ಬೀರೂರು.ಪುರಸಭೆ ಆದಾಯದ ಮೂಲವಾಗಿರುವ ಸಂತೆ ಮೈದಾನ ಅಧಿಕಾರಿಗಳ ನಿರ್ಲಕ್ಷತೆಗೆ ಸಾಕ್ಷಿಯಾಗಿದೆ. ಬರೀ ಆದಾಯ ನೋಡುವ ಅಧಿಕಾರಿಗಳು, ಅದರ ಅಭಿವೃದ್ಧಿಗೆ ತಲೆಕೆಡಿಸಿಕೊಳ್ಳದ ಪರಿಣಾಮ ಬೀರೂರು ಸಂತೆ ಮೈದಾನ ಗಬ್ಬು ನಾರುವ ಸ್ಥಿತಿ ತಲುಪಿದೆ.

ಬಾಗಿಲು ತೆರಯದ ನೂತನ ಶೌಚಾಲಯ: ಮೂಲಭೂತ ಸೌಕರ್ಯ ಮರೀಚಿಕೆ

ಬೀರೂರು ಎನ್.ಗಿರೀಶ್ಕನ್ನಡಪ್ರಭ ವಾರ್ತೆ, ಬೀರೂರು.ಪುರಸಭೆ ಆದಾಯದ ಮೂಲವಾಗಿರುವ ಸಂತೆ ಮೈದಾನ ಅಧಿಕಾರಿಗಳ ನಿರ್ಲಕ್ಷತೆಗೆ ಸಾಕ್ಷಿಯಾಗಿದೆ. ಬರೀ ಆದಾಯ ನೋಡುವ ಅಧಿಕಾರಿಗಳು, ಅದರ ಅಭಿವೃದ್ಧಿಗೆ ತಲೆಕೆಡಿಸಿಕೊಳ್ಳದ ಪರಿಣಾಮ ಬೀರೂರು ಸಂತೆ ಮೈದಾನ ಗಬ್ಬು ನಾರುವ ಸ್ಥಿತಿ ತಲುಪಿದೆ.ವಾರ್ಷಿಕ ಸಂತೆ ಮೈದಾನದ ಸುಂಕ ವಸೂಲಿಯನ್ನು₹4-5ಲಕ್ಷಕ್ಕೆ ಹರಾಜು ನೀಡುವ ಪುರಸಭೆ ಅಲ್ಲಿ ವ್ಯಾಪಾರ ನಡೆಸುವ ವರ್ತಕರಿಗೆ ಮೂಲಭೂತ ಸೌಕರ್ಯ ನೀಡುವಲ್ಲಿ ವಿಫಲವಾಗಿ ಸಾರ್ವಕನಿಕರು ಮತ್ತು ವರ್ತಕರ ಕೆಂಗಣ್ಣಿಗೆ ಗುರಿಯಾಗಿದೆ.ಸುಮಾರು 2 ಎಕರೆ ಪ್ರದೇಶದ ಪಟ್ಟಣದ ಹೃದಯ ಭಾಗದ ಸಂತೆ ಮೈದಾನದಲ್ಲಿ ದಶಕಗಳ ಹಿಂದಷ್ಟೆ ಮುಂದಾಲೋಚನೆ ಮಾಡದೇ ಅವೈಜ್ಞಾನಿಕವಾಗಿ ವರ್ತಕರು ವ್ಯಾಪಾರ ನಡೆಸಲು ಗೂಡಂಗಡಿ ರೀತಿ ಕಟ್ಟಡಗಳನ್ನು ನಿರ್ಮಿಸಲಾಗಿತ್ತು. ಆದರೆ ಪುರಸಭೆ ಅಧಿಕಾರಿಗಳ ನಿರ್ಲಕ್ಷತನದಿಂದ ಇದು ಬೀದಿ ನಾಯಿಗಳು, ಹಂದಿಗಳ ವಾಸಸ್ಥಾನವಾಗಿ ಗಬ್ಬು ನಾರುತ್ತಿವೆ.ಈ ಪರಿಣಾಮ ವಾರದ ಶನಿವಾರ ಸಂತೆ ನಡೆಸುವ ವರ್ತಕರು ದುರ್ನಾತ ತಾಳಲಾರದೇ ಸಂತೆ ಮುಖ್ಯ ರಸ್ತೆ ಇಕ್ಕೆಲಗಳು ಮತ್ತು ಹೆದ್ದಾರಿ ಬದಿಗಳಲ್ಲಿ ವ್ಯಾಪಾರ ನಡೆಸುವ ಸ್ಥಿತಿ ಇದೆ. ಈ ಹಿಂದೆ ಸಂತೆಯಲ್ಲಿ ವ್ಯಾಪಾರ ಮಾಡಲು ಕೆಲ ಕಟ್ಟೆಗಳನ್ನು ಕಟ್ಟಲಾಗಿತ್ತು. ಅವು ಸಹ ಶಿಥಿಲಗೊಂಡು ಬೀಳುವ ಸ್ಥಿತಿ ತಲುಪಿವೆ.ಶೌಚಾಲಯ ತೆರೆಯುವುದು ಯಾವಾಗ:ಪುರಸಭೆಯವರು ಸಾರ್ವಜನಿಕರು ಮತ್ತು ಮಹಿಳೆಯರು ಶೌಚಕ್ಕೆ ಬಯಲನ್ನೆ ಅವಲಂಬಿಸಿರುವುದನ್ನು ಮನಗಂಡು , ಲಕ್ಷಾಂತರ ರು. ವ್ಯಯಿಸಿ ನೂತನ ಶೌಚಾಲಯ ಕಟ್ಟಿದ್ದರೂ ಅದರ ಉದ್ಘಾಟನೆಯಾಗದೆ ಇರುವ ಪರಿಣಾಮ ವರ್ತಕರು ಮತ್ತೆ ಬಯಲನ್ನೆ ಅವಲಂಭಿಸುವಂತಾಗಿದ್ದು ನೂತನ ಶೌಚಾಲಯ ಕಟ್ಟಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.ಮಳೆಗಾಲದಲ್ಲಿ ಕೆಸರಿನ ರಾಡಿಯಾಗುವ ಸಂತೆ ರಸ್ತೆಗಳು:ಈ ಸಂತೆ ಮೈದಾನದಲ್ಲಿ ಸುಮಾರು ಏಳೆಂಟು ರಸ್ತೆಗಳಿಗೆ ಡಾಂಬಾರು ಕಾಣದ ಪರಿಣಾಮ ಮಳೆಗಾಲದಲ್ಲಿ ಕೆಸರಿನ ರಾಡಿ ಯಲ್ಲೇ ಸಾರ್ವಜನಿಕರು ಮತ್ತು ವ್ಯಾಪಾರಸ್ಥರು ಸಂತೆ ಮಾಡುವ ಸ್ಥಿತಿ ಇದೆ. ಈ ಮಣ್ಣಿನ ರಸ್ತೆಗಳು ಎಂದು ಡಾಂಬಾರು ಕಾಣುವುದೋ ಕಾದು ನೋಡಬೇಕಿದೆ.ಪಾಳು ಬಿದ್ದಿರುವ ಸಮುದಾಯ ಭವನ, ಕಸ ಸಂಗ್ರಹಣ ಕೇಂದ್ರದ ಕಟ್ಟಡಗಳು:ಸರ್ಕಾರ ಪಟ್ಟಣದ ಅಭಿವೃದ್ಧಿ ನಿಟ್ಟಿನಲ್ಲಿ ಕೋಟ್ಯಾಂತರ ರು. ವ್ಯಯಿಸಿ ಸಮುದಾಯ ಭವನ , ಒಣ-ಹಸಿ ಕಸ ಸಂಗ್ರಹಣ ಕೇಂದ್ರದ ಕಟ್ಟಡ ನಿರ್ಮಿಸಿದ್ದರೂ ಸಹ ಸಮುದಾಯ ಭವನ ಬಾಗಿಲು ತೆರೆಯದೇ ವರ್ಷಗಳೇ ಕಳೆದಿವೆ. ಕಸ ಸಂಗ್ರಹಣ ಕೇಂದ್ರದಲ್ಲಿ ಈವರೆಗೂ ಯಾವ ಕಸವನ್ನು ಬೇರ್ಪಡಿಸದ ಪರಿಣಾಮ ಕಟ್ಟಡಗಳು ಉಪಯೋಗಿಸದೇ ಪಾಳು ಬಿದ್ದಿವೆ.ಸಂತೆ ಮೈದಾನದ ಪಕ್ಕದಲ್ಲೇ ಕುರಿ ಗೊಬ್ಬರದ ರಾಶಿ:ಸಂತೆ ಮೈದಾನದ ಒಳ ಭಾಗದಲ್ಲಿ ಮೂರು ಮಾಂಸದ ಮಳಿಗೆಗಳಿವೆ. ಹರಾಜಿಗೆ ಪಡೆದಿರುವ ವ್ಯಕ್ತಿ ಅಲ್ಲಿಯೇ ಕುರಿಗಳ ಕೊಟ್ಟಿಗೆ ನಿರ್ಮಾಣ ಮಾಡಿ ಜೊತೆಗೆ ಕತ್ತರಿಸಿದ ಕುರಿ ಒಳಭಾಗದ ತ್ಯಾಜ್ಯ ಅಲ್ಲೇ ಶೇಖರಿಸಿರುವ ಪರಿಣಾಮ ಸಂತೆ ಒಳ ಭಾಗದಲ್ಲಿ ಗಬ್ಬು ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.ಒಟ್ಟಾರೆ ಪುರಸಭೆಗೆ ಆದಾಯ ತರುವ ಇಂತಹ ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯ, ರಸ್ತೆ ನಿರ್ಮಾಣ ಮಾಡಿ ವರ್ತಕರಿಗೆ ಮತ್ತು ಸಾರ್ವಜನಿಕರಿಗೆ ಅಧಿಕಾರಿಗಳು ಮತ್ತು ಶಾಸಕರು ಸ್ಪಂದಿಸುವರೇ ಕಾದುನೋಡಬೇಕಾಗಿದೆ.-- ಕೋಟ್ ---ಹಲವು ವರ್ಷಗಳಿಂದ ಇಲ್ಲಯೇ ಸೊಪ್ಪಿನ ವ್ಯಾಪಾರ ಮಾಡುವ ನಾವು ಸಂತೆಯಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವಂತಾಗಿದೆ. ಕಸ, ಗಬ್ಬು ವಾಸನೆಯಲ್ಲೇ ವ್ಯಾಪಾರ ಮಾಡುವಂತಾಗಿದೆ. ಹಲವು ಬಾರಿ ಪುರಸಭೆಗೆ ಈ ಸಮಸ್ಯೆ ಬಗ್ಗೆ ತಿಳಿಸಿದರೂ ಏನು ಪ್ರಯೋಜನವಿಲ್ಲಂತಾಗಿದೆ.

---ಮಂಜಮ್ಮ ಸೊಪ್ಪಿನ ವ್ಯಾಪಾರಿ

--ಶನಿವಾರ ಸಂತೆ ಹಿಂದಿನ ದಿನವೇ ಪೌರಕಾರ್ಮಿಕರ ಗ್ಯಾಂಗ್ ಬಿಟ್ಟು ಕೆಲಸ ಮಾಡಿಸಿ ಶುಚಿಯಾಗಿಡಲಾಗುತ್ತದೆ. ಜೊತೆಗೆ ಸಂತೆಯ ಮಾರನೇ ದಿನ ವರ್ತಕರು ಹಾಕಿದ್ದ ತ್ಯಾಜ್ಯವನ್ನು ಸ್ವಚ್ಛ ಮಾಡಿಸಲಾಗುತ್ತಿದೆ.

--ವೈ.ಎಂ.ಲಕ್ಷ್ಮಣ್, ಹಿರಿಯ ಆರೋಗ್ಯ ನಿರೀಕ್ಷಕ ಪುರಸಭೆ --

ಕಳೆದ ವಾರದಿಂದಷ್ಟೆ ನಾನು ಪುರಸಭೆ ಪ್ರಭಾರ ಮುಖ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಪಟ್ಟಣದ ಸಮಸ್ಯೆಗಳ ಬಗ್ಗೆ ತಿಳಿದು ಕೊಳ್ಳಲಾಗುತ್ತಿದೆ. ಕೂಡಲೆ ಸಂತೆ ಸ್ಥಳ ಪರಿಶೀಲನೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸುತ್ತೇನೆ.

---- ಮಂಜುನಾಥ್,ಪ್ರಭಾರ ಮುಖ್ಯಾಧಿಕಾರಿ, ಪುರಸಭೆ, ಶಾಶ್ವತ ಶೆಡ್ ನಿರ್ಮಾಣವಾದರೆ ಒಳಿತು:ಆದಾಯ ಬರುವ ಇಂತಹ ಸ್ಥಳಗಳಿಗೆ ಅಧಿಕಾರಿಗಳು ಮತ್ತು ಶಾಸಕರು ಶಾಶ್ವತ ಶೆಡ್ ನಿರ್ಮಾಣ ಮಾಡಿಕೊಟ್ಟರೆ ಬಿಸಿಲು ಮತ್ತು ಮಳೆಯಲ್ಲಿ ವ್ಯಾಪಾರ ನಡೆಸುವ ವರ್ತಕರಿಗೆ ಸಹಾಯ ಮಾಡಿದಂತಾಗುತ್ತದೆ. ಬಸವರಾಜ್, ನಾಗರಿಕ.13 ಬೀರೂರು 1 ಬೀರೂರಿನ ಹೃದಯ ಭಾಗದಲ್ಲಿರುವ ಸಂತೆ ಮೈದಾನ13 ಬೀರೂರು 2 ಬೀರೂರಿನ ಸಂತೆ ಮೈದಾನದಲ್ಲಿ ನೂತನವಾಗಿ ನಿರ್ಮಾಣವಾ್ ಶೌಚಾಲಯ ಉದ್ಘಾಟನೆಯಾಗದಿರುವುದು.13 ಬೀರೂರು 3ಬೀರೂರಿನ ಸಂತೆ ಮೈದಾನದಲ್ಲಿ ಪಾಳು ಬಿದ್ದಿರುವ ಸಮುದಾಯ ಭವನ,13 ಬೀರೂರು 4ಬೀರೂರಿನ ಸಂತೆ ಮೈದಾನದಲ್ಲಿ ಪಕ್ಕದಲ್ಲೇ ಕುರಿ ಗೊಬ್ಬರದ ರಾಶಿ13 ಬೀರೂರು 5ಬೀರೂರಿನ ಸಂತೆ ಮೈದಾನದಲ್ಲಿ ನಿರುಪಯುಕ್ತಬಾಗಿರುವ ಅಂಗಡಿ ಮಳಿಗೆಗಳು