ನಾಡಾಭಿವೃದ್ಧಿಗೆ ಹೋರಾಟಗಾರರು ರಾಜಕಾರಣಕ್ಕಿಳಿಯಲಿ: ಪ್ರವೀಣ್ ಶೆಟ್ಟಿ

| Published : Nov 22 2024, 01:15 AM IST

ನಾಡಾಭಿವೃದ್ಧಿಗೆ ಹೋರಾಟಗಾರರು ರಾಜಕಾರಣಕ್ಕಿಳಿಯಲಿ: ಪ್ರವೀಣ್ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ 69ನೇ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ನಗರದ ಪೂಜ್ಯ ಡಾ. ಚನ್ನ ಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಕರ್ನಾಟಕ ರಾಜ್ಯೋತ್ಸವ ಹಾಗೂ ಜಿಲ್ಲಾಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಿತು.

ಕನ್ನಡಪ್ರಭ ವಾರ್ತೆ, ಬೀದರ್‌

ನಾಡು ಅಭಿವೃದ್ಧಿಯಾಗಬೇಕಾದರೆ ಕನ್ನಡ ಹೋರಾಟಗಾರರಿಗೆ ಹಾಗೂ ಪ್ರಾಮಾಣಿಕರನ್ನು ರಾಜಕಾರಣಕ್ಕೆ ತರುವುದು ಅಗತ್ಯವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಅವರು ಮಾತನಾಡಿ,ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್‌ ಶೆಟ್ಟಿ ಬಣ) ವತಿಯಿಂದ 69ನೇ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಗುರುವಾರ ಕರ್ನಾಟಕ ರಾಜ್ಯೋತ್ಸವ ಹಾಗೂ ಜಿಲ್ಲಾಮಟ್ಟದ ಕಾಯಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಚುನಾವಣೆಯ ದಿನಾಂಕವನ್ನು ತಿಂಗಳಗಟ್ಟಲೆ ಕೊಡಬೇಡಿ. ಹಣ ಇರುವವರು ಬರುತ್ತಾರೆ. ಒಂದು ವಾರ ಸಮಯ ಕೊಡಿ. ಸಮಾಜದಲ್ಲಿ ಪರಿಚಯ ಇರುವವರು ಚುನಾವಣೆಗೆ ಬರುತ್ತಾರೆ. ಈ ನಿಟ್ಟಿನಲ್ಲಿ ವಿಶೇಷ ಕಾನೂನು ತರುವುದು ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಸಾನ್ನಿಧ್ಯ ವಹಿಸಿದ್ದ ಹುಲಸೂರು ಗುರುಬಸವೇಶ್ವರ ಸಂಸ್ಥಾನದ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಸಾನಿಧ್ಯ ವಹಿಸಿ ಮಾತನಾಡಿ, ನಮ್ಮ ಭಾಗ ಕನ್ನಡಕ್ಕೆ ಉಳಿಸಿ, ಬೆಳೆಸಲು ದೊಡ್ಡ ಕೊಡುಗೆ ನೀಡಿದೆ. ಕರ್ನಾಟಕ ಸುವರ್ಣ ಸಂಭ್ರಮವನ್ನು ನಾವು ಆಚರಿಸುತ್ತಿದ್ದರೂ ಕನ್ನಡ ಸ್ಥಿತಿ ಮಾತ್ರ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ ಎಂಬುವದು ಸತ್ಯ ಎಂದರು.ಹಿರಿಯ ಪತ್ರಕರ್ತ ಸದಾನಂದ ಜೋಶಿ ಉಪನ್ಯಾಸ ನೀಡಿ, ರಾಜ್ಯದಲ್ಲಿ ಸರ್ಕಾರ ಯಾವುದೇ ಪಕ್ಷದ್ದಿದ್ದರೂ ಮೊದಲಿಗೆ ಅದು ಕನ್ನಡದ ಸರ್ಕಾರವಾಗಿರಬೇಕು. ಆಗ ಮಾತ್ರ ಸಕಾರಾತ್ಮಕ ಬದಲಾವಣೆ ಕಾಣಬಹುದು ಎಂದರು. ಜೈ ಭಾರತ ಮಾತಾ ಸೇವಾ ಸಮಿತಿ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷ ಸದ್ಗುರು ಹವಾ ಮಲ್ಲಿನಾಥ ಮಹಾರಾಜ ಸಾನ್ನಿಧ್ಯವನ್ನು, ಕರವೇ ಜಿಲ್ಲಾಧ್ಯಕ್ಷ ಪೀಟರ್‌ ಚಿಟಗುಪ್ಪ ಅಧ್ಯಕ್ಷತೆ ವಹಿಸಿದ್ದರು. 1000 ಮೀ.ಉದ್ದದ ಕನ್ನಡ ಧ್ವಜ ಯಾತ್ರೆ :ಕರ್ನಾಟಕ ರಕ್ಷಣಾ ವೇದಿಕೆಯಿಂದ ಗುರುವಾರ 69ನೇ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ ನಿಮಿತ್ತ ನಗರದಲ್ಲಿ ಸಾವಿರ ಮೀಟರ್‌ (ಒಂದು ಕಿಮೀ) ಉದ್ದದ ಕನ್ನಡ ಧ್ವಜ ಪಾದಯಾತ್ರೆ, ತಾಯಿ ಭುವನೇಶ್ವರಿ ಭಾವಚಿತ್ರದ ಭವ್ಯ ಮೆರವಣಿಯು ಇಲ್ಲಿನ ಬಿವಿಬಿ ಕಾಲೇಜಿನಿಂದ ಆರಂಭವಾಗಿ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರವರೆಗೆ ನಡೆಯಿತು.ಸಾವಿರ ಮೀಟರ್‌ ಉದ್ದದ ಧ್ವಜ ಈ ಮಾರ್ಗದ ಜನರಿಗೆ ಆಕರ್ಷಿಸುವದರ ಜೊತೆಗೆ ಕನ್ನಡದ ಕಂಪು ಪಸರಿಸಿತು. ಡೊಳ್ಳು, ಲಂಬಾಣಿ ನೃತ್ಯ, ವಿವಿಧ ವೇಷಧಾರಿಗಳ ಕುಣಿತ, ಹಲಗೆ ವಾದ್ಯ ಮೆರವಣಿಗೆಗೆ ಸಾಂಸ್ಕೃತಿಕ ವೈಭವ ನೀಡಿತು.ಕರವೇ ಉಪಾಧ್ಯಕ್ಷರಾದ ಶಿವರಾಜ ಗೌಡರು, ಉಮೇಶ ಗೌಡರು, ರಾಜಶೇಖರ ಪಾಟೀಲ್, ಪ್ರಧಾನ ಕಾರ್ಯದರ್ಶಿ ರಾಜಘಟ್ಟ ರವಿ, ಕಾರ್ಯದರ್ಶಿ ಲೋಕೇಶ, ಪ್ರಮುಖರಾದ ಶರಣು ಗದ್ದುಗೆ, ಅಭಿಷೇಕ ಬಾಲಾಜಿ, ವಿರೂಪಾಕ್ಷ ಗಾದಗಿ, ವೀರಶೆಟ್ಟಿ ಖ್ಯಾಮಾ, ಪಪ್ಪು ಪಾಟೀಲ್ ಖಾನಾಪುರ, ಡಾ. ರೂಪೇಶ ಎಕಲಾರಕರ್, ವಿಜಯಕುಮಾರ ಸೋನಾರೆ, ಸುಬ್ಬಣ್ಣ ಕರಕನಳ್ಳಿ, ಸಂಜೀವಕುಮಾರ ಅತಿವಾಳ, ಹಣ್ಮು ಪಾಜಿ ಹಾಗೂ ರಘುಪ್ರಿಯ ಸೇರಿದಂತೆ ಮತ್ತಿತರರು ಇದ್ದರು.