ಕುವೆಂಪು ಕಲಾಮಂದಿರದಲ್ಲಿ ಡಾ.ರಾಜ್‌ಕುಮಾರ್ 98ನೇ ಜನ್ಮದಿನೋತ್ಸವ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಕನ್ನಡ ಚಿತ್ರರಂಗದ ಅಪ್ರತಿಮ ನಟ ಡಾ.ರಾಜ್‌ಕುಮಾರ್ ಹೆಸರನ್ನು ಕಳಸಾಪುರದ ಮುಖ್ಯ ರಸ್ತೆಗೆ ನಾಮಕರಣ ಮಾಡಲಾಗುವುದು ಎಂದು ಶಾಸಕ ಎಚ್.ಡಿ.ತಮ್ಮಯ್ಯ ತಿಳಿಸಿದರು.
ಚಿಕ್ಕಮಗಳೂರಿನ ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಿಂದ ಶುಕ್ರವಾರ ಆಯೋಜಿಸಿದ್ದ ಡಾ.ರಾಜ್‌ಕುಮಾರ್ 98ನೇ ಜನ್ಮದಿನೋತ್ಸವದಲ್ಲಿ ಮಾತನಾಡಿದ ಅವರು, ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‌ಕುಮಾರ್ ಈ ನಾಡಿನ ಸಾಂಸ್ಕೃತಿಕ ಅಸ್ಮಿತೆಯಾಗಿದ್ದು, ಇವರ ನಟನೆ ಮತ್ತು ಬದುಕು ಇಂದಿಗೂ ಆದರ್ಶಪ್ರಾಯವಾಗಿದೆ.ಡಾ.ರಾಜ್‌ಕುಮಾರ್ ಅವರು ಚಿತ್ರೀಕರಣದ ವೇಳೆ ಓಡಾಡಿದ್ದ ಕಳಸಾಪುರದ ಮುಖ್ಯ ರಸ್ತೆಯನ್ನು ₹50 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಆ ರಸ್ತೆಗೆ ''''''''ಡಾ.ರಾಜ್‌ಕುಮಾರ್ ರಸ್ತೆ'''''''' ಎಂದು ನಾಮಕರಣ ಮಾಡಲು ಜಿಲ್ಲಾಡಳಿತಕ್ಕೆ ಮನವಿ ಮಾಡಿರುವುದಾಗಿ ಘೋಷಿಸಿದರು.
ಅಣ್ಣಾವ್ರು ಎಂದಿಗೂ ಪರಭಾಷಾ ಚಿತ್ರಗಳಲ್ಲಿ ನಟಿಸದೆ ಕನ್ನಡಕ್ಕೇ ತಮ್ಮ ಜೀವನ ಮುಡುಪಾಗಿಟ್ಟಿದ್ದರು ಮತ್ತು ಅವರು ಎಂದೂ ಬೇರೆ ಚಿತ್ರಗಳನ್ನು ರಿಮೇಕ್ ಮಾಡಲಿಲ್ಲ ಎಂಬುದು ಅವರ ವ್ಯಕ್ತಿತ್ವಕ್ಕೆ ಸಾಕ್ಷಿ ಎಂದು ಸ್ಮರಿಸಿದರು.
ಡಾ.ರಾಜ್ ಕುಮಾರ್ ಅವರ ಚಲನಚಿತ್ರಗಳಾದ ''''''''ಬಂಗಾರದ ಮನುಷ್ಯ'''''''' ಕೃಷಿಯ ಮಹತ್ವ ಸಾರಿದರೆ, ''''''''ಗಂಧದ ಗುಡಿ'''''''' ಚಿತ್ರ ಪರಿಸರ ಮತ್ತು ಕಾಡನ್ನು ಉಳಿಸುವ ಬಗ್ಗೆ ಸಮಾಜಕ್ಕೆ ದೊಡ್ಡ ಸಂದೇಶ ನೀಡಿದೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾಧಿಕಾರಿ ನಾಗರಾಜ್ ಮಾತನಾಡಿ, ಡಾ.ರಾಜ್‌ಕುಮಾರ್ ಜೀವನ ಪ್ರತಿಯೊಬ್ಬರಿಗೂ ಮಾದರಿಯಾಗಿದೆ. ಎಷ್ಟೇ ಒತ್ತಡ ಮತ್ತು ಆಮಿಷಗಳಿದ್ದರೂ ಅವರು ಕನ್ನಡ ಭಾಷೆಬಿಟ್ಟು ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಲಿಲ್ಲ. ಕನ್ನಡಾಭಿಮಾನ ಎಂದಿಗೂ ಸ್ಮರಣೀಯ ಎಂದರು.ರಾಜ್‌ಕುಮಾರ್ ನಟಿಸಿದ ಚಿತ್ರಗಳು ಕೇವಲ ಮನರಂಜನೆಗೆ ಸೀಮಿತವಾಗಿರದೆ, ಯಾವುದಾದರೊಂದು ಸಾಮಾಜಿಕ ಸಂದೇಶವನ್ನು ಸಾರುತ್ತಿದ್ದವು. ''''''''ಬಂಗಾರದ ಪಂಜರ''''''''ದಂತಹ ಚಿತ್ರಗಳು ಇಂದಿಗೂ ಸಮಾಜಕ್ಕೆ ಪ್ರಸ್ತುತವಾಗಿವೆ ಎಂದು ತಿಳಿಸಿದರು.
ಡಾ.ರಾಜ್ ಕುಮಾರ್ ಅವರಿಗೆ ಮೊಣಕಾಲು ನೋವಿನಂತಹ ಆರೋಗ್ಯ ಸಮಸ್ಯೆಗಳಿದ್ದರೂ ಸಹ, ಸಾರ್ವಜನಿಕ ಹಿತದೃಷ್ಟಿ ಯಿಂದ ಹಮ್ಮಿಕೊಂಡಿದ್ದ ''''''''ರಸಸಂಜೆ'''''''' ಯಂತಹ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುವ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮೆರೆದಿದ್ದರು ಎಂದು ಸ್ಮರಿಸಿದರು.ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಂಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮಾ, ಜಿಲ್ಲಾ ಪಂಚಾಯತ್ ಸಿಇಒ ಕೀರ್ತನಾ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.