ಸಾರಾಂಶ
ಚಿತ್ರದುರ್ಗ: ಮಧ್ಯ ಕರ್ನಾಟಕದ ದಸರಾವೆಂದೇ ಬಿಂಬಿತಗೊಂಡ ಶರಣ ಸಂಸ್ಕೃತಿ ಉತ್ಸವಕ್ಕೆ ಶನಿವಾರ ಆಧೀಕೃತ ಚಾಲನೆ ದೊರೆಯಿತು.
ಉತ್ಸವದ ಅಂಗವಾಗಿ ಹದಿನಾಲ್ಕು ದಿನಗಳ ಕಾಲ ನಡೆಯುವ ಯೋಗ-ಆರೋಗ್ಯ-ಆಧ್ಯಾತ್ಮ ಶಿಬಿರವನ್ನು ಮುರುಘಾಮಠದ ಅನುಭವಮಂಟಪದಲ್ಲಿ ಎಸ್‌ಜೆಎಂ ವಿದ್ಯಾಪೀಠದ ಆಡಳಿತಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ಹಾಗೂ ಖ್ಯಾತ ಯೋಗಗುರು ವೈದ್ಯಶ್ರೀ ಚನ್ನಬಸವಣ್ಣ ಬಸವೇಶ್ವರರ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಮೂಲಕ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಚನ್ನಬಸವಣ್ಣ, ಯೋಗ ದೇಹದೊಳಗಿರುವ ಚೈತನ್ಯವನ್ನು ಜಾಗೃತಗೊಳಿಸುತ್ತದೆ. ಯೋಗ ಎಂದರೆ ಜ್ಞಾನ ಸಂಪಾದಿಸುವುದಲ್ಲ. ಯೋಗ ಎಂದರೆ ಅನುಭವಿಸುವುದು. ಶರಣ ಸಂಸ್ಕೃತಿ ಉತ್ಸವ ಮನಸ್ಸಿನಿಂದ ಹೇಳಬೇಕು. ಯೋಗವು ಮನುಷ್ಯನಲ್ಲಿರುವ ಜಡತ್ವವನ್ನು ತೊಡೆದು ಹಾಕಿ, ಆರೋಗ್ಯವನ್ನು ನೀಡುವುದರಿಂದ ಏಕಾಗ್ರತೆ, ದೇಹ ಸದೃಢತೆ ಹಾಗೂ ಆಧ್ಯಾತ್ಮಿಕತೆಯ ಕಡೆಗೆ ಒಲವು ಮೂಡುತ್ತದೆ. ಯೋಗವು ಒಂದು ಧರ್ಮವಲ್ಲ. ಇದೊಂದು ಆರೋಗ್ಯಕರ ಮನಸ್ಸಿನ ಗುರಿಯನ್ನು ಹೊಂದಿರುವ ಜೀವನ ವಿಧಾನವಾಗಿದೆ ಎಂದರು. ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಆಡಳಿತಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ಗುರುಮಠಕಲ್‌ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಯೋಗ ರಾಷ್ಟ್ರೀಯ ಶಿಕ್ಷಣ ಅಧ್ಯಕ್ಷ ಪ್ರಸನ್ನಕುಮಾರ್, ಯೋಗ ಅಚಾರ್ಯ ಚಿನ್ಮಯಾನಂದ, ಮಂಜುನಾಥ್, ಬಸವರಾಜಪ್ಪ, ಗೀತಮ್ಮ, ಭಾರತಿ, ಮಲ್ಲೇಶಣ್ಣ ಉಪಸ್ಥಿತರಿದ್ದರು.ಜಮುರಾ ಕಪ್ ಪಂದ್ಯಾವಳಿಗೆ
ಮಾದಾರಶ್ರೀ ಚಾಲನೆಕನ್ನಡಪ್ರಭ ವಾರ್ತೆ ಚಿತ್ರದುರ್ಗಶರಣ ಸಂಸ್ಕೃತಿ ಉತ್ಸವ- ಅಂಗವಾಗಿ ಎಸ್‌ಜೆಎಂ ವಿದ್ಯಾಪೀಠದ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಏರ್ಪಡಿಸಲಾದ ಜಮುರಾ ಕಪ್ ಪಂದ್ಯಾವಳಿಗಳಿಗೆ ಎಸ್‌ಜೆಎಂ ತಾಂತ್ರಿಕ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ಜಮುರಾ ಕಪ್ ಪಂದ್ಯಾವಳಿಯನ್ನು ವಿಶೇಷವಾಗಿ ವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಆಯೋಜಿಸಿರುವುದು ಶ್ಲಾಘನೀಯ. ವಿದ್ಯಾಪೀಠದಡಿ ವಿದ್ಯಾಭ್ಯಾಸ ಮಾಡುತ್ತಿರುವ ನಿಮ್ಮಗಳಿಗೆ ಈ ಸಾಲಿನಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಕ್ರೀಡಾ ಸಾಧನೆ ಮಾಡಿ. ವಿದ್ಯಾಭ್ಯಾಸ ಮೀರಿದ ಶಕ್ತಿ ಕ್ರೀಡೆಗೆ ಇದೆ. ಕ್ರೀಡಾ ಕ್ಷೇತ್ರದಲ್ಲಿ ನಿರಂತರ ಪರಿಶ್ರಮವಿರಬೇಕು. ಕ್ರೀಡಾ ಸ್ಫೂರ್ತಿಯನ್ನು ತುಂಬಿಕೊಂಡು ಶ್ರಮಪಟ್ಟರೆ ನಿಮ್ಮ ಸಾಧನೆ ಹೆಚ್ಚಾಗುತ್ತದೆ ಎಂದು ತಿಳಿಸಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ ಪೀರ್ ಮಾತನಾಡಿ, ಕ್ರೀಡೆಯಲ್ಲಿ ಭಾಗವಹಿಸುವವರು ಗೆಲುವಿಗೆ ಮಾತ್ರ ಶ್ರಮಿಸಬೇಡಿ. ನಿಮ್ಮ ಆರೋಗ್ಯ ಚೆನ್ನಾಗಿರಲು ಶ್ರಮಿಸಿ. ದುಶ್ಚಟಗಳಿಂದ ದೂರವಿದ್ದು, ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಕ್ರೀಡಾ ಸ್ಫೂರ್ತಿ ಮೆರೆದು ಒಳ್ಳೆಯ ಕ್ರೀಡಾಪಟುಗಳಾಗಿ ನಾಡಿಗೆ ಕೀರ್ತಿ ತನ್ನಿ ಎಂದು ಹೇಳಿದರು.ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ, ಗುರುಮಠಕಲ್‌ನ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಸಿದ್ಧಬಸವ ಕಬೀರ ಸ್ವಾಮಿಗಳು, ಬಸವ ಮಹಾಂತ ಸ್ವಾಮಿಗಳು, ಕೊಲ್ಲಾಪುರದ ಶಿವಾನಂದ ಸ್ವಾಮಿಗಳು, ಬಸವಲಿಂಗಮೂರ್ತಿ ಶರಣರು, ಡಿಡಿಪಿಐ ಮಂಜುನಾಥ್, ನಗರಸಭೆ ಅಧ್ಯಕ್ಷೆ ಎಂ.ಪಿ.ಅನಿತಾ, ಡಾ.ಭರತ್.ಪಿ.ಬಿ, ರಾಜೇಶ್.ಪಿ.ಎಂ ಜಿ, ಎಂ.ಕೆ.ಹಟ್ಟಿ ಗ್ರಾ.ಪಂ. ಅಧ್ಯಕ್ಷ ಗಣೇಶ್, ರಮೇಶ್, ವಕೀಲರಾದ ಉಮೇಶ್, ವಿವಿಧ ಶಾಲಾ-ಕಾಲೇಜುಗಳ ಮುಖ್ಯಸ್ಥರುಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಸರಳ ಬದುಕಿನ ನಿರ್ವಹಣೆಗೆಸಹಜ ಶಿವಯೋಗ ಪೂರಕಕನ್ನಡಪ್ರಭ ವಾರ್ತೆ ಚಿತ್ರದುರ್ಗಸರಳ ಬದುಕಿನ ನಿರ್ವಹಣೆಗೆ ಸಹಜ ಶಿವಯೋಗ ಪೂರಕ ಎಂದು ಶಿರಸಂಗಿಯ ಬಸವಮಹಾಂತ ಸ್ವಾಮೀಜಿ ಹೇಳಿದರು.
ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಬೃಹನ್ಮಠದಲ್ಲಿ ಮುರುಗಿಯ ಶ್ರೀ ಶಾಂತವೀರಸ್ವಾಮಿಗಳ ಲೀಲಾವಿಶ್ರಾಂತಿ ಸನ್ನಿಧಾನದಲ್ಲಿ ಆಯೋಜಿಸಲಾಗಿದ್ದ ಸಹಜ ಶಿವಯೋಗ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದರು.ಸಹಜ ಶಿವಯೋಗದಲ್ಲಿ ಸಾಧನೆ ಮಾಡಿದ ಮಹನೀಯರ ದೊಡ್ಡ ಪರಂಪರೆಯೇ ಚರಿತ್ರೆಯಲ್ಲಿ ಆಗಿ ಹೋಗಿದೆ. ಅಥಣಿ ಶಿವಯೋಗಿಗಳು, ಹರ್ಡೇಕರ್ ಮಂಜಪ್ಪನವರು. ಬಿ.ಡಿ.ಜತ್ತಿಯವರು ಸೇರಿದಂತೆ ಸಾವಿರಾರು ಮಹನೀಯರ ಉಲ್ಲೇಖಿಸಬಹುದು ಎಂದರು. ಡಾ.ಬಸವಕುಮಾರ ಸ್ವಾಮೀಜಿ, ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು, ಸಿದ್ಧಬಸವ ಕಬೀರ ಸ್ವಾಮಿಗಳು, ಶ್ರೀ ಬಸವ ಮಹಾಂತ ಸ್ವಾಮಿಗಳು, ಕೊಲ್ಲಾಪುರದ ಶ್ರೀ ಶಿವಾನಂದ ಸ್ವಾಮಿಗಳು, ಶ್ರೀ ಬಸವಲಿಂಗಮೂರ್ತಿ ಶರಣರು, ಉಳವಿ ಬಸವಕೇಂದ್ರದ ಲಿಂಗಮೂರ್ತಿ ಸ್ವಾಮೀಜಿ ಉಪಸ್ಥಿತರಿದ್ದರು.