ಸವಣೂರಿನಲ್ಲಿ ಜ. 24 ಹಾಗೂ 25ರಂದು ಏರ್ಪಡಿಸಿರುವ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣದೊಂದಿಗೆ ಅದ್ಧೂರಿಯಾಗಿ ಜರುಗಿಸಲು ಸರ್ವ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ತಿಳಿಸಿದರು.
ಸವಣೂರು: ಸವಣೂರಿನಲ್ಲಿ ಜ. 24 ಹಾಗೂ 25ರಂದು ಏರ್ಪಡಿಸಿರುವ ಹಾವೇರಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ಅರ್ಥಪೂರ್ಣದೊಂದಿಗೆ ಅದ್ಧೂರಿಯಾಗಿ ಜರುಗಿಸಲು ಸರ್ವ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು ಶಾಸಕ ಯಾಸೀರಖಾನ್ ಪಠಾಣ ತಿಳಿಸಿದರು.ಶಿಗ್ಗಾಂವಿಯಲ್ಲಿ ಶನಿವಾರ 15ನೇ ಕನ್ನಡ ಜಿಲ್ಲಾ ಸಮ್ಮೇಳನ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದರು.ಕನ್ನಡ ಮನಸ್ಸುಗಳು ಒಂದಾಗಿ ತಾಯಿ ಭುವನೇಶ್ವರಿ ತೇರನ್ನು ಏಳೆಯಲು ಸಿದ್ಧರಾಗಿ. ಎರಡು ದಿನಗಳ ಕಾಲ ಜರುಗುವ ಕನ್ನಡ ಹಬ್ಬವನ್ನು ಮನೆಮಂದಿ ಎಲ್ಲರೂ ಒಂದಾಗಿ ಆಚರಿಸುವಂತಹ ವಾತಾವರಣವನ್ನು ನಿರ್ಮಿಸಲಾಗಿದೆ. ಆದ್ದರಿಂದ, ಪಾಲಕರು ಮಕ್ಕಳೊಂದಿಗೆ ಆಗಮಿಸಿ, ಮಕ್ಕಳಲ್ಲಿ ನಾಡು, ನುಡಿ ಹಾಗೂ ಜಲದ ಕುರಿತು ಜಾಗೃತಿ ಮೂಡಿಸಲು ಮುಂದಾಗಬೇಕು ಎಂದರು.ಕಸಾಪ ಜಿಲ್ಲಾ ಕಾರ್ಯದರ್ಶಿ ಪ್ರಭು ಅರಗೋಳ ಪ್ರಾಸ್ತಾವಿಕವಾಗಿ ಮಾತನಾಡಿ, ಎರಡು ದಿನಗಳ ಕಾಲ ಸಮ್ಮೇಳನ ಸಭಾಂಗಣದಲ್ಲಿ ಹಮ್ಮಿಕೊಂಡಿರುವ ಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕುರಿತು ವಿವರಿಸಿದರು. ಕಸಾಪ ತಾಲೂಕು ಅಧ್ಯಕ್ಷ ಸಿ.ಎನ್.ಪಾಟೀಲ ಮಾತನಾಡಿದರು. ಪ್ರಮುಖರಾದ ಎಂ.ಜೆ. ಮುಲ್ಲಾ, ಗುಡ್ಡಪ್ಪ ಜಲದಿ, ಮಹೇಶ ಅಪ್ಪಣ್ಣನವರ, ಮೌಲಾಸಾಬ್ ಹೊಂಬರಡಿ, ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಇತರರು ಪಾಲ್ಗೊಂಡಿದ್ದರು.