ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಸಾಮೂಹಿಕ ವಿವಾಹನದಲ್ಲಿ ಜಾತಿ ಸಂಕೋಲೆ ಮೀರಿ ಬ್ರಾಹ್ಮಣ ಸಮುದಾಯದ ಯುವಕ ಹಾಗೂ ಪರಿಶಿಷ್ಟ ಸಮುದಾಯದ ಯುವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ವಿಶೇಷ ಸಂದರ್ಭದಲ್ಲಿ ನಗರದ ಅಂಬೇಡ್ಕರ್ ಭವನದಲ್ಲಿ ಬೌದ್ಧ ಸಂಘಟನೆ ಆಯೋಜಿಸಿದ್ದ ಸಾಮೂಹಿಕ ವಿವಾಹದ ವೇದಿಕೆಯಲ್ಲಿ ಇವರ ಮದುವೆ ನೆರವೇರಿದೆ.

ಪ್ರೀತಿಸುವ ವೇಳೆ ಜಾತಿ ಧರ್ಮ ನೋಡುವುದಿಲ್ಲ, ಆದರೆ ಮದುವೆ ವಿಚಾರ ಬಂದಾಗ ಜಾತಿ ಬಹಳಷ್ಟು ಪ್ರೇಮಿಗಳಿಗೆ ಅಡ್ಡಿಯಾಗಲಿದೆ. ಆದರೆ ಇಲ್ಲಿ ಸಚಿನ್ ಆ ಜಾತಿ ಸಂಕೋಲೆ ಮೀರಿ ಪ್ರೀತಿಸಿದ ಹುಡುಗಿಯೊಂದಿಗೆ ಮದುವೆ ಆಗಿದ್ದಾನೆ.

ಎಟಿಎಂನಿಂದ ಹಣ ತೆಗೆಯುವುದಕ್ಕೆ ಹೋದಾಗ ಸಚಿನ್ ಹಾಗೂ ಸಾವಿತ್ರಿ ಅವರಿಗೆ ಪರಸ್ಪರ ಪರಿಚಯವಾಗಿತ್ತು. ಇಬ್ಬರೂ


ಮೊಬೈಕ್‌ ಸಂಖ್ಯೆಯನ್ನು ಹಂಚಿಕೊಂಡಿದ್ದಾರೆ. ತದ ನಂತರ ಪ್ರೀತಿಯಾಗಿ ಮತ್ತಷ್ಟು ಹತ್ತಿರವಾಗಿದ್ದು, ಮದುವೆಯಾಗುವುದಕ್ಕೆ ನಿರ್ಧರಿಸಿದ್ದಾರೆ. ಎರಡು ಮನೆಯವರನ್ನು ಈ ಜೋಡಿ ಒಪ್ಪಿಸಿ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿರುವುದು ವಿಶೇಷ.