ಗುಂಡ್ಲುಪೇಟೆ: ತಾಲೂಕಿನ ಹಿರೀಕಾಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಚಿಕ್ಕಾಟಿ ಮಹದೇವನಾಯಕ, ಉಪಾಧ್ಯಕ್ಷರಾಗಿ ಹಿರೀಕಾಟಿ ಎಚ್.ಎಸ್.ದೇವಣ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮಹದೇವನಾಯಕ, ಉಪಾಧ್ಯಕ್ಷ ಸ್ಥಾನಕ್ಕೆ ಎಚ್.ಎಸ್.ದೇವಣ್ಣ ನಾಮಪತ್ರ ಸಲ್ಲಿಸಿದರು.

ಸಂಘದ ಇತರೆ ನಿರ್ದೇಶಕರಾರೂ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸದ ಹಿನ್ನೆಲೆ ಅಧ್ಯಕ್ಷರಾಗಿ ಚಿಕ್ಕಾಟಿ ಮಹದೇವನಾಯಕ, ಉಪಾಧ್ಯಕ್ಷರಾಗಿ ಎಚ್.ಎಸ್.ದೇವಣ್ಣ ಅವಿರೋಧವಾಗಿ ಆಯ್ಕೆಯಾದರು ಎಂದು ಚುನಾವಣಾಧಿಕಾರಿ ಹೇಮಂತ್‌ ಕುಮಾರ್‌ ಘೋಷಿಸಿದರು.

ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಸಮಯದಲ್ಲಿ ತಾಪಂ ಮಾಜಿ ಉಪಾಧ್ಯಕ್ಷ ಬಂಗಾರನಾಯಕ, ಗ್ರಾಪಂ ಮಾಜಿ ಅಧ್ಯಕ್ಷ ಜಿ.ಮಹೇಶ್‌, ಹಿರೀಕಾಟಿ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಮಾಜಿ ಅಧ್ಯಕ್ಷ ಗುರುಪ್ರಸಾದ್(ಅಂಬರೀಶ್‌), ವಕೀಲ ಶಶಿಕಿರಣ್‌, ಸಂಘದ ನಿರ್ದೇಶಕರಾದ ಡಿ.ಎಂ.ಸತೀಶ್‌, ಎಚ್.ಸಿ.ಯಶೋದಮ್ಮ, ಪಿ.ಬೀರೇಗೌಡ, ಪ್ರಕಾಶ್‌, ಲೀಲಾವತಿ, ಶಿವಕುಮಾರ್‌, ಮಹೇಂದ್ರ, ಸಿ.ಎಂ.ಮಹೇಶ್‌, ಪಿ.ಸಿದ್ದರಾಜು, ಕಾಂಗ್ರೆಸ್‌ ಮುಖಂಡರಾದ ಎಚ್.ಸಿ.ಪುರುಷೋತ್ತಮ್‌, ಪುಟ್ಟರಾಜು, ಎಚ್.ವಿ.ಮಹದೇವಪ್ಪ, ಬಾನು ಕಿರಣ್‌, ವೆಂಕಟೇಶ್‌ ಹಾಗೂ ಎಂಸಿಡಿಸಿಸಿ ಬ್ಯಾಂಕ್‌ ಪ್ರತಿನಿಧಿ ಜಿ.ಕಾರ್ತೀಕ್‌, ಸಂಘದ ಮುಖ್ಯ ಕಾರ್ಯ ನಿರ್ವಾಹಕ ಡಿ.ಜಿ.ಮಹದೇವಪ್ರಸಾದ ಸೇರಿ ಹಲವರಿದ್ದರು.