ಸಾರಾಂಶ
ಹೊಸಕೋಟೆ: ಮನುಷ್ಯ ವ್ಯವಹಾರಿಕವಾಗಿ ಯಾವುದೇ ಭಾಷೆಯನ್ನು ಬಳಸಿದರೂ ನಿತ್ಯ ಜೀವನದಲ್ಲಿ ಮಾತೃಭಾಷೆ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಗ್ರೀನ್ ಈಡನ್ ಪಬ್ಲಿಕ್ ಶಾಲೆ ಸಂಸ್ಥಾಪಕ ಪ್ರಾಂಶುಪಾಲೆ ಡಾ.ವೇದವತಿ ದಿನೇಶ್ ತಿಳಿಸಿದರು.
ಹೊಸಕೋಟೆ: ಮನುಷ್ಯ ವ್ಯವಹಾರಿಕವಾಗಿ ಯಾವುದೇ ಭಾಷೆಯನ್ನು ಬಳಸಿದರೂ ನಿತ್ಯ ಜೀವನದಲ್ಲಿ ಮಾತೃಭಾಷೆ ಕನ್ನಡಕ್ಕೆ ಆದ್ಯತೆ ನೀಡಬೇಕು ಎಂದು ಗ್ರೀನ್ ಈಡನ್ ಪಬ್ಲಿಕ್ ಶಾಲೆ ಸಂಸ್ಥಾಪಕ ಪ್ರಾಂಶುಪಾಲೆ ಡಾ.ವೇದವತಿ ದಿನೇಶ್ ತಿಳಿಸಿದರು.
ತಾಲೂಕಿನ ಡಿ.ಮೇಡಿಹಳ್ಳಿಯ ಗ್ರೀನ್ ಈಡನ್ ಪಬ್ಲಿಕ್ ಶಾಲೆ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶೈಕ್ಷಣಿಕ ದೃಷ್ಟಿಯಿಂದ ಯಾವುದೇ ಭಾಷೆಯ ಬಳಸಿದರೂ ಮಾತೃಭಾಷೆ ಕನ್ನಡವನ್ನು ಎಂದಿಗೂ ಮರೆಯಬಾರದು. ಅದನ್ನ ಬಳಸಿ, ಇತರರಿಗೂ ಕಲಿಸಬೇಕು ಎಂದರು.ಹಿರಿಯ ಕವಿ ಶರಣ ದೇವರಾಜ ಚಿಕ್ಕಹಳ್ಳಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಪೋಷಕರು ಮಕ್ಕಳನ್ನು ಆಂಗ್ಲ ಮಾಧ್ಯಮದಲ್ಲಿಯೇ ವ್ಯಾಸಂಗ ಮಾಡಿಸುತ್ತಿದ್ದಾರೆ. ಆದರೆ ಆಂಗ್ಲ ಮಾಧ್ಯಮ ಶಾಲೆಯಲ್ಲೂ ಮಾತೃಭಾಷೆ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು. ಗ್ರೀನ್ ಈಡನ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಪ್ರಚುರಪಡಿಸುವ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಕನ್ನಡದ ಅಸ್ಮಿತೆಯನ್ನು ಎತ್ತಿ ಹಿಡಿದಿರುವುದು ಪ್ರಶಂಸನೀಯ ಎಂದರು.
ಶಾಲಾ ಮಕ್ಕಳಿಂದ ಜಾನಪದ ಕಲೆ, ಕರ್ನಾಟಕ ನೃತ್ಯ ವೈಭವ, ಯಕ್ಷಗಾನ, ಡೊಳ್ಳುಕುಣಿತ, ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಗ್ರೀನ್ ಈಡನ್ ಪಬ್ಲಿಕ್ ಶಾಲೆಯ ಕಾರ್ಯದರ್ಶಿ ದಿನೇಶ್ ಕುಮಾರ್, ಶಾಲಾ ಆಡಳಿತಾಧಿಕಾರಿ ಗೀತಾ, ಶೈಕ್ಷಣಿಕ ಮುಖ್ಯಸ್ಥೆ ಜೋಸ್ನಾ ಇತರರು ಹಾಜರಿದ್ದರು.ಫೋಟೋ : 18 ಹೆಚ್‌ಎಸ್‌ಕೆ 1
ಹೊಸಕೋಟೆ ತಾಲೂಕಿನ ಡಿ.ಮೇಡಿಹಳ್ಳಿಯ ಗ್ರೀನ್ ಈಡನ್ ಪಬ್ಲಿಕ್ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಶಾಲಾ ಸಂಸ್ಥಾಪಕ ಪ್ರಾಂಶುಪಾಲೆ ಡಾ.ವೇದವತಿ ಉದ್ಘಾಟಿಸಿದರು.