ಸಾರಾಂಶ
-ಹಿಂಡಿಗನಾಳದಲ್ಲಿ ಪಡಿತರ ವಿತರಣಾ ಕೇಂದ್ರದ ಕಟ್ಟಡ ಉದ್ಘಾಟನೆಕನ್ನಡಪ್ರಭ ವಾರ್ತೆ ಹೊಸಕೋಟೆ
ರೈತರ ಹಿತ ಕಾಯುವುದೇ ಸಹಕಾರ ಬ್ಯಾಂಕ್‌ಗಳ ಮುಖ್ಯ ಉದ್ದೇಶ. ಅದಕ್ಕಾಗಿ ರೈತರ ಮನೆಯ ಬಾಗಿಲಿಗೇ ಸಾಲ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.ನಂದಗುಡಿ ಹೋಬಳಿಯ ಹಿಂಡಿಗನಾಳದಲ್ಲಿ 11 ಲಕ್ಷ ರು. ವೆಚ್ಚದಲ್ಲಿ ನೆಲವಾಗಿಲು ರೇಷ್ಮೆ ಬೆಳೆಗಾರರ ಹಾಗೂ ರೈತ ಸೇವಾ ಸಹಕಾರ ಸಂಘದ ಪಡಿತರ ವಿತರಣಾ ಕೇಂದ್ರದ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಹಕಾರ ಬ್ಯಾಂಕ್‌ಗಳು ದೇಶದ ವ್ಯವಸ್ಥೆಯ ಉತ್ತಮ ಅಡಿಪಾಯ. ನಬಾರ್ಡ್ ಸಹಕಾರ ಸಂಘಗಳ ಸದೃಢ ಬೆಳವಣಿಗೆಗೆ ಆರ್ಥಿಕ ನೆರವು ನೀಡುತ್ತಿದೆ. ಈ ನಿಟ್ಟಿನಲ್ಲಿ ಸಹಕಾರ ಸಂಘಗಳು ರೈತರ ಮನೆ ಬಾಗಿಲಿಗೆ ಸಾಲ ಸೌಲಭ್ಯ ನೀಡುತ್ತಿವೆ ಎಂದು ಹೇಳಿದರು.
ಬೆಳೆ ಸಾಲ, ಜಾನುವಾರು, ಚಿನ್ನಾಭರಣ, ಮನೆ ಕಟ್ಟಲು, ಸ್ತ್ರೀಶಕ್ತಿ ಸಂಘಗಳಿಗೆ, ನೇರ ಸಾಲ, ಕಡಿಮೆ ಬಡ್ಡಿ ಹಾಗೂ ಶೂನ್ಯ ಬಡ್ಡಿ ಸಾಲ ಸೌಲಭ್ಯ ಒದಗಿಸುತ್ತಿದೆ. ರೈತರು ಸದ್ಬಳಸಿಕೊಂಡು ಅರ್ಥಿಕ ಬಲಿಷ್ಠರಾಗಬೇಕು. ಸಕಾಲದಲ್ಲಿ ಸಾಲ ಮರುಪಾವತಿಸಿ ಬ್ಯಾಂಕ್‌ಗಳ ಬೆಳವಣಿಗೆಗೂ ಸಹಕರಿಸಬೇಕು ಎಂದು ತಿಳಿಸಿದರು.ರಾಜ್ಯಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ, ಜಿಪಂ ಮಾಜಿ ಅಧ್ಯಕ್ಷೆ ಸವಿತಾ, ತಾಪಂ ಮಾಜಿ ಅಧ್ಯಕ್ಷ ಕೆಂಚೇಗೌಡ, ಮಾಜಿ ಸದಸ್ಯ ಬೀರಪ್ಪ, ರಾಮಚಂದ್ರೇಗೌಡ, ಎಸ್‌ಎಫ್‌ಸಿಎಸ್ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಎನ್.ಮಂಜುನಾಥ್, ಸಿಇಒ ಎಚ್.ಎಂ.ಗುರುದೇವ್, ನಿರ್ದೇಶಕರಾದ ಎಚ್.ಕೆ.ನಾರಾಯಣಗೌಡ, ಎನ್.ಡಿ.ರಮೇಶ್, ಎನ್.ಶ್ರೀನಿವಾಸ್, ಎಸ್.ಕೆ.ರಾಜೇಶ್, ಎಸ್.ಮಂಜುನಾಥ್, ಜಯಮ್ಮ, ಲಕ್ಷ್ಮೀದೇವಿ, ರವಿಶಂಕರ್, ಟಿ.ಮುನಿರಾಜು, ಎ.ಆರ್.ಕೃಷ್ಣಪ್ಪ, ವಿ.ಎಂ.ಮುನಿನಾರಾಯಣಪ್ಪ, ವಜೀರ್‌ಖಾನ್, ಉದ್ಯಮಿ ಎಂ.ಮಂದೀಪ್‌ಗೌಡ, ಗ್ರಾಪಂ ಅಧ್ಯಕ್ಷೆ ಚಾಂದ್ ಸುಲ್ತಾನಾ, ಮಾಜಿ ಅಧ್ಯಕ್ಷ ಎಚ್.ಎಂ.ಮೂರ್ತಿ, ಸದಸ್ಯರಾದ ಮಧು, ಕರಗೇಗೌಡ, ಸರೋಜಮ್ಮ ಇದ್ದರು.