ಮಾಗಡಿ: ತಾಲೂಕಿನ ಮೋಟೆಗೌಡನ ಪಾಳ್ಯ ಬೆಟ್ಟದ ಮಾದೇಶ್ವರ ಸ್ವಾಮಿ ದೇವಾಲಯದಲ್ಲಿ ಅಪಾರ ಭಕ್ತರ ಸಮ್ಮುಖದಲ್ಲು ಅದ್ಧೂರಿ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವ ನೆರವೇರಿತು.
ಶಾಸಕ ಬಾಲಕೃಷ್ಣ ಮಾತನಾಡಿ, ಹಿಂದೆ ಪೂರ್ವಜರು ಮಲೆ ಮಹದೇಶ್ವರ ಸ್ವಾಮಿ ದರ್ಶನಕ್ಕೆ ಕಾಲ್ನಡಿಗೆಯಲ್ಲಿ ವಾರಾನುಗಟ್ಟಲೆ ಕ್ರಮಿಸಿ ಸ್ವಾಮಿ ದರ್ಶನ ಪಡೆಯುತ್ತಿದ್ದರು. ಇದನ್ನರಿತ ಅವರು ಮೋಟೇಗೌಡನ ಪಾಳ್ಯದ ಬೆಟ್ಟದ ಮೇಲೆ ಮಲೆ ಮಹದೇಶ್ವರ ಸ್ವಾಮಿ ಪ್ರತಿಷ್ಠಾನೆ ಮಾಡಿ ಇಲ್ಲಿಯೇ ಸ್ವಾಮಿ ದರ್ಶನ ಮತ್ತು ಜಾತ್ರೆ, ರಥೋತ್ಸವ ವಿಶೇಷ ಪೂಜಾ ಕೈಂಕರ್ಯಗಳನ್ನು ಪ್ರಾರಂಭಿಸಿದರು. ಅದರಂತೆ ಪ್ರತಿ ಶಿವರಾತ್ರಿ ಮುಗಿದ ನಂತರ ಇಲ್ಲಿ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನೆರವೇರಿಸಲಾಗುವುದು ಎಂದರು. ಮಾಜಿ ಶಾಸಕ ಎ.ಮಂಜುನಾಥ್ ಮಾತನಾಡಿ, ನಾವು ಕೂಡ ಮಹದೇಶ್ವರ ಸ್ವಾಮಿಯ ಭಕ್ತರಾಗಿದ್ದು ಬಿಡದಿಯಿಂದ ಪ್ರತಿ ವರ್ಷವೂ ಶಿವರಾತ್ರಿ ದಿನದಂದು ಮಲೆ ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿಕೊಂಡು ಬರುತ್ತೇವೆ. ಅದರಂತೆ ಮೋಟೆಗೌಡನಪಾಳ್ಯಯಲ್ಲಿರುವ ಮಾದೇಶ್ವರ ಸ್ವಾಮಿ ಮಹಿಮೆ ಅಪಾರ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗಿದ್ದು ದೇವಸ್ಥಾನದ ಮೂಲ ಸೌಲಭ್ಯಗಳಿಗೆ ಪ್ರಾಮಾಣಿಕ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.ಜಾತ್ರಾ ಮಹೋತ್ಸದಲ್ಲಿ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ್, ಉಪಾಧ್ಯಕ್ಷ ಎಂ.ಆರ್.ರಂಗಸ್ವಾಮಯ್ಯ, ಕಾರ್ಯದರ್ಶಿ ಜಯರಂಗಯ್ಯ, ಖಜಾಂಚಿ ನಾಗರಾಜು, ಲೆಕ್ಕಪರಿಶೋಧಕ ಶಂಕರ್, ಅರುಂಧತಿ ಚಿಕ್ಕಣ್ಣ, ಡೈರಿ ಶ್ರೀನಿವಾಸ್, ಕುಮಾರ್, ಮಲ್ಲಿಕಾರ್ಜುನ ಸ್ವಾಮಿ, ಚನ್ನಪ್ಪ, ಗೌಡಯ್ಯ, ಬಾಲಕೃಷ್ಣ, ವೀರಗುಡ್ಡಯ್ಯ, ಶಿವಮೂರ್ತಿ, ರಂಗನಾಥ್, ಪುಟ್ಟರಾಜು ಭಾಗವಹಿಸಿದ್ದರು.
(ಪೋಟೋ ಕ್ಯಾಫ್ಞನ್)ಮಾಗಡಿ ತಾಲೂಕಿನ ಮೋಟೆಗೌಡನಪಾಳ್ಯ ಬೆಟ್ಟದ ಮಾದೇಶ್ವರ ಸ್ವಾಮಿ ದೇವಾಲಯದಲ್ಲಿ ಜಾತ್ರಾ ಮಹೋತ್ಸವ ಹಾಗೂ ಕೊಂಡೋತ್ಸವಕ್ಕೆ ಶಾಸಕ ಬಾಲಕೃಷ್ಣ ಪೂಜೆಸಲ್ಲಿಸಿ ಚಾಲನೆ ನೀಡಿದರು. ಮಾಜಿ ಶಾಸಕ ಎ.ಮಂಜುನಾಥ್ ಹಾಜರಿದ್ದರು.