ಸಾರಾಂಶ
ಚಳ್ಳಕೆರೆ: ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿರುವುದು ಸಂತಸ ತಂದಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ತಿಳಿಸಿದರು.
ಚಳ್ಳಕೆರೆ: ಮಹರ್ಷಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಮಾಡಿರುವುದು ಸಂತಸ ತಂದಿದೆ ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್.ರಘುಮೂರ್ತಿ ತಿಳಿಸಿದರು.
ಗುರುವಾರ ತಾಲೂಕಿನ ಮೈಲನಹಳ್ಳಿ ಗ್ರಾಮದ ಖಾಸಗಿ ಬಸ್ ನಿಲ್ದಾಣದ ಬಳಿ ಗ್ರಾಮದ ವಾಲ್ಮೀಕಿ ಯುವಕ ಸಂಘ ಹಾಗೂ ಸಮಾಜದ ಬಂಧುಗಳು ಹಮ್ಮಿಕೊಂಡಿದ್ದ ವಾಲ್ಮೀಕಿ ನೂತನ ಪ್ರತಿಮೆ ಪತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮಹರ್ಷಿ ವಾಲ್ಮೀಕಿಯವರ ರಾಮಾಯಣ ಇಂದಿಗೂ ಜನರ ಮನದಲ್ಲಿ ಆಳಾವಾಗಿ ಉಳಿದಿದೆ. ರಾಮಾಯಣ ಪ್ರತಿಯೊಬ್ಬರ ಬದುಕಿನಲ್ಲಿ ಹೊಸ ಆತ್ಮವಿಶ್ವಾಸವನ್ನು ತುಂಬಿದ ಮಹಾನ್ ಗ್ರಂಥವಾಗಿದೆ ಎಂದರು.
ಗ್ರಾಪಂ ಅಧ್ಯಕ್ಷ ಜೆ.ಜಗನ್ನಾಥ ಮಾತನಾಡಿ, ಮೈಲನಹಳ್ಳಿಯಂತಹ ಗಡಿಭಾಗದಲ್ಲಿ ಮಹರ್ಷಿ ಶ್ರೀ ವಾಲ್ಮೀಕಿ ಪ್ರತಿಮೆ ಅನಾವರಣ ಕಾರ್ಯ ಇಡೀ ಗ್ರಾಮಕ್ಕೆ ಹೆಚ್ಚು ಸಂತಸ ಉಂಟು ಮಾಡಿದೆ. ಕಳೆದ ಹಲವಾರು ವರ್ಷಗಳಿಂದ ಪ್ರತಿಮೆ ಅನಾವರಣ ಪ್ರಯತ್ನನಡೆಯುತ್ತಿತ್ತು. ಎಲ್ಲರ ಸಹಕಾರದಿಂದ ಈ ಕಾರ್ಯ ಇಂದು ಯಶಸ್ವಿಯಾಗಿ ನಡೆದಿದ್ದು, ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.ವಾಲ್ಮೀಕಿ ಯುವಕ ಸಂಘದ ಅಧ್ಯಕ್ಷ ರಾಜಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ರೈತ ಸಂಘ ಉಪಾಧ್ಯಕ್ಷ ಕೆ.ಪಿ.ಭೂತಯ್ಯ, ಪಿಡಿಒ ನಾಗರಾಜ, ಗ್ರಾಮದ ಮುಖಂಡರಾದ ನಾಗಣ್ಣ, ಚನ್ನವೀರಪ್ಪ, ಗೌಡ್ರಬಸವರಾಜಪ್ಪ, ಪಂಚಾಯಿತಿ ಸದಸ್ಯರಾದ ಜಯಲಕ್ಷ್ಮಿ, ವೆಂಕಟೇಶ್, ಶಾಂತಮ್ಮ, ಪಾಲಯ್ಯ, ಮಾಜಿ ಸದಸ್ಯ ಕೆ.ಪಿ.ತಿಪ್ಪೇಸ್ವಾಮಿ, ಈರಣ್ಣ, ಮಂಜುನಾಥ, ನಾಗರಾಜ, ಪ್ರಹ್ಲಾದ್, ಪಾಪೇಶ್‌ನಾಯಕ, ರಮೇಶ್, ನಾಗೇಶ್, ವೀರೇಶ್, ಗುರುಸ್ವಾಮಿ, ಉಪನ್ಯಾಸಕ ಪ್ರಭಾಕರ್, ಮೈಲನಹಳ್ಳಿ ದಿನೇಶ್ ಮತ್ತಿತರರಿದ್ದರು.