ಬಡ ಕುಟುಂಬದ ಹಿರಿಯ ಜೀವಗಳಿಗೆ ತುಮಕೂರಿನ ಸಮೃದ್ಧಿ ಶಿಕ್ಷಣ ಟ್ರಸ್ಟ್ ವತಿಯಿಂದ ಬೆಡ್ ಶೀಟ್, ಸ್ವೇಟರ್, ಟೋಪಿಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.
ಕನ್ನಡಪ್ರಭ ವಾರ್ತೆ ತುಮಕೂರು
ಬಡ ಕುಟುಂಬದ ಹಿರಿಯ ಜೀವಗಳಿಗೆ ತುಮಕೂರಿನ ಸಮೃದ್ಧಿ ಶಿಕ್ಷಣ ಟ್ರಸ್ಟ್ ವತಿಯಿಂದ ಬೆಡ್ ಶೀಟ್, ಸ್ವೇಟರ್, ಟೋಪಿಗಳನ್ನು ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.ತುಮಕೂರು ತಾಲೂಕು ಹೆಬ್ಬೂರು ಹೋಬಳಿಯ ನಾಗವಲ್ಲಿ ಗ್ರಾಮ ಪಂಚಾಯಿತಿಯ ರಂಗನಾಥಪುರದಲ್ಲಿ ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಬೆಡ್ ಶೀಟ್ ವಿತರಣೆ ಕಾರ್ಯ ನೆರವೇರಿಸಿದರು.
ಈ ವೇಳೆ ಮಾತನಾಡಿದ ಅವರು, ನಮ್ಮ ಸಮೃದ್ಧಿ ಶಿಕ್ಷಣ ಟ್ರಸ್ಟ್ ಈಗಾಗಲೇ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಾ ಮುನ್ನಡೆಯುತ್ತಿದೆ. ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣಕ್ಕೆ ನೆರವಾಗುವುದು. ಅಗತ್ಯ ಪರಿಕರ ವಿತರಿಸುವುದು. ಆರ್ಥಿಕ ನೆರವು ಕಲ್ಪಿಸುವ ಕಾರ್ಯ ಮಾಡುತ್ತಾ ಬಂದಿದೆ. ಅದೇ ರೀತಿ ಈಗ ಬಡ ಕುಟುಂಬದ ಹಿರಿಯ ಜೀವಗಳಿಗೆ ಮತ್ತು ವಿಶೇಷ ಚೇತನರಿಗೆ ಗುಣಮಟ್ಟದ ಬೆಡ್ ಶೀಟ್, ಸ್ವೇಟರ್, ಟೋಪಿ ವಿತರಿಸುವ ಕಾರ್ಯ ಕೈಗೊಂಡಿದ್ದೇವೆ ಎಂದರು.ಈ ಬಾರಿ ಚಳಿ ಹೆಚ್ಚಿರುವುದರಿಂದ ಹಿರಿಯ ಜೀವಗಳು ಚಳಿಯಲ್ಲಿ ಒದ್ದಾಡುವುದು ಕಂಡು ಈ ಕಾರ್ಯ ಕೈಗೊಂಡಿದ್ದೇವೆ. ಚಳಿಯಿಂದ ವಯಸ್ಸಾದವರ ಆರೋಗ್ಯದಲ್ಲಿ ಏರುಪೇರು ಆಗುವುದನ್ನು ಗಮನಿಸಿದ್ದೇವೆ. ಈ ನಿಟ್ಟಿನಲ್ಲಿ ಚಳಿ ತಡೆಯುವ ಮತ್ತು ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಾವು ಸಮೃದ್ಧಿ ಶಿಕ್ಷಣದ ಟ್ರಸ್ಟ್ ನಿಂದ ಬೆಡ್ ಶೀಟ್, ಸ್ವೇಟರ್, ಟೋಪಿ ಗಳನ್ನು ವಿತರಿಸುತ್ತೇವೆ. ಹೆಬ್ಬೂರು ಹೋಬಳಿಯಲ್ಲಿ ಈಗ ಈ ಕಾರ್ಯಕ್ಕೆ ಚಾಲನೆ ನೀಡಿದ್ದು ಮುಂದಿನ ದಿನಗಳಲ್ಲಿ ಹೋಬಳಿಯಾದ್ಯಂತ ಬಡ ಕುಟುಂಬಗಳ ಹಿರಿಯ ಜೀವಗಳಿಗೆ ಬೆಡ್ ಶೀಟ್, ಸ್ವೆಟರ್, ಟೋಪಿ ವಿತರಿಸಲಾಗುವುದು ಎಂದರು.
ಸಮೃದ್ಧಿ ಶಿಕ್ಷಣ ಟ್ರಸ್ಟ್ ನ ಕಾರ್ಯದರ್ಶಿ ಭೈರಸಂದ್ರ ಹರೀಶ್, ಟ್ರಸ್ಟಿಗಳಾದ ನರಸಿಂಹ ರಾಜು ವಡ್ಡರಹಳ್ಳಿ, ಕುಮಾರ್ ಹೆಬ್ಬಾಕ, ಗ್ರಾಪಟ ಸದಸ್ಯರಾದ ಜನಾರ್ಧನ್ ನಾಗವಲ್ಲಿ, ಪ್ರದೀಪ್ ಮುದಿಗೆರೆ, ಕುಮಾರ್ ರಂಗನಾಥಪುರ, ಡಿ.ಕೆ ಕಾಂತರಾಜು ದೊಡ್ಡೇರಿ ಇತರರು ಹಾಜರಿದ್ದರು.