ಕೇರಳ ಮೂಲದ ಆಧ್ಯಾತ್ಮಿಕ ಗುರು ಶ್ರೀ ಎಂ. (ಮುಮ್ತಾಜ್ ಅಲಿ) ಅವರು ಕೊಡಗಿನ ಮಲ್ಮಾ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಧ್ಯಾನ ಮಂದಿರ, ಗೋಶಾಲೆ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ. ಸ್ಥಳೀಯರು ಮತ್ತು ಪರಿಸರವಾದಿಗಳ ತೀವ್ರ ಪ್ರತಿಭಟನೆ, ವಿರೋಧದ ನಂತರ, ಅಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ಗೌರವಿಸಿ ಆ ಸ್ಥಳವನ್ನು ತೊರೆಯಲು ನಿರ್ಧರಿಸಿರುವ ಅವರು ವಿವಾದಕ್ಕೆ ಕಾರಣವಾಗಿದ್ದ ಸ್ಥಳದಲ್ಲಿ ಯಾವುದೇ ಯೋಜನೆಯನ್ನು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಕನ್ನಡಪ್ರಭವಾರ್ತೆ ಮಡಿಕೇರಿ

ಕೇರಳ ಮೂಲದ ಆಧ್ಯಾತ್ಮಿಕ ಗುರು ಶ್ರೀ ಎಂ. (ಮುಮ್ತಾಜ್ ಅಲಿ) ಅವರು ಕೊಡಗಿನ ಮಲ್ಮಾ ಬೆಟ್ಟದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಧ್ಯಾನ ಮಂದಿರ, ಗೋಶಾಲೆ ನಿರ್ಮಾಣ ಯೋಜನೆಯನ್ನು ಕೈಬಿಟ್ಟಿರುವುದಾಗಿ ತಿಳಿಸಿದ್ದಾರೆ. ಸ್ಥಳೀಯರು ಮತ್ತು ಪರಿಸರವಾದಿಗಳ ತೀವ್ರ ಪ್ರತಿಭಟನೆ, ವಿರೋಧದ ನಂತರ, ಅಲ್ಲಿನ ಧಾರ್ಮಿಕ ಮತ್ತು ಸಾಂಸ್ಕೃತಿಕ ಭಾವನೆಗಳನ್ನು ಗೌರವಿಸಿ ಆ ಸ್ಥಳವನ್ನು ತೊರೆಯಲು ನಿರ್ಧರಿಸಿರುವ ಅವರು ವಿವಾದಕ್ಕೆ ಕಾರಣವಾಗಿದ್ದ ಸ್ಥಳದಲ್ಲಿ ಯಾವುದೇ ಯೋಜನೆಯನ್ನು ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀವನಪೂತಿ೯ ಹಿಂದೂ ಧಮ೯ದ ವಿವಿಧ ಚಟುವಟಿಕೆ ಕೈಗೊಳ್ಳುತ್ತಲೇ ಬಂದಿದ್ದ ತನ್ನ ಮೇಲೆ ಅನಗತ್ಯ ಆರೋಪ ಮಾಡಲಾಗಿದೆ ಬೇಸರ ವ್ಯಕ್ತಪಡಿಸಿದ ಅವರು, ಧ್ಯಾನಕೇಂದ್ರ, ಗೋಶಾಲೆ ರೂಪಿಸುವ ಉದ್ದೇಶದಿಂದ ಮಲ್ಮಬೆಟ್ಟದಿಂದ 2.50 ಕಿ.ಮೀ. ದೂರದಲ್ಲಿ ಸುಂದರವಾದ ಜಾಗ ಖರೀದಿಸಿದ್ದೆ. ಸ್ಥಳೀಯರು ಮಲ್ಮಬೆಟ್ಟದ ಬಗ್ಗೆ ಮಾಹಿತಿ ನೀಡಿರಲಿಲ್ಲ. ಹೀಗಾಗಿ ತನಗೆ ಸ್ಥಳೀಯರ ಧಾಮಿ೯ಕ ಭಾವನೆಗಳಿಗೆ ಚ್ಯುತಿ ಉಂಟಾಗುವ ಬಗ್ಗೆ ತಿಳಿದಿರಲಿಲ್ಲ.58 ಎಕ್ರೆ ಜಮೀನಿನ ಪೈಕಿ 10 ಎಕರೆ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಭೂಪರಿವತ೯ನೆ ಮಾಡಲು ಅಜಿ೯ ಸಲ್ಲಿಸಿದ್ದೆ. ಇದೀಗ ಆ ಉದ್ದೇಶದಿಂದ ಹಿಂದಕ್ಕೆ ಸರಿದಿದ್ದೇನೆ. ಸ್ಥಳೀಯರಿಂದ ಖರೀದಿಸಿರುವ 58 ಎಕರೆ ಜಾಗವನ್ನು ಖರೀದಿಸಿದ ಮೌಲ್ಯವಾದ 6.25 ಕೋಟಿ ರು.ಗೆ ಕೊಡವರಿಗೆ ಮಾರಾಟ ಮಾಡಲು ಸಿದ್ದ. ಯಾರೂ ಖರೀದಿಗೆ ಬಾರದೇ ಹೋದರೆ ಸಕಾ೯ರಕ್ಕೆ ನೀಡುವುದಾಗಿ ಅವರು ಹೇಳಿದರು.

ಜಾಗ ಮಾರಾಟ ಮಾಡಿದವರೇ ಇಲ್ಲಿ ಧ್ಯಾನಕೇಂದ್ರ ಮಾಡಬಹುದು ಎಂದು ತನಗೆ ಸಲಹೆ ನೀಡಿ ಜಾಗ ಮಾರಾಟ ಮಾಡಿದ್ದರು ಎಂದು ಮಾಹಿತಿ ನೀಡಿದರು.

ಕೊಡಗನ್ನು ತೊರೆಯಲು ನಿರ್ಧಾರ : ಇನ್ನು ಮುಂದೆ ಕೊಡಗಿನಲ್ಲಿ ತನಗೆ ನೆಲೆಸಲು ಇಚ್ಛೆಯಿಲ್ಲ ಎಂದಿರುವ ಶ್ರೀ ಎಂ ಕೊಡಗಿನಲ್ಲಿರುವ ಕಾಫಿ ತೋಟವನ್ನೂ ಮಾರಾಟ ಮಾಡಲು ಚಿಂತಿಸುತ್ದಿದ್ದೇನೆ. ತನ್ನ ಹೆಸರು ಮುಸ್ಲಿಂ ಹೆಸರಾಗಿದೆ ಎಂಬ ಕಾರಣಕ್ಕೆ ನನ್ನನ್ನು ವಿರೋಧಿಸುತ್ತಿರುವುದೂ, ಟೀಕೆ ಮಾಡುತ್ತಿರುವುದು ಬೇಸರ ತಂದಿದೆ. ತಾನು ಅನೇಕ ಹಿಂದೂ ದೇವಾಲಯಗಳನ್ನು ನಿಮಿ೯ಸಿದ್ದೇನೆ. ಉಪನಿಷತ್, ರಾಮಾಯಣ, ವೇದಗಳ ಬಗ್ಗೆ ಸಾಕಷ್ಟು ಮಾಹಿತಿ ಹೊಂದಿದ್ದೇನೆ. ಹೀಗಿರುವಾಗ ಮುಸ್ಲಿಂ ಹೆಸರಿದೆ ಎಂಬ ಕಾರಣಕ್ಕೆ ಸಾಮಾಜಿಕ ಜಾಲ ತಾಣಗಳಲ್ಲಿ ಅನಗತ್ಯ ಟೀಕೆ ಮಾಡುತ್ತಿರುವುದು ಬೇಸರ ತಂದಿದೆ. ನಾನಿನ್ನು ಕೊಡಗಿನಿಂದ ದೂರವಾಗುತ್ತೇನೆ. ಖರೀದಿಸಿದ ಆಸ್ತಿ ನೋಡಲೂ ಕೂಡ ಆ ಜಾಗಕ್ಕೆ ಹೋಗಲಾರೆ ಎಂದು ವಿಷಾದ ವ್ಯಕ್ತಪಡಿಸಿದರು.ಶ್ರೀ ಎಂ ಅನುಯಾಯಿ ಬಿದ್ದಂಡ ಲಾಲ್ ಕುಶಾಲಪ್ಪ ಮಾತನಾಡಿ, ಸ್ಥಳೀಯರಿಗೆ ಜಾಗ ಖರೀದಿಗೆ ವಿರೋಧವಿದ್ದರೆ ಗ್ರಾಮಸಭೆಗೆ ತಮ್ಮನ್ನು ಕರೆದು ಮಾಹಿತಿ ಪಡೆಯಬಹುದಿತ್ತು. ಸಂವಹನದ ಕೊರತೆಯಿಂದ ಇಂತಹ ವಿವಾದ ಸೃಷ್ಟಿಯಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಬಿದ್ದಂಡ ಬೋಪಣ್ಣ ಉಪಸ್ಥಿತರಿದ್ದರು.