ಸಾರಾಂಶ
ವಾರ್ಷಿಕೋತ್ಸವ । ಶಾರದಾ ಸ್ಕೂಲ್‌ನ ವೈಭವ, ದಶಮಾನೋತ್ಸವ ಸಂಭ್ರಮ
ಕನ್ನಡಪ್ರಭ ವಾರ್ತೆ ಹಳೇಬೀಡುಇಂದಿನ ದಿನಗಳಲ್ಲಿ ಮನುಷ್ಯನಿಗೆ ಅಕ್ಷರ ಜ್ಞಾನ ಇರಲೇಬೇಕು. ಇದ್ದರೆ ಮನುಷ್ಯನಿಗೆ ಪ್ರಪಂಚದಲ್ಲಿ ಜೀವನ ನಡೆಸಲು ಸಾಧ್ಯ ಎಂದು ಬೇಲೂರು ಶಾಸಕ ಎಚ್.ಕೆ. ಸುರೇಶ್ ತಿಳಿಸಿದರು.
ಹಳೇಬೀಡಿನ ಶಾರದಾ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಸಂಧರ್ಭದಲ್ಲಿ ಮಾತನಾಡಿ, ಇಂದು ಗ್ರಾಮಾಂತರ ಪ್ರದೇಶದಲ್ಲಿ ಶಾಲೆಗಳನ್ನು ನಡೆಸಲು ಎಷ್ಟು ಕಷ್ಟಕರವಾಗಿರುತ್ತದೆ, ಇಲ್ಲಿಯ ಜನರು ರೈತಾಪಿ ಕುಟುಂಬ ವರ್ಗದವರು ಹೆಚ್ಚಾಗಿದ್ದಾರೆ. ಅವರಿಗೆ ತಮ್ಮ ಮಕ್ಕಳನ್ನು ಓದಿಸಲು ಕಷ್ಟಕರವಾಗಿರುತ್ತದೆ. ಅದರಲ್ಲೂ ಈ ಶಾಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಕಂಡು ನನಗೆ ಸಂತೋಷವಾಗಿದೆ. ಇದರ ಹಿಂದೆ ಈ ಶಾಲೆಯ ಮುಖ್ಯಶಿಕ್ಷಕಿ ನಂದಿನಿ ಮತ್ತು ಅಧ್ಯಕ್ಷ ಯತೀಶ್ ರವರ ಎಷ್ಟು ಶ್ರಮ ಇದೆ ಎಂಬುದು ಅರ್ಥವಾಗುತ್ತದೆ. ಯಾವುದೇ ಶಾಲೆ ನಡೆಸಲು ಮೂಲ ಫೌಂಡೇಶನ್ ಅಂದರೆ ಶಿಕ್ಷಕ ವರ್ಗದವರು ಎಂದು ಹೇಳಿದರು.ಡಾ.ಹನುಮಂತ ಶೆಟ್ಟಿ ಅವರಿಗೆ ಶಾಲೆಯ ಪರವಾಗಿ ಸನ್ಮಾನವನ್ನು ಮಾಡಿದರು. ಅವರು ಮಾತನಾಡಿ, ‘ನಾನು ಈ ಊರಿನಲ್ಲಿ ೫೦ ವರ್ಷಗಳ ಕಾಲ ವೈದ್ಯ ವೃತಿಯನ್ನು ಸಲ್ಲಿಸಿದ್ದೇನೆ. ಇಂದಿನ ದಿನಗಳಲ್ಲಿ ರೋಗಗಳು ಹೆಚ್ಚಿನ ರೀತಿಯಲ್ಲಿ ಬರುತ್ತಿವೆ. ಮಕ್ಕಳು ತಮ್ಮ ತಮ್ಮ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಮನೆಯಲ್ಲಿ ಬಿಸಿ ನೀರನ್ನು ಕುಡಿಯಬೇಕು, ಮಾಸ್ಕ್‌ನ್ನು ಉಪಯೋಗಿಸಿ. ಮಕ್ಕಳಿಗೆ ಜ್ವರ, ಶೀತ ಬಂದರೆ ಎರಡು ದಿನ ಶಾಲೆಗೆ ಮಕ್ಕಳನ್ನು ಕಳುಹಿಸಲೇಬೇಡಿ. ಏಕೆಂದರೆ ಒಂದು ಮಕ್ಕಳಿಂದ ಇನ್ನೊಂದು ಮಕ್ಕಳಿಗೆ ಹಾರಡುವ ಸಾಧ್ಯತೆ ಹೆಚ್ಚಾಗಿ ಇರುತ್ತದೆ’ ಎಂದು ತಿಳಿಸಿದರು.
ಶಾರದಾ ಸಂಸ್ಥೆಯ ಮುಖ್ಯ ಶಿಕ್ಷಕಿ ನಂದಿನಿ ಮಾತನಾಡಿ, ‘ನಮ್ಮ ಶಾಲೆಗೆ ಹತ್ತು ವರ್ಷಗಳಾಗಿದೆ. ಈ ಶಾಲೆಯಲ್ಲಿ ಎಲ್.ಕೆ.ಜಿ.-ಯು.ಕೆ.ಜಿ.ಯಿಂದ ೮ನೇ ತರಗತಿಯವರೆಗೆ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಗುಣಮಟ್ಟವಾದ ಹಾಗೂ ರಿಯಾಯಿತಿ ದರದಲ್ಲಿ ಶಾಲೆಯನ್ನು ನಡೆಸುತ್ತಿದ್ದೇವೆ. ಏಕೆಂದರೆ ಇದು ಗ್ರಾಮಾಂತರ ಪ್ರದೇಶದಲ್ಲಿ ಹೆಚ್ಚಿನ ಹಣವನ್ನು ತರಲು ಕಷ್ಟಕರವಾಗುತ್ತದೆ. ನಮ್ಮ ಶಾಲೆಯಲ್ಲಿ ಪ್ರತಿ ವರ್ಷವೂ ಒಳ್ಳೆಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಕಾರಂಜಿಯಲ್ಲಿ ಅಂಗವಿಕಲ ವಿಧ್ಯಾರ್ಥಿ ಚಿದು ಎಂಬ ವಿಧ್ಯಾರ್ಥಿ ಜಿಲ್ಲಾ ಮಟ್ಟದಲ್ಲಿ ಜಾವಲಿನ್ ಎಸೆತದಲ್ಲಿ ಪ್ರಥಮ, ಗುಂಡು ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇದು ಹೆಮ್ಮೆಯ ವಿಚಾರ’ ಎಂದು ಹೇಳಿದರು.ಶಾರದಾ ವಿದ್ಯಾ ಸಂಸ್ಥೆ ಅಧ್ಯಕ್ಷ ಯತೀಶ್, ‘ನಮ್ಮ ಶಾಲೆಯಲ್ಲಿ ಶಿಕ್ಷಕ ವರ್ಗದವರು ನಮ್ಮ ವೇತನಕ್ಕೆ ಕೆಲಸ ಮಾಡದೆ ಅವರ ಮನಸ್ಸಿನ ಅಂತರಾಳದ ಕೆಲಸವನ್ನು ಮಾಡುತ್ತಿದ್ದಾರೆ. ಏಕೆಂದರೆ ಅವರು ಸಹ ಗ್ರಾಮಾಂತರ ಪ್ರದೇಶದಲ್ಲಿ ಕಷ-ಪಟ್ಟು ಓದಿ ಬಂದಿರುವುದು ಇಲ್ಲಿಯ ಮಕ್ಕಳು ಒಳ್ಳೆಯ ಸ್ಥಾನಕ್ಕೆ ಹೋಗಬೇಕೆಂಬ ಉದ್ದೇಶದಿಂದ ಅವರು ಗುಣಮಟ್ಟದ ಪಾಠವನ್ನು ನೀಡಿ ಮಕ್ಕಳನ್ನು ಪ್ರೋತ್ಸಾಹಿಸುತ್ತಾರೆ. ಶಾಲೆಯಲ್ಲಿ ವಿದ್ಯಾಭ್ಯಾಸ ಜೊತೆಗೆ ಕ್ರೀಡಾಕೂಟದಲ್ಲಿ ಹೆಚ್ಚಿನ ರೀತಿಯಲ್ಲಿ ಭಾಗಿಯಾಗಿ ನಮ್ಮ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ’ ಎಂದರು.
ಶಾಲೆಯ ನಿರ್ದೇಶಕ ಎಚ್. ಬಿ. ಚಂದ್ರಶೇಖರ್,ಮೋಹನ್, ಪೋಷಕರು ಹಾಜರಿದ್ದರು.ಶಾರದಾ ವೈಭವ ಮತ್ತು ದಶಮಾನೋತ್ಸವ ಸಂಧರ್ಭದಲ್ಲಿ ಬೇಲೂರು ಶಾಸಕ ಎಚ್.ಕೆ. ಸುರೇಶ್‌ಗೆ ಸನ್ಮಾನ ಮಾಡಲಾಯಿತು.