72 ವರ್ಷಗಳಲ್ಲಿಯೇ ದಾಖಲೆ ಮತದಾನ

| Published : Nov 20 2024, 12:32 AM IST

ಸಾರಾಂಶ

ಚನ್ನಪಟ್ಟಣ: ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡ ಚನ್ನಪಟ್ಟಣ ಉಪಚುನಾವಣೆಯಲ್ಲಿ 72 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಮತದಾನ ನಡೆದಿದೆ. ಇದು ಅಭ್ಯರ್ಥಿಗಳ ಸೋಲು ಗೆಲುವಿನ ವಿಚಾರದಲ್ಲಿ ನಾನಾ ಬಗೆಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ಚನ್ನಪಟ್ಟಣ: ಹೈವೋಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡ ಚನ್ನಪಟ್ಟಣ ಉಪಚುನಾವಣೆಯಲ್ಲಿ 72 ವರ್ಷಗಳ ಚುನಾವಣಾ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದ ಮತದಾನ ನಡೆದಿದೆ. ಇದು ಅಭ್ಯರ್ಥಿಗಳ ಸೋಲು ಗೆಲುವಿನ ವಿಚಾರದಲ್ಲಿ ನಾನಾ ಬಗೆಯ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ಚನ್ನಪಟ್ಟಣ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ 1952 ರಿಂದ 2024ರವರೆಗೆ 16 ಸಾರ್ವತ್ರಿಕ ಚುನಾವಣೆ, 3 ಉಪಚುನಾವಣೆಗಳನ್ನು ಕಂಡಿದೆ. ಇಷ್ಟು ಚುನಾವಣೆಗಳಲ್ಲಿ ನಡೆದ ಶೇಖಡಾವಾರು ಮತದಾನವನ್ನು ಪರಿಗಣಿಸಿದರೆ ಈ ಬಾರಿಯ ಉಪಚುನಾವಣೆಯಲ್ಲಿ ನಡೆದಿರುವ ಮತದಾನ ದಾಖಲಾರ್ಹ ಎನಿಸಿದೆ. ಇದೇ ಮೊದಲ ಬಾರಿಗೆ ಶೇ.88.81ರಷ್ಟು ಮತದಾನ ನಡೆದಿದ್ದು, ಈ ಉಪಚುನಾವಣೆ ದಾಖಲೆ ಬರೆದಿದೆ.

1951ರಲ್ಲಿ ನಡೆದ ರಾಜ್ಯದ ಮೊದಲ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮತದಾನ ಪ್ರಮಾಣ ಉತ್ತಮವಾಗಿ ನಡೆದಿತ್ತು. ಅಂದು ಶೇ.74.19ರಷ್ಟು ಮತದಾನ ನಡೆದಿದ್ದು ವಿಶೇಷ. ಅನಕ್ಷರತೆ, ಬಡತನ, ಮತದಾನದ ಬಗ್ಗೆಜ್ಞಾನವೇ ಇಲ್ಲದೆ ಇದ್ದ ಜನತೆ ಮೊದಲ ವಿಧಾನಸಭಾ ಚುನಾವಣೆಯಲ್ಲೇ ಶೇ.74 ರಷ್ಟು ಮತದಾನ ಮಾಡಿರುವುದು ವಿಶೇಷವೇ ಸರಿ. 1972 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.64.2 ರಷ್ಟು ಮತದಾನನ ನಡೆದಿದ್ದನ್ನು ಹೊರತುಪಡಿಸಿದರೆ, ಚನ್ನಪಟ್ಟಣದಲ್ಲಿ ನಡೆದ ಎಲ್ಲಾ ವಿಧಾನಸಭಾ ಚುನಾವಣೆಗಳಲ್ಲಿ ಶೇ.70ಕ್ಕಿಂತ ಹೆಚ್ಚು ಮತದಾನ ನಡೆದಿರುವುದು ವಿಶೇಷ.

6 ಚುನಾವಣೆಗಳಲ್ಲಿ ಶೇ.80ಕ್ಕಿಂತ ಹೆಚ್ಚು ಮತದಾನ:

ಚನ್ನಪಟ್ಟಣ ಕ್ಷೇತ್ರದಲ್ಲಿ 6 ಚುನಾವಣೆಗಳಲ್ಲಿ ಶೇ80ಕ್ಕಿಂತ ಹೆಚ್ಚು ಮತದಾನ ನಡೆದಿದೆ. 1978 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.80.3 ರಷ್ಟು ಮತದಾನ ನಡೆದಿದ್ದರೆ, 1994ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶೇ.81.52 ರಷ್ಟು ಮತದಾನ ನಡೆದಿದೆ. 2013ರಲ್ಲಿ ಹಾಗೂ ತದನಂತರ ನಡೆದ 2 ಸಾರ್ವತ್ರಿಕ, ಇದೀಗ ನಡೆದ ಉಪಚುನಾವಣೆಯಲ್ಲಿ ಶೇ.85ಕ್ಕಿಂತ ಹೆಚ್ಚು ಮತದಾನ ನಡೆದಿರುವುದು ವಿಶೇಷ.

ಹೆಚ್ಚಿನ ಮತದಾನ ಯಾರಿಗೆ ಲಾಭ:

ಈ ಬಾರಿ ದಾಖಲೆ ಪ್ರಮಾಣದ ಮತದಾನ ನಡೆದಿರುವುದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ವಾಗಿರುವುದು ಯಾರಿಗೆ ಲಾಭ ಎಂದು ಎರಡೂ ಪಕ್ಷದ ಮುಖಂಡರು ತಮ್ಮದೇ ಆದ ಆಯಾಮದಲ್ಲಿ ಲೆಕ್ಕಾಚಾರ ಹಾಕಿ ಇದು ನಮಗೇ ಲಾಭ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಹಿಂದಿನ ಚುನಾವಣೆಗಳಲ್ಲಿ ದಾಖಲೆ ಮತದಾನ ಯಾರಿಗೆ ಲಾಭವಾಗಿದೆ ಎಂದು ಇತಿಹಾಸದ ಪುಟ ತಿರುವಿ ನೋಡಿದಾಗ ಕಾಂಗ್ರೆಸ್ ಮತ್ತು ಜನತಾಪರಿವಾರಕ್ಕೆ ಲಾಭವಾಗಿರುವುದು ಕಂಡು ಬರುತ್ತದೆ.

ಡಿ.ಟಿ.ರಾಮು ಗೆದ್ದಿದ್ದರು:

ಚನ್ನಪಟ್ಟಣ ಕ್ಷೇತ್ರದಲ್ಲಿ ಮೊದಲ ಬಾರಿಗೆ ದಾಖಲೆ ಪ್ರಮಾಣದ ಮತದಾನ ನಡೆದಿದ್ದು 1978ರಲ್ಲಿ ಆ ಚುನಾವಣೆಯಲ್ಲಿ ಶೇ.80.3ರಷ್ಟು ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ಕಾಂಗ್ರೆಸ್(ಐ) ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಡಿ.ಟಿ.ರಾಮು 32601 ಮತ ಪಡೆದು ಗೆಲುವು ಸಾಧಿಸಿದರೆ, ಇವರ ಪ್ರತಿಸ್ಪರ್ಧಿಯಾಗಿದ್ದ ಪಕ್ಷೇತರ ಅಭ್ಯರ್ಥಿ ಬಿ.ಜೆ.ಲಿಂಗೇಗೌಡ 19190, ಜನತಾಪಕ್ಷದ ಟಿ.ವಿ.ರಾಮಣ್ಣ16263, ಕಾಂಗ್ರೆಸ್(ಓ) ಅಭ್ಯರ್ಥಿ ಆರ್ .ಲಿಂಗಯ್ಯ 1578 ಮತ ಪಡೆದಿದ್ದರು. ಈ ಚುನಾವಣೆಯಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ್ದ ಡಿ.ಟಿ.ರಾಮು ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು.

ವರದೇಗೌಡರಿಗೆ ಗೆಲುವು:

1994ರಲ್ಲಿ ನಡೆದವಿಧಾನಸಭಾ ಚುನಾವಣೆಯಲ್ಲಿ ಶೇ.81.52 ರಷ್ಟು ದಾಖಲೆ ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಎಂ.ವರದೇಗೌಡ 67661 ಮತ ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಸಾದತ್ಆಲಿಖಾನ್ 39428 ಮತ ಪಡೆದರು. ಈ ಚುನಾವಣೆಯಲ್ಲಿ ಜನತಾದಳದ ಅಭ್ಯರ್ಥಿ ಎಂ.ವರದೇಗೌಡ28233 ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದರು.ಬಾಕ್ಸ್‌.............

ಯೋಗೇಶ್ವರ್ ಗೆ ಸೋಲು-ಗೆಲುವು

ದಾಖಲೆ ಪ್ರಮಾಣದ ಮತದಾನದಲ್ಲಿ ಯೋಗೇಶ್ವರ್ ಒಂದು ಬಾರಿ ಗೆಲುವು ಸಾಧಿಸಿದ್ದರೆ, ಎರಡು ಬಾರಿ ಸೋಲನುಭವಿಸಿದ್ದಾರೆ. 2013ರಲ್ಲಿ ಶೇ.84.78 ರಷ್ಟು ಮತದಾನ ನಡೆದಿತ್ತು. ಈ ಚುನಾವಣೆಯಲ್ಲಿ 80099 ಮತಗಳನ್ನು ಸಮಾಜವಾದಿಯಿಂದ ಸ್ಪರ್ಧೆ ಮಾಡಿದ್ದ ಯೋಗೇಶ್ವರ್ ಪಡೆದುಕೊಂಡರೆ,73635 ಮತಗಳನ್ನು ಜೆಡಿಎಸ್ ನಿಂದ ಸ್ಪರ್ಧೆ ಮಾಡಿದ ಅನಿತಾಕುಮಾರಸ್ವಾಮಿ ಪಡೆದುಕೊಂಡರು. ಈ ಚುನಾವಣೆಯಲ್ಲಿ ಯೋಗೇಶ್ವರ್ 6464 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

2018ರಲ್ಲಿ ನಡೆದ ಚುನಾವಣೆಯಲ್ಲಿ ಶೇ.86.86 ರಷ್ಟು ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಕುಮಾರಸ್ವಾಮಿ ಯೋಗೇಶ್ವರ್ ವಿರುದ್ಧ 21530 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಮತ್ತೆ 2023 ರಲ್ಲಿ ನಡೆದ ಚುನಾವಣೆಯಲ್ಲಿ ಯೋಗೇಶ್ವರ್ ವಿರುದ್ಧ ಕುಮಾರಸ್ವಾಮಿ 15915 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಬಾರಿಯ ಉಪಚುನಾವಣೆಯಲ್ಲಿ ಎಲ್ಲಾ ಚುನಾವಣೆಗಳನ್ನು ಮೀರಿದ ದಾಖಲೆ ಪ್ರಮಾಣದ ಮತದಾನ ನಡೆದಿದ್ದು, ಯಾರಿಗೆ ಗೆಲುವು ಎಂದು ಕಾದು ನೋಡಬೇಕಿದೆ.ಬಾಕ್ಸ್ .................

ಕಡಿಮೆ ಮತದಾನ ನಡೆದಾಗ ಏನಾಗಿತ್ತು?

1972ರ ವಿಧಾನಸಭಾ ಚುನಾವಣೆಯಲ್ಲಿ ಶೇ.64 ರಷ್ಟು ಮತದಾನ ನಡೆದಿದ್ದು, ಇದು ಚನ್ನಪಟ್ಟಣ ಚುನಾವಣಾ ಇತಿಹಾಸದಲ್ಲಿ ಕಡಿಮೆ ಪ್ರಮಾಣದ ಮತದಾನ ಎನಿಸಿದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್(ಐ) ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದ್ದ ಟಿ.ವಿ.ಕೃಷ್ಣಪ್ಪ 29120 ಮತ ಪಡೆದು 8464 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಇವರ ಪ್ರತಿಸ್ಪರ್ಧಿಯಾಗಿದ್ದ ಕಾಂಗ್ರೆಸ್(ಸಂಯುಕ್ತ) ಅಭ್ಯರ್ಥಿ ಶಿವರಾಮಯ್ಯ 20656 ಮತಗಳನ್ನು ಪಡೆದಿದ್ದರು. ಇದನ್ನು ಹೊರತು ಪಡಿಸಿದರೆ 1957 ರಲ್ಲಿ ನಡೆದ ಚುನಾವಣೆಯಲ್ಲಿ ಶೇ.70 ರಷ್ಟು ಮತದಾನ ನಡೆದಿದ್ದು, ಈ ಚುನಾವಣೆಯಲ್ಲಿ ಪಿಎಸ್ಪಿಯ ಬಿ.ಕೆ.ಪುಟ್ಟರಾಮಯ್ಯ 16343 ಮತ ಪಡೆದು 3692 ಮತಗಳ ಅಂತರದಿಂದ ಗೆಲುವು ಸಾಸಿದ್ದರು. ಇವರ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಬಿ.ಜೆ.ಲಿಂಗೇಗೌಡ 12651 ಮತ ಪಡೆದಿದ್ದರು.ಬಾಕ್ಸ್ ..........

2023ರಲ್ಲಿ ನಡೆದಿದ್ದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಡೆದ ಮತದಾನಕ್ಕೂ ಈಬಾರಿಯ ಉಪ ಚುನಾವಣೆಯಲ್ಲಿ ನಡೆದಿರುವ ಮತದಾನಕ್ಕೂ ಶೇ.2.95 ರಷ್ಟು ಹೆಚ್ಚಿನ ಮತದಾನ ನಡೆದಿದೆ. ಕಳೆದ ವಿಧಾನಸಭಾ ಚುನಾವಣೆಗಿಂತ ಈ ಉಪಚುನಾವಣೆಯಲ್ಲಿ 10575 ಮತಗಳು ಹೆಚ್ಚುವರಿಯಾಗಿ ಚಲಾವಣೆಯಾಗಿದೆ.ಬಾಕ್ಸ್‌............

ಚನ್ನಪಟ್ಟಣದಲ್ಲಿ ನಡೆದಿರುವ ಮತದಾನದ ವಿವರ

ವರ್ಷಒಟ್ಟು ಮತಲಾವಣೆಗೊಂಡ ಮತಶೇಖಡ

195137,89128,11076.73

195745,31331,92470.45

196250,05639,85079.60

196767,16451,53776.73

197284,83953,29564.21

197889,06770,40880.30

198396,06870,67174.74

19851,12,18385,89177.47

19891,31,5531,01,06779.4

19941,43,7351,15,58481.52

19991,59,6591,10,22372.92

20041,68,5021,20,10371.3

20081,83,7931,43,56078.11

2009(ಉ.ಚು)1,84,8641,46,10179.19

2011(ಉ.ಚು)1,87,4311,46,89178.37

20131,98,7641,68,51184.78

20182,17,6061,89,01386.86

20232,30,3711,96,29185.86

2024(ಉ.ಚು)2,32,8362,06,86688.8119ಕೆಆರ್ ಎಂಎನ್ 1.ಜೆಪಿಜಿ

ಚನ್ನಪಟ್ಟಣ ಕ್ಷೇತ್ರದ ನಕ್ಷೆ

-------------------------------------