ಸಮಾಜದ ಏಳಿಗೆ ಬಗ್ಗೆ ಸಕರಾತ್ಮಕ ಚಿಂತನೆ ನಡೆಸುತ್ತಿಲ್ಲ. ಇದರಿಂದ ನಮ್ಮ ಸಮುದಾಯ ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ ಎಂದು ಸಮುದಾಯದ ಹಿರಿಯ ಮುಖಂಡ, ನಿವೃತ್ತ ಮುಖ್ಯ ಎಂಜಿನಿಯರ್ ಕೆ.ಜಿ.ಜಗದೀಶ್ ಬೇಸರ ವ್ಯಕ್ತಪಡಿಸಿದರು.
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಮಾದಿಗ ಸಮುದಾಯದ ಸ್ನಾತಕ, ಸ್ನಾತಕೋತ್ತರ ಪದವಿ ಪಡೆದ ಸಾವಿರಾರು ಯುವಕರು ಇಂದು ಕೆಲಸವಿಲ್ಲದೆ ಅಲೆಯುತ್ತಿದ್ಧಾರೆ. ಅವರಿಗೆ ಮಾರ್ಗದರ್ಶನ ಮಾಡುವ ಕೆಲಸವಾಗುತ್ತಿಲ್ಲ. ಸರ್ಕಾರದ ಸೌಲಭ್ಯ ಪಡೆದ ಸಮುದಾಯದ ನೌಕರರ ಸಮೂಹ ಜನಾಂಗದ ಅಭಿವೃದ್ಧಿ, ಸಮಾಜದ ಏಳಿಗೆ ಬಗ್ಗೆ ಸಕರಾತ್ಮಕ ಚಿಂತನೆ ನಡೆಸುತ್ತಿಲ್ಲ. ಇದರಿಂದ ನಮ್ಮ ಸಮುದಾಯ ಯುವಕರು ಕೆಲಸವಿಲ್ಲದೆ ನಿರುದ್ಯೋಗಿಗಳಾಗಿ ಅಲೆಯುತ್ತಿದ್ದಾರೆ ಎಂದು ಸಮುದಾಯದ ಹಿರಿಯ ಮುಖಂಡ, ನಿವೃತ್ತ ಮುಖ್ಯ ಎಂಜಿನಿಯರ್ ಕೆ.ಜಿ.ಜಗದೀಶ್ ಬೇಸರ ವ್ಯಕ್ತಪಡಿಸಿದರು.ನಗರದ ನಗರಸಭಾ ಕಲ್ಯಾಣ ಮಂಟಪದಲ್ಲಿ ತಾಲೂಕು ಮಾದಿಗ ನೌಕರರ ಸಾಂಸ್ಕೃತಿಕ ಸಂಘದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ, ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಆಶಯಗಳನ್ನು ಈಡೇರಿಸಲು ನಾವೆಲ್ಲರೂ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕಿದೆ. ಈಗಾಗಲೇ ಸಮುದಾಯದ ಲಕ್ಷಾಂತರ ಜನ ಸರ್ಕಾರಿ ನೌಕರಿಯಲ್ಲಿದ್ದು, ಎಲ್ಲಾ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಇಂದು ಉದ್ಯೋಗ ಪಡೆಯಲು ತಾಂತ್ರಿಕ ಶಿಕ್ಷಣದ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ನಾವೆಲ್ಲರು ಸಮುದಾಯದ ಭವಿಷ್ಯದ ಹಿತದೃಷ್ಠಿಯಿಂದ ಉದ್ಯೋಗವೂ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಸಮುದಾಯಕ್ಕೆ ಒದಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದರು.ಕಳೆದ ಹಲವಾರು ದಶಕಗಳ ಹೋರಾಟದ ಫಲವಾಗಿ ಮಾದಿಗ ಸಮುದಾಯದ ಅಭಿವೃದ್ಧಿಗೆ ಅವಶ್ಯವಾಗಿದ್ದ ಒಳಮೀಸಲಾತಿ ಜಾರಿಗೆ ಸರ್ಕಾರ ಈಗಾಗಲೇ ಅಗತ್ಯ ಕಾನೂನು ಕ್ರಮಗಳನ್ನು ರೂಪಿಸಿದೆ. ಸಮುದಾಯದಲ್ಲಿ ಉದ್ಯೋಗವನ್ನು ಬಯಸುವ ಸಾವಿರಾರು ಯುವಕರು ನಿರುದ್ಯೋಗಿಗಳಾಗಿ ಪರದಾಡುತ್ತಿದ್ದಾರೆ. ಕೇವಲ ಉತ್ತಮ ಶಿಕ್ಷಣದಿಂದ ಮಾತ್ರ ಬದುಕನ್ನು ರೂಪಿಸಿಕೊಳ್ಳಬಹುದು. ಈ ನಿಟ್ಟಿನಲ್ಲಿ ಸಮುದಾಯವನ್ನು ಜಾಗೃತಿಗೊಳಿಸುವ ಹೊಣೆ ಎಲ್ಲರ ಮೇಲಿದೆ.
ನಿವೃತ್ತ ಪರೀಕ್ಷಾ ಮಂಡಳಿ ನಿವೃತ್ತ ಜಂಟಿ ನಿರ್ದೇಶಕ ಎಂ.ರೇವಣಸಿದ್ದಪ್ಪ, ಸಮಾಜದಲ್ಲಿ ನಾವೆಲ್ಲರೂ ಸಮಾನವಾಗಿ ನಾವೆಲ್ಲರೂ ಬದುಕುವ ಅವಶ್ಯಕತೆ ಹೆಚ್ಚಾಗಿದೆ. ಆದರೆ ಸಮುದಾಯವನ್ನು ಸರಿದಾರಿಗೆ ತರುವನಿಟ್ಟಿನಲ್ಲಿ ನಮ್ಮೆಲ್ಲರ ಪ್ರಯತ್ನ ಶೂನ್ಯವಾಗಿದೆ. ಎಲ್ಲಾ ರೀತಿಯ ಸಂಪನ್ಮೂಲಗಳನ್ನು ಹೊಂದಿರುವ ಅಧಿಕಾರಿ ಮತ್ತು ನಿವೃತ್ತ ಅಧಿಕಾರಿವರ್ಗ ಸಮುದಾಯದ ಅಭಿವೃದ್ದಿಯ ಬಗ್ಗೆ ಚಿಂತನೆ ನಡೆಸಬೇಕಿದೆ. ಕಳೆದ ನೂರಾರು ವರ್ಷಗಳಿಂದ ಶೋಷಣೆಯ ಕರಿನೆರಳಿನಲ್ಲಿ ಬದುಕಿದ ಸಮುದಾಯಕ್ಕೆ ಹೊಸ ಆತ್ಮವಿಶ್ವಾಸವನ್ನು ಹುಟ್ಟಿಸುವ ಪ್ರಯತ್ನ ಆರಂಭಿಸಬೇಕಿದೆ ಎಂದರು.ಜಿಲ್ಲಾ ಮಾದಿಗ ನೌಕರರ ಸಾಂಸ್ಕೃತಿಕ ಸಂಘದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್ ಮಾತನಾಡಿ, ಇಂದಿನ ಅಭಿನಂದನಾ ಕಾರ್ಯಕ್ರಮದಲ್ಲಿ ನಾವೆಲ್ಲರೂ ಸಮುದಾಯದ ಅಭಿವೃದ್ದಿಯ ಬಗ್ಗೆ ಆಶಾಭಾವನೆಯನ್ನು ಹೊಂದುವ ಮಾತುಗಳನ್ನಾಡಿದ್ದೇವೆ. ಆದರೆ, ಇದನ್ನು ಕೃತಿಯಲ್ಲಿ ತಂದಾಗ ಮಾತ್ರ ನಮ್ಮೆಲ್ಲರ ಪರಿಶ್ರಮ ಸಾರ್ಥಕವಾಗುತ್ತದೆ. ಆದರೆ, ವಿಪರ್ಯಾಸವೆಂದರೆ ಎಲ್ಲಾ ಸಂಪನ್ಮೂಲಗಳನ್ನು ಹೊಂದಿರುವ ವ್ಯಕ್ತಿಗಳು ಸಮುದಾಯದ ಅಭಿವೃದ್ದಿಯ ಬಗ್ಗೆ ನಿರ್ಲಕ್ಷö್ಯತಾಳಿರುವುದು ನೋವಿನ ಸಂಗತಿಯಾಗಿದೆ ಎಂದು ಹೇಳಿದರು.
ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕಂಡ ಸಮಾನತೆಯ ಕನಸನ್ನು ನನಸುಮಾಡುವ ಹೊಣೆ ನಮ್ಮೆಲ್ಲರ ಮೇಲಿದೆ. ಪ್ರತಿಹಂತದಲ್ಲೂ ಈ ಬಗ್ಗೆ ಚಿಂತನೆ ನಡೆಸಬೇಕು, ಸಮುದಾಯದಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯ ನಿರಂತರ ನಡೆಯಬೇಕು ಎಂದರು.ಇದೇ ಸಂದರ್ಭದಲ್ಲಿ ನಿವೃತ್ತರಾದ ಶಿಕ್ಷಣ ಇಲಾಖೆಯ ಕೆ.ವೀರಣ್ಣ, ಪತ್ನಿ ವಸಂತಮ್ಮನವರನ್ನು ಸನ್ಮಾನಿಸಲಾಯಿತು.
ತಾಲೂಕು ಮಾದಿನನೌಕರರ ಸಾಂಸ್ಕೃತಿಕಸAಘದ ಅಧ್ಯಕ್ಷ ಡಿ.ಭೂತಪ್ಪ, ಡಿ.ಟಿ.ಜಗನ್ನಾಥ, ಕೆ.ವೀರಣ್ಣ, ಎಂ.ನಾರಾಯಣಸ್ವಾಮಿ, ಡಿ.ದಯಾನಂದ, ಸಿ.ಚಂದ್ರಪ್ಪ, ಬಿ.ಪಿ.ಪ್ರೇಮನಾಥ, ಎ.ಮಲ್ಲಿಕಾರ್ಜುನ್, ಟಿ.ಎಚ್.ಬಸವರಾಜಪ್ಪ, ಆನಂದಪ್ಪ, ಚೌಡಯ್ಯ, ಲೋಲಾಕ್ಷಮ್ಮ, ಎಸ್.ಬಿ.ತಿಪ್ಪೇಸ್ವಾಮಿ, ಸಿ.ಹನುಮಂತಪ್ಪ, ಎಚ್.ನೀಲಕಂಠಪ್ಪ, ಎಚ್.ಎಂ.ನಾಗರಾಜ, ಎಚ್.ತಿಪ್ಪೇಸ್ವಾಮಿ ಇತರರು ಹಾಜರಿದ್ದರು.