ಸಮುದಾಯದ ಬಡವರ ನೆರವಿಗೆ ನಿಧಿ ಸಂಗ್ರಹಣೆಗೆ ಮಹಾಸಭೆ ಆಶಯ: ಎಸ್.ರಘುನಾಥ್

| Published : Sep 21 2025, 02:00 AM IST

ಸಮುದಾಯದ ಬಡವರ ನೆರವಿಗೆ ನಿಧಿ ಸಂಗ್ರಹಣೆಗೆ ಮಹಾಸಭೆ ಆಶಯ: ಎಸ್.ರಘುನಾಥ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಸಮುದಾಯದ ಬಡವರಿಗೆ ಅರ್ಥಿಕ ನೆರವು ನೀಡಲು ನಿಧಿ ಸಂಗ್ರಹಣೆ ಆಶಯವನ್ನು ಮಹಾಸಭೆ ಹೊಂದಿದೆ ಎಂದು ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಜ್ಯಾಧ್ಯಕ್ಷ ಎಸ್.ರಘುನಾಥ್ ಹೇಳಿದ್ದಾರೆ.

- ತರೀಕೆರೆ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನಕ್ಕೆ ಎಸ್.ರಘುನಾಥ್ ಭೇಟಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಸಮುದಾಯದ ಬಡವರಿಗೆ ಅರ್ಥಿಕ ನೆರವು ನೀಡಲು ನಿಧಿ ಸಂಗ್ರಹಣೆ ಆಶಯವನ್ನು ಮಹಾಸಭೆ ಹೊಂದಿದೆ ಎಂದು ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಜ್ಯಾಧ್ಯಕ್ಷ ಎಸ್.ರಘುನಾಥ್ ಹೇಳಿದ್ದಾರೆ.

ಶನಿವಾರ ಪಟ್ಟಣದ ಬ್ರಾಹ್ಮಣ ಸೇವಾ ಸಮಿತಿಯಿಂದ ಮಹಾಮಹಿಮ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ತಾವು ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ 5 ತಿಂಗಳಲ್ಲಿ ಸಮುದಾಯದ ಮಕ್ಕಳ ವಿದ್ಯಾಭ್ಯಾಸ, ಚಿಕಿತ್ಸೆಗೆ ಮತ್ತು ದೇವಸ್ಥಾನ ನಿರ್ಮಿಸಲು ನೆರವು ನೀಡಬೇಕೆಂಬ ಮನವಿ ಬಹಳ ಪ್ರಮುಖವಾಗಿ ಕೇಳಿಬಂದಿದೆ. ಅದಕ್ಕಾಗಿ ಮಹಾಸಭೆಗಾಗಿ ರಾಜ್ಯಾದ್ಯಂತ ದಾನಿಗಳ ನೆರವಿನಿಂದ ₹100 ಕೋಟಿ ಸಂಗ್ರಹಿಸಿ ಮೂಲನಿಧಿ ಸ್ಥಾಪಿಸಿ ಅದರಿಂದ ಬರುವ ಬಡ್ಡಿ ಹಣದಲ್ಲಿ ನೆರವು ನೀಡಬೇಕೆಂಬ ಗುರಿಯನ್ನು ಮಹಾಸಭೆ ಹೊಂದಲಾಗಿದೆ ಎಂದು ತಿಳಿಸಿದರು.50 ವರ್ಷಗಳಿಂದ ನಮ್ಮ ಹಿರಿಯರು ಶ್ರಮಪಟ್ಟು ಮಹಾಸಭೆಯನ್ನು ಕಟ್ಟಿ ಬೆಳೆಸಿದ್ದಾರೆ. ಮಹಾಸಭೆಯಿಂದ ಸಭಾ ಭವನ, ಮಹಿಳಾ ಹಾಸ್ಟೆಲ್ ನ್ನು ನಡೆಸಲಾಗುತ್ತಿದೆ. ಇದೀಗ ಮಹಾಸಭೆ ಕಚೇರಿ ಚಿತ್ರಣವನ್ನು ಆಧುನಿಕಗೊಳಿಸಲಾಗುತ್ತಿದೆ ಎಂದು ತಿಳಿಸಿದ ಅವರು ಜಾತಿಗಣತಿಗೆ ಬಂದಾಗ ಧರ್ಮ ಹಿಂದೂ- ನಂ.1, ಜಾತಿಃ ಬ್ರಾಹ್ಮಣ- ನಂ.218, ಉಪ ಜಾತಿಃ ನಮೂದಿಸುವ ಅಗತ್ಯವಿಲ್ಲ ಎಂದು ಹೇಳಿದರು.ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್ ಮಾತನಾಡಿ ಮಹಾಸಭಾ ಚುವಾವಣೆ ಸಂದರ್ಭದಲ್ಲಿ ಮತ ಯಾಚನೆಗೆ ಎಸ್. ರಘುನಾಥ್ ತರೀಕೆರೆಗೆ ಆಗಮಿಸಿ ಶ್ರೀ ಸುಬ್ರಹ್ಮಣ್ಯೇಶ್ವರಸ್ವಾಮಿ ಆಶೀರ್ವಾದ ಪಡೆದಿದ್ದು, ಚುವಾವಣೆ ಯಲ್ಲಿ ಗೆಲುವು ಸಾಧಿಸಿ ಇದೀಗ ದೇವಸ್ಥಾನಕ್ಕೆ ಭೇಟಿ ನೀಡಿರುವುದು ಸಂತೋಷ ತಂದಿದೆ ಎಂದು ಹೇಳಿದರು.ಬ್ರಾಹ್ಮಣ ಸೇವಾ ಸಮಿತಿಯಿಂದ ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಜ್ಯಾಧ್ಯಕ್ಷ ಎಸ್.ರಘುನಾಥ್ ಅವರನ್ನು ಅಭಿನಂದಿಸಲಾಯಿತು.

ಬ್ರಾಹ್ಮಣ ಸೇವಾ ಸಮಿತಿ ಉಪಾಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ, ಖಚಾಂಚಿ ಡಿ.ಜಿ.ಸಚಿನ್, ಸಮಿತಿ ನಿರ್ದೇಶಕರು, ಸಮಿತಿ ಪದಾದಿಕಾರಿಗಳು, ಸದಸ್ಯರು ಮತ್ತು ರಾಜಶೇಖರ್, ಮುರುಳಿ ಮತ್ತಿತರರು ಭಾಗವಹಿಸಿದ್ದರು.

20ಕೆಟಿಆರ್.ಕೆ.4ಃ ತರೀಕೆರೆಯಲ್ಲಿ ಬ್ರಾಹ್ಮಣ ಸೇವಾ ಸಮಿತಿಯಿಂದ ಬೆಂಗಳೂರು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭೆ ರಾಜ್ಯಾಧ್ಯಕ್ಷ ಎಸ್.ರಘುನಾಥ್ ಅವರನ್ನು ಅಭಿನಂದಿಸಲಾಯಿತು. ಬ್ರಾಹ್ಮಣ ಸೇವಾ ಸಮಿತಿ ಅಧ್ಯಕ್ಷ ಆರ್.ಎನ್.ಶ್ರೀಧರ್, ಉಪಾಧ್ಯಕ್ಷ ಡಿ.ವಿ.ಕೃಷ್ಣಮೂರ್ತಿ, ಖಚಾಂಚಿ ಡಿ.ಜಿ.ಸಚಿನ್, ಸಮಿತಿ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು ಇದ್ದರು.