ನರಸಿಂಹರಾಜಪುರ: ಸರ್ಕಾರಿ ಬಸ್ಸಿನಲ್ಲಿ ಮೀನ್ ಕ್ಯಾಂಪಿನ ಮಹಿಳೆಯೊಬ್ಬರು ಸೀಟಿಗಾಗಿ ಗಲಾಟೆ ಮಾಡಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾದ ಘಟನೆ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ.

ನರಸಿಂಹರಾಜಪುರ: ಸರ್ಕಾರಿ ಬಸ್ಸಿನಲ್ಲಿ ಮೀನ್ ಕ್ಯಾಂಪಿನ ಮಹಿಳೆಯೊಬ್ಬರು ಸೀಟಿಗಾಗಿ ಗಲಾಟೆ ಮಾಡಿ ವೃದ್ಧರೊಬ್ಬರ ಮೇಲೆ ಹಲ್ಲೆ ನಡೆಸಿ ಪೊಲೀಸರ ಅತಿಥಿಯಾದ ಘಟನೆ ಬುಧವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದಿದೆ.

ಶಿವಮೊಗ್ಗಕ್ಕೆ ತೆರಳುವ ಬಸ್‌ಗೆ ಬಸ್ಸು ಹತ್ತಿದ್ದ ನರಸಿಂಹರಾಜಪುರದ ಮೀನ್ ಕ್ಯಾಂಪಿನ ವಾಸಿಯಾದ ಮಹಿಳೆ ಬುಧವಾರ ಮಧ್ಯಾಹ್ನ ಬಸ್‌ ಹತ್ತಿದಾಗ ಎಲ್ಲಾ ಸೀಟುಗಳು ಭರ್ತಿಯಾಗಿದ್ದು ಮಹಿಳೆಗೆ ಸೀಟು ಇರಲಿಲ್ಲ. ಆಗ ಮುಂದಿನ ಸೀಟಿನಲ್ಲಿ ಕುಳಿತು ಶೃಂಗೇರಿಯಿಂದ ಶಿವಮೊಗ್ಗಕ್ಕೆ ಪ್ರಯಾಣಿಸುತ್ತಿದ್ದ ವೃದ್ಧರಿಗೆ ಕುಳಿತುಕೊಳ್ಳಲು ಜಾಗ ಕೊಡಿ ಎಂದು ಗಲಾಟೆ ತೆಗೆದಿದ್ದಾರೆ

ನಂತರ ಉಳಿದ ಸೀಟುಗಳಲ್ಲಿ ಕುಳಿತಿದ್ದ ಪ್ರಯಾಣಿಕರನ್ನು ಜಾಗ ಕೊಡಿ ಎಂದು ಗಲಾಟೆ ಮಾಡಿದ್ದಾರೆ. ಮಹಿಳೆ ಕೂಗಾಟ ನೋಡಿ ಬಸ್ಸು ಕಂಡಕ್ಟರ್ ಮತ್ತು ಡ್ರೈವರ್ ಪ್ರಯಾಣಿಕರಿಗೆ ಯಾಕೆ ತೊಂದರೆ ಕೊಡುತ್ತಿದ್ದೀಯಾ ? ಬಸ್ಸಿನಿಂದ ಇಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ, ಆ ಮಹಿಳೆ ಕಂಡೆಕ್ಟರ್ ಮತ್ತು ಡ್ರೈವರ್ ಜತೆಗೂ ಜಗಳ ಮಾಡಿ ಇನ್ನಷ್ಟು ರಂಪ ಮಾಡಿದ್ದಾರೆ.

ಈ ಹಿನ್ನೆಲೆಯಲ್ಲಿ ಡ್ರೈವರ್ ಬಸ್ಸನ್ನು ಸಮೀಪದ ಪೊಲೀಸ್ ಠಾಣೆ ಮುಂಭಾಗಬಸ್‌ ನಿಲ್ಲಿಸಿದ್ದಾರೆ. ಮಹಿಳಾ ಪೊಲೀಸರು ಆಕೆಯನ್ನು ಕೆಳಗೆ ಇಳಿಸಲು ಮುಂದಾದಾಗ ಪಟ್ಟು ಬಿಡದ ಮಹಿಳೆ ಪೊಲೀಸರ ಮೇಲೆಯೇ ಜಗಳಕ್ಕೆ ಹೋಗಿದ್ದಾರೆ. ಬಸ್ಸಿನಿಂದ ಇಳಿಯಬೇಕಾದರೆ ಬಸ್ಸಿನಲ್ಲಿದ್ದ ವೃದ್ದರ ಕೆನ್ನೆಗೆ ಹೊಡೆದು ಇಳಿದಿದ್ದಾಳೆ. ನರಸಿಂಹರಾಜಪುರದ ಮೀನ್ ಕ್ಯಾಂಪಿನ ವಾಸಿಯಾದ ಮಹಿಳೆ ಶಿವಮೊಗ್ಗದಲ್ಲಿ ವಾಸವಿದ್ದು ಆಗಾಗ ನರಸಿಂಹರಾಜಪುರ ಮೀನ್ ಕ್ಯಾಂಪ್‌ಗೆ ಬಂದು ಹೋಗುತ್ತಿದ್ದರು. ಮಹಿಳೆಯನ್ನು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಸಾರ್ವಜನಿಕರಿಗೆ ತೊಂದರೆ ನೀಡಿದ ಹಿನ್ನೆಲೆಯಲ್ಲಿ ಕೇಸು ಹಾಕಿ ಮನೆಗೆ ಕಳಿಸಿದ್ದಾರೆ. ಮಹಿಳೆ ಹೈ ಡ್ರಾಮದಿಂದ ಅರ್ಧ ಗಂಟೆಗಳ ಕಾಲ ಬಸ್ಸು ನಿಂತಿದ್ದು ಸೇರಿದ್ದ ಜನರು ಮಹಿಳೆ ಹುಚ್ಚಾಟ ವೀಕ್ಷಿಸಿದರು.