ಸಾರಾಂಶ
13ನೇ ಕನ್ನಡ ಸಾಹಿತ್ಯ ಸಮ್ಮೇಳನದದಲ್ಲಿ ಬಯಲಾಟ ಅಕಾಡೆಮಿ ಅಧ್ಯಕ್ಷ
ಕನ್ನಡಪ್ರಭ ವಾರ್ತೆ ಹನುಮಸಾಗರಸಾಹಿತ್ಯ ಸಮ್ಮೇಳನ ಜನರ ಜಾಗೃತಿ ಸಮ್ಮೇಳನವಾಗಬೇಕು. ಜಾನಪದ ಕಲಾವಿದರಿಗೆ ಭೂಮಿ ತಾಯಿಯೇ ನಿಜವಾದ ದೇವರು. ಕೊಪ್ಪಳ ಜಿಲ್ಲೆಯಲ್ಲಿ ಅನೇಕ ಕಲಾವಿದರಿದ್ದಾರೆ. ಬಯಲಾಟದ ಕಲಾವಿದರನ್ನು ಗುರುತಿಸುವ ಕಾರ್ಯವಾಗಬೇಕು ಎಂದು ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್. ದುರ್ಗಾದಾಸ ಹೇಳಿದರು.
ಸಮೀಪದ ಹೂಲಗೇರಾ ಗ್ರಾಮದಲ್ಲಿ ಎಂ.ಆರ್. ಪಾಟೀಲ ಮೈದಾನದ ವಾಸಪ್ಪ ಮಾಸ್ತರ ಮಹಾ ವೇದಿಕೆಯಲ್ಲಿ 13ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ಬರವಣಿಗೆಯಲ್ಲಿ ಇರುವುದು ಮಾತ್ರ ಸಾಹಿತ್ಯವಲ್ಲ. ಹಳ್ಳಿಯ ಜನರ ಪದಗಳ ನಾಲಿಗೆಯಲ್ಲಿ ಸಾಹಿತ್ಯ ಇರುತ್ತದೆ. ಕರ್ನಾಟಕದಲ್ಲಿ ಕನ್ನಡಾಭಿಮಾನ ಇರಬೇಕು, ಬಸವಣ್ಣನವರ ವಚನಗಳನ್ನು ನೋಡಿದರೆ ಎಲ್ಲೂ ಅಂಹಕಾರದ ಮಾತು ಆಡಿಲ್ಲ. ನಮ್ಮಲ್ಲಿ ಜಾತ್ಯತೀತ ಪರಂಪರೆ ಇರಬೇಕು ಎಂದು ಎಲ್ಲ ಸಾಹಿತಿಗಳು ಹೇಳಿದ್ದಾರೆ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಜಾನಪದ ಕಾವ್ಯ ವಚನಗಳ ಮೂಲಕ ಕನ್ನಡ ಹರಿದು ಬಂದಿದೆ. ಕರ್ನಾಟಕದಲ್ಲಿ ಪಂಪ, ರನ್ನ ಹಲವು ಕವಿಗಳು ಕವಿತೆ ರಚನೆ ಮಾಡುವ ಮೂಲಕ ಇಂದು ಕರ್ನಾಟಕ ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿಗೆ ಭಾಜನವಾಗಿದೆ. ನಮ್ಮ ಕನಕದಾಸರು, ಪುರಂದರದಾಸರು, ಬಸವಣ್ಣನವರು ಸಮಾಜ ತಿದ್ದುವ ಕೆಲಸ ಮಾಡಿದ್ದಾರೆ. ಅನ್ಯರಿಗೆ ಇರುವ ಭಾಷಾ ಅಭಿಮಾನ ನಮಗೂ ಇರಬೇಕು. ಕನ್ನಡಿಗರು ಅಮೇರಿಕದಲ್ಲಿ ಇದ್ದಾರೆ. ವಿದೇಶದಲ್ಲಿ ಕನ್ನಡ ಸಮ್ಮೇಳನ ಮಾಡುತ್ತಿದ್ದು, ಉತ್ತಮ ಕಾರ್ಯ ಮಾಡಲಾಗುತ್ತಿದೆ ಎಂದರು.ಕಸಾಪ ಸ್ವಾಗತ ಸಮಿತಿಯ ಅಧ್ಯಕ್ಷ, ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಇಡೀ ಗ್ರಾಮವೇ ಕನ್ನಡಮಯವಾಗಿದ್ದು, ಈ ಸಮ್ಮೇಳನ ಅದ್ಧೂರಿಯಾಗಿ ನಡೆದಿದೆ. ಎಲ್ಲವೂ ಇಂಗ್ಲಿಷ್‌ಮಯ ಆಗುತ್ತಿದ್ದು, ಕನ್ನಡಕ್ಕೆ ಹೆಚ್ಚು ಒತ್ತು ಕೊಡಬೇಕು ಎಂದರು.ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಪಾಟೀಲ ಮಾತನಾಡಿ, ಸಾಹಿತ್ಯ ಸಮ್ಮೇಳನ ಅಂದರೆ ರಾಜಕೀಯ ಕಾರ್ಯಕ್ರಮ ಅಲ್ಲ. ಇದು ಎಲ್ಲರೂ ಒಂದೊಂದು ವಿಚಾರ ಹಂಚಿಕೊಳ್ಳುವ ವೇದಿಕೆ. ಹಿಂದಿನ ಕಾಲದಲ್ಲಿ ರಾಜರ ಆಶ್ರಯದಲ್ಲಿ ಸಾಹಿತ್ಯ ಬೆಳೆಯುತ್ತಿತ್ತು. ಈಗ ಸರ್ಕಾರದಿಂದ ಹಣ ಕೊಡಲಾಗುತ್ತಿದೆ. ಸಾಹಿತ್ಯ ಸಮ್ಮೇಳನ ಜಾತ್ರೆಯಲ್ಲ ಜನರ ಧ್ವನಿ ಆಗಬೇಕು ಎಂದರು.
ಜಿಲ್ಲಾ ಅಧ್ಯಕ್ಷ ಶರಣರಗೌಡ ಪೊಲೀಸ್ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಯಾವದೇ ಜಾತಿ ಮತವಿಲ್ಲ, ಕನ್ನಡ ನಾಡು-ನುಡಿ, ಸಾಹಿತ್ಯ, ಸಂಗೀತವನ್ನು ಬೆಳೆಸುವ ಒಂದು ವೇದಿಕೆಯಾಗಿದೆ. ಕಲಾವಿದರ ಬೆಳಗುವ ಕಾರ್ಯಕ್ರಮ ಹೂಲಗೇರಾ ಸಣ್ಣ ಗ್ರಾಮೀಣ ಪ್ರದೇಶದಲ್ಲಿ ನಡೆಯುತ್ತಿರುವುದು ಶ್ಲಾಘನೀಯ ಎಂದರು.ನಿಕಟಪೂರ್ವ ಅಧ್ಯಕ್ಷ ಶೇಖರಗೌಡ ಸರನಾಡಗೌಡರ ಮಾತನಾಡಿ, ಪುಸ್ತಕದಲ್ಲಿನ ಜ್ಞಾನ ಮೊಬೈಲ್‌ನಲ್ಲಿ ಸಿಗಲ್ಲ. ಯುವಕರು ಸಾಹಿತಿಗಳ ಪುಸ್ತಕ ಓದಬೇಕು ಅಂದಾಗ ಮಾತ್ರ ಸಾಹಿತ್ಯ ಹುಟ್ಟಲು ಸಾಧ್ಯ. ಸಾಹಿತ್ಯ ಪರಿಷತ್ತು ಸಮ್ಮೇಳನಗಳಿಗೆ ಸೀಮಿತಗೊಳ್ಳದೆ ಕಾವ್ಯ ಕಮ್ಮಟ, ಕವಿಗೋಷ್ಠಿ ನಡೆಸಬೇಕು. ಅಂದಾಗ ಹೊಸ ಪ್ರತಿಭೆಗಳು ಸೃಷ್ಟಿಯಾಗುತ್ತವೆ ಎಂದರು.ಮಾಜಿ ಶಾಸಕ ಶರಣಪ್ಪ ವಕೀಲರು ಮಾತನಾಡಿದರು.
ಕಸಾಪ ಕೇಂದ್ರ ಸಂಘ-ಸಂಸ್ಥೆಗಳ ಪ್ರತಿನಧಿ ನಭಿಸಾಬ ಕುಷ್ಟಗಿ, ವಕೀಲ ಫಕೀರಪ್ಪ ಚಳಗೇರಿ, ಮಹಾಂತಗೌಡ ಪಾಟೀಲ, ಪ್ರಮುಖರಾದ ನೇಮಣ್ಣ ಮೇಲಸಕ್ರಿ, ಕಲಾವಿದ ಬಸವರಾಜ ಗವಿಮಠ, ಪ್ರಹ್ಲಾದ ಮಾಲಗಿತ್ತಿ, ಸಂಗನಗೌಡ ಪಾಟೀಲ, ಶಿವಶಂಕರಗೌಡ ಪಾಟೀಲ, ಪ್ರಕಾಶ ರಾಠೋಡ, ಬಸವರಾಜ ಹಳ್ಳೂರು, ಮಲ್ಲಣ್ಣ ಪಲ್ಲೆದ, ಗೋಪಾಲರಾವ್ ಕುಲಕರ್ಣಿ, ಎಸ್.ಜಿ. ಕಡೆಮನಿ, ರಮೇಶ ಕುಲಕರ್ಣಿ, ಸೋಮಶೇಖರ ವೈಜಾಪುರು, ನಜಿರಸಾಬ ಮುಲಿಮನಿ, ಅಬ್ದುಲ್ ಕರೀಂ ವಂಟೇಳಿ, ಶೈಲಜಾ ಬಗಲಿ, ಚಂದಪ್ಪ ಗುಡಿಮನಿ, ಶಾಂತಮ್ಮ ಕುಂಟಗೌಡ್ರು, ಲೆಂಕಪ್ಪ ವಾಲಿಕಾರ, ನಟರಾಜ ಸೋನಾರ, ರವೀಂದ್ರ ಬಾಕಳೆ, ಶರಣಪ್ಪ ಲೈನದ, ದೇವರಾಜ ವಿಶ್ವಕರ್ಮ, ಪರಶಿವಮೂರ್ತಿ ಮಾಟಲದಿನ್ನಿ, ಮಹಾಲಿಂಗಪ್ಪ ದೋಟಿಹಾಳ, ಹೂಲಗೇರಾ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರಿದ್ದರು. ರಾಮಚಂದ್ರ ಬಡಿಗೇರ, ಲೀಲಾ ಶೆಟ್ಟರ ನಿರೂಪಿಸಿದರು.