂಗ್ಲ ಮಾಧ್ಯಮ ಎರಡು ಶಿಕ್ಷಣ ನೀಡುತ್ತಿದೆ. 120ಕ್ಕಿಂತ ಹೆಚ್ಚು ಸೌಲಭ್ಯ ಸರ್ಕಾರಿ ಶಾಲೆಗಳಿಗೆ ಸರ್ಕಾರ ನೀಡುತ್ತಿದೆ. ಬದುಕಿಗಾಗಿ ಶಿಕ್ಷಣವನ್ನು ಸರ್ಕಾರಿ ಶಾಲೆಗಳು ನೀಡುತ್ತಿದೆ ಎಂದರು.


ಬಿಇಒ ವಿನಾಯಕ ಅವಧಾನಿ ಮಾತನಾಡಿದರು.ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಶಿಕ್ಷಕರನ್ನು, ಸ್ಥಳದಾನಿಗಳನ್ನು ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಶತಮಾನೋತ್ಸವ ಸಮಿತಿ ಗೌರವಾಧ್ಯಕ್ಷ ದೇವಿದಾಸ ಮಡಿವಾಳ, ಕ್ಷೇತ್ರ ಸಮನ್ವಯಾಧಿಕಾರಿ ಜಯಶ್ರೀ ನಾಯ್ಕ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಜಿ. ನಾಯ್ಕ, ಅಕ್ಷರದಾಸೋಹ ಸಹಾಯಕ ನಿರ್ದೆಶಕ ಸಹನಾಬಾನು ಪಠಾಣ ಮಾತನಾಡಿದರು.

ವೇದಿಕೆಯಲ್ಲಿ ಧರ್ಮದರ್ಶಿ ರಾಘವೇಂದ್ರ ಭಟ್, ರಜತ ಎಸ್.ಡಿ.ಎಂ.ಸಿ ಅಧ್ಯಕ್ಷ ಪದ್ಮಾವತಿ ನಾಯ್ಕ, ಸಿ.ಆರ್.ಪಿ ಪ್ರಕಾಶ ಶೇಟ್, ಸಮಿತಿಯ ಪದಾಧಿಕಾರಿಗಳಾದ ಕುಮಾರ ನಾಯ್ಕ, ಸುರೇಶ ಮೊಗೇರ, ನಾರಾಯಣ ನಾಯ್ಕ, ರವಿ ನಾಯ್ಕ, ರಾಘವೇಂದ್ರ ಹೊನ್ನಾವರ, ರತ್ನಾಕರ ನಾಯ್ಕ, ಶ್ರೀಪಾದ ನಾಯ್ಕ, ಮೋಹನ ನಾಯ್ಕ, ಯಶವಂತ ದಿವಾಕರ, ಮಹೇಶ ಕಲ್ಯಾಣಪುರ, ಪ್ರಭಾಕರ ಮಾಸ್ತಿಕಟ್ಟೆ, ಬೀರು ಗೌಡ, ರಾಜೇಶ ನಾಯ್ಕ ಉಪಸ್ಥಿತರಿದ್ದರು.

ರಜತ ಶತಮಾನೋತ್ಸವ ಸಮಿತಿ ಅಧ್ಯಕ್ಷ ನೀಲಕಂಠ ನಾಯ್ಕ ಸ್ವಾಗತಿಸಿದರು. ರವಿ ನಾಯ್ಕ ರಾಯಲಕೇರಿ ವಂದಿಸಿದರು. ಶಾಲಾ ಮುಖ್ಯ ಶಿಕ್ಷಕಿ ಮಮತಾ ಪಟಗಾರ ವರದಿ ವಾಚಿಸಿದರು. ಯುವಜನಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಭಾರತಿ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು.

ಸಭಾ ಕಾರ್ಯಕ್ರಮದ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ನಂತರ ತಾಂಡವ ನೃತ್ಯ ಕಲಾ ತಂಡ ಇವರಿಂದ ಸಾಂಸ್ಕ್ರತಿಕ ಕಾರ್ಯಕ್ರಮ ಮುಂಜಾನೆ ಶಾರದಾ ಪೂಜೆ ಜರುಗಿತು.