ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಮರಳಗಾಲ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕೆ.ಶೆಟ್ಟಹಳ್ಳಿ ಹೋಬಳಿ ವ್ಯಾಪ್ತಿಯ ಬಾಲ ಮೇಳ ನಡೆಯಿತು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಆಶಾ ಮಾತನಾಡಿ, ಪೋಷಕರು ಖಾಸಗಿ ಕಾನ್ವೆಂಟ್, ಖಾಸಗಿ ಶಾಲೆಗೆ ಮಾರು ಹೋಗದೆ ಸ್ಥಳೀಯ ಅಂಗನವಾಡಿ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಸೇರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲೂ ಸಹ ಮಕ್ಕಳಿಗೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ವೇಳೆ ಅಂಗನವಾಡಿ ಕೇಂದ್ರದ ಪುಟ್ಟ ಮಕ್ಕಳು ದೇಶದ ಮಹಾನ್ ನಾಯಕರು ಹಾಗೂ ನಾಯಕಿಯರ ವೇಷ ಭೂಷಣ ಧರಿಸಿ ಗಮನ ಸೆಳೆದರು. ಮಕ್ಕಳಿಗೆ ಪ್ರಶಸ್ತಿ ವಿತರಿಸಲಾಯಿತು. ಮಕ್ಕಳ ಪೋಷಕರಿಂದ ವಿವಿಧ ಬಗೆಯ ಪೌಷ್ಟಿಕ ಆಹಾರ, ತಿಂಡಿ ತಿನಿಸುಗಳ ಪೌಷ್ಟಿಕ ಆಹಾರ ಮೇಳ ನಡೆಯಿತು. ಉತ್ತಮ ಪೌಷ್ಟಿಕ ಆಹಾರ ತಯಾರಿಸಿ ಪ್ರದರ್ಶಿಸಿದ ಪಾಲಕರಿಗೆ ಪ್ರಶಸ್ತಿ ಕೂಡ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷೆ ಹರ್ಪಿತ, ಗ್ರಾಪಂ ಸದಸ್ಯರಾದ ಅಪ್ಪಾಜಿ, ಸುವರ್ಣ, ನರಸಿಂಹಯ್ಯ, ಪಿಡಿಒ ಶೋಭರಾಣಿ, ಹಾಲಿನ ಡೈರಿ ಅಧ್ಯಕ್ಷ ಬೋರೇಗೌಡ, ಸದಸ್ಯರಾದ ಶಂಕ್ರೇಗೌಡ, ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶುಷ್ಮಾ ಯೋಗಾನಂದ, ಮುಖ್ಯ ಶಿಕ್ಷಕಿ ವಿಜಯಕುಮಾರಿ, ಶಿಕ್ಷಕಿ ಪ್ರೇಮ, ಸ್ತ್ರೀ ಶಕ್ತಿ ಸಂಘದ ಪ್ರತಿನಿಧಿ ಸವಿತಾ, ಅಂಗನವಾಡಿ ಮೇಲ್ವಿಚಾರಕಿ ಆಶಾ, ಪೋಷಣ ಅಭಿಯಾನ್ ಸಂಯೋಜಕಿ ಪಲ್ಲವಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ, ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಎನ್ ಕೃಷ್ಣೇಗೌಡ, ಸಮುದಾಯ ಆರೋಗ್ಯ ಅಧಿಕಾರಿ ರೂಪ ಜೆ, ಅಜಿಮ್ ಪ್ರೇಮಜಿ ಸಂಯೋಜಕ ರವಿಕುಮಾರ್, ಅಂಗನವಾಡಿ ಕಾರ್ಯಕರ್ತೆ ಸುಷ್ಮಾ, ಅನಂತಲಕ್ಷ್ಮಿ, ಸಹಾಯಕಿ ಚೈತ್ರ, ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಕುಪ್ಪಮ್ಮ, ಆಶಾ ಕಾರ್ಯಕರ್ತೆ ಲೀಲಾ ಸೇರಿದಂತೆ ಇತರರು ಇದ್ದರು.