ಕನ್ನಡೆ ಪ್ರಭ ವಾರ್ತೆ ಕಡೂರು

ಮತದಾನ ಪ್ರತೀ ಭಾರತೀಯರ ಹಕ್ಕಾಗಿದ್ದು. ಅರ್ಹ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಹೊರಗುಳಿಯದಂತೆ ಎಸ್ಐಆರ್ ಪ್ರಕ್ರಿಯೆ ಯಶಸ್ವಿಗೊಳಿಸಬೇಕು ಎಂದು ಶಾಸಕ ಕೆ.ಎಸ್. ಆನಂದ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲೂಕು ಸ್ವೀಪ್ ಸಮಿತಿಯಿಂದ ಎಸ್.ಐ.ಆರ್.ಜಾಗೃತಿ ಕುರಿತು ಹಮ್ಮಿ ಕೊಂಡಿದ್ದ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಮತದಾರರ ಪರಿಷ್ಕರಣೆ ಅತ್ಯಂತ ಅಗತ್ಯ ಪ್ರಕ್ರಿಯೆ ಆಗಿದ್ದು ಬಿಎಲ್ ಒಗಳು ಸಮರ್ಪಕವಾಗಿ ಕಾರ್ಯನಿರ್ವಹಿಸಿದರೆ ಮತದಾರರ ಪಟ್ಟಿ ಸುಲಭವಾಗಲಿದೆ. ಇಲ್ಲವಾದರೆ ಅರ್ಹರ ಹೆಸರು ಪರಿಷ್ಕರಣೆಯಿಂದ ಹೊರಗುಳಿದರೆ ಮತದಾನದ ಪ್ರಕ್ರಿಯೆಗಳು ಅಪಾಯಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಎಸ್ ಐ ಆರ್ ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ತಾ.ಪಂ. ಇಒ ಸಿ.ಆರ್.ಪ್ರವೀಣ್ ಮಾತನಾಡಿ ಕೇವಲ ಚುನಾವಣೆ ಸಮಯದಲ್ಲಿ ಮಾತ್ರ ಮತದಾರರಲ್ಲಿ ಜಾಗೃತಿ ಮೂಡಿಸುವ ಬದಲು ಮತದಾರರ ಪರಿಷ್ಕರಣೆ ಸಮಯದಲ್ಲೂ ಅರಿವು ಮೂಡಿಸುವ ಕಾರ್ಯ ಆಗಬೇಕೆಂಬುದು ಚುನಾವಣಾ ಆಯೋಗದ ಉದ್ದೇಶ. ಈ ಹಿನ್ನೆಲೆಯಲ್ಲಿ ಸ್ವೀಪ್ ಸಮಿತಿ ಮೂಲಕ ಜಾಥಾ ಕಾರ್ಯಕ್ರಮ ನಡೆಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿ.ಎಸ್. ಪೂರ್ಣಿಮಾ, ಬಿಸಿಎಂ ಅಧಿಕಾರಿ ದೇವರಾಜ್, ಸಿಡಿಪಿಒ ದೇವರಾಜ್, ಪುರಸಭೆ ಮುಖ್ಯಾಧಿಕಾರಿ ಶ್ರೇಯಸ್ ಕುಮಾರ್, ಬಿಇಒ ತಿಮ್ಮಯ್ಯ, ನಟರಾಜ್, ಹರೀಶ್, ಪ್ರಮೀಳಾ, ಪ್ರಕಾಶ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬಿಎಲ್ ಒ ನೌಕರರು ಜಾಥಾದಲ್ಲಿ ಭಾಗವಹಿಸಿದ್ದರು.


18ಕೆಕೆಡಿಯು1.

ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಎಸ್ ಐ ಆರ್ ಅಂಗವಾಗಿ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಬೈಕ್ ಜಾಥಾ ಕಾರ್ಯಕ್ರಮಕ್ಕೆ ಶಾಸಕ ಕೆ.ಎಸ್. ಆನಂದ್ ಚಾಲನೆ ನೀಡಿದರು.