-ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ । ಸುಲೇಪೇಟ್ ಮೂಲ ಮನೆ, ಮಾನವ ಮನ, ಸ್ಪುಡಿಯೋ ಸೇರಿ 7 ಕಡೆ ದಾಳಿ
--ಕನ್ನಡಪ್ರಭ ವಾರ್ತೆ ಕಲಬುರಗಿ
ನಗರದ ವಿದ್ಯುತ್ ಸರಬರಾಜು ಕಂಪನಿ ಜೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಮೃತ್ ರಾವ್ ಯಲಾಲ್ ಅವರಿಗೆ ಸೇರಿದ ಆರು ಸ್ಥಳಗಳ ಮೇಲೆ ಕರ್ನಾಟಕ ಲೋಕಾಯುಕ್ತ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.ಜೆಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಕಚೇರಿ ಮೇಲೆ ಬೆಳ್ಳಂಬೆಳಗ್ಗೆಯೇ ಲೋಕಾಯುಕ್ತರ ದಾಳಿಯಾಗಿದೆ.
ಕಲಬುರ್ಗಿ ನಗರದಲ್ಲಿರುವ ಜೆಸ್ಕಾಂ ಎಇಇ ಅಮೃತರಾವ್ ಯಲಾಲ್ ಮನೆ, ಕಚೇರಿ ಸೇರಿದಂತೆ 7 ಸ್ಥಳಗಳಲ್ಲಿ ದಾಳಿಯಾಗಿದೆ.
ನಗರದ ಜಾಗೃತಿ ಕಾಲೋನಿಯಲ್ಲಿರುವ ಅಮೃತರಾವ್ ಮಾವನ ಮನೆ, ಬಸವ ಅಪಾರ್ಟ್ಮೆಂಟ್ ನಲ್ಲಿರುವ ಫ್ಲಾಟ್, ಕಲಬುರಗಿಯ ಕೊತ್ತಂಬರಿ ಲೇಔಟ್ ನಲ್ಲಿರುವ ಜೆಸ್ಕಾಂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮದಲ್ಲಿರುವ ಮನೆಯ ಮೇಲೆಯೂ ದಾಳಿ ನಡೆದಿದೆ. ಜಾಗೃತಿ ಕಾಲೋನಿಯಲ್ಲಿರುವ ಪ್ಲಾಟಿನಂ ಸ್ಟುಡಿಯೋ ಹೊಂದಿರುವ ಅಮೃತರಾವ್ ನಂದೂರು ಕೈಗಾರಿಕಾ ಪ್ರದೇಶದಲ್ಲಿ ಆಸ್ತಿ ಹೊಂದಿದ್ದಾರೆ.
20ಕ್ಕೂ ಹೆಚ್ಚು ಎಕರೆ ಜಮೀನು ಹೊಂದಿರುವ ಅಮೃತ ರಾವ್ ಅವರಿಗೆ ಸಂಬಂಧಿಸಿದ 7 ಸ್ಥಳಗಳಲ್ಲಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.ನಂದೂರ್ ಇಂಡಸ್ಟ್ರಿಯಲ್ ಏರಿಯಾ, ಫ್ಲ್ಯಾಟುಗಳು, ಕಲಬುರಗಿ ನಗರ. ಫ್ಲ್ಯಾಟುಗಳು ಸುಲೇಪೇಟ್ ಮನೆ, ವಾಣಿಜ್ಯ ಮಳಿಗೆಗಳ ಮೇಲೂ ದಾಳಿ ನಡೆದಿದೆ. ಎಲ್ಲಾ ಸ್ಥಳಗಳ ಮೇಲೆ ಪರಿಶೀಲನೆ, ಶೋಧನೆ ಕಾರ್ಯಾಚರಣೆ ನಡೆಯುತ್ತಿದೆ.
ಕಲಬುರಗಿ ಲೋಕಾಯುಕ್ತ ಎಸ್ಪಿ ಸಿದ್ದರಾಜು ನೇತೃತ್ವದಲ್ಲಿ ಈ ದಾಳಿ ನಡೆದಿದೆ.ಫೋಟೋ- ಅಮೃತರಾವ್
ಫೋಟೋ- ಅಮೃತರಾವ್ ಮನೆ ಮೇಲಿನ ದಾಳಿಯಲ್ಲಿ ಲೋಕಾ ಅಧಿಕಾರಿಗಳಿಂದ ಪರಿಶೀಲನೆ--
ಫೋಟೋ:ಕಲಬುರಗಿ ನಗರದ ಜಾಗೃತಿ ಕಾಲೋನಿಯ ಮನೆ, ಬಸವ ಅಪಾರ್ಟ್ಮೆಂಟ್ ನಲ್ಲಿರುವ ಪ್ಲ್ಯಾಟ್ ಮೇಲೆ ದಾಳಿ
ಚಿಂಚೋಳಿ ತಾಲೂಕಿನ ಸುಲೇಪೇಟ್ ಗ್ರಾಮದಲ್ಲಿ ಮನೆ ಮೇಲೂ ದಾಳಿ