ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ದೊರೆಯಲಿ: ರತ್ನಮ್ಮ ಚಿಮ್ಮನಕಟ್ಟಿ

| Published : Jan 15 2024, 01:47 AM IST

ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ ದೊರೆಯಲಿ: ರತ್ನಮ್ಮ ಚಿಮ್ಮನಕಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಾದಾಮಿ: ವಿದ್ಯಾರ್ಥಿಗಳು ಜೀವನದಲ್ಲಿ ನೈತಿಕ ಶಿಕ್ಷಣ, ಬೌದ್ಧಿಕ ಶಿಕ್ಷಣ, ಮೌಲ್ಯ ಶಿಕ್ಷಣ ಅಳವಡಿಸಿಕೊಂಡು ಅಂಕಗಳೊಂದಿಗೆ ಸಂಸ್ಕಾರವನ್ನು ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗುತ್ತಾನೆ. ಓದುವ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ತತ್ಸಾರ ಮನೋಭಾವದಿಂದ ಕಾಣಬಾರದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ತಾಯಿ ರತ್ನಮ್ಮ ಚಿಮ್ಮನಕಟ್ಟಿ ಹೇಳಿದರು. ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ವಿದ್ಯಾರ್ಥಿಗಳು ಜೀವನದಲ್ಲಿ ನೈತಿಕ ಶಿಕ್ಷಣ, ಬೌದ್ಧಿಕ ಶಿಕ್ಷಣ, ಮೌಲ್ಯ ಶಿಕ್ಷಣ ಅಳವಡಿಸಿಕೊಂಡು ಅಂಕಗಳೊಂದಿಗೆ ಸಂಸ್ಕಾರವನ್ನು ಅಳವಡಿಸಿಕೊಂಡಾಗ ಮಾತ್ರ ಪರಿಪೂರ್ಣ ವ್ಯಕ್ತಿಯಾಗುತ್ತಾನೆ. ಓದುವ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ತತ್ಸಾರ ಮನೋಭಾವದಿಂದ ಕಾಣಬಾರದು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರ ತಾಯಿ ರತ್ನಮ್ಮ ಚಿಮ್ಮನಕಟ್ಟಿ ಹೇಳಿದರು.

ಶನಿವಾರ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ತಾಯಂದಿರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಯಾವ ಮಕ್ಕಳೂ ದಡ್ಡರಿರುವುದಿಲ್ಲ. ಎಲ್ಲರಲ್ಲೂ ಬುದ್ಧಿಶಕ್ತಿಯಿರುತ್ತದೆ. ಅದನ್ನು ಹೊರತರುವ ನಿಟ್ಟಿನಲ್ಲಿ ನಾವೆಲ್ಲರೂ ಉತ್ತಮವಾದ ವಾತಾವಾರಣ ನಿರ್ಮಿಸಬೇಕು. ಮಕ್ಕಳ ಕಲಿಕೆಯ ಗುಣಮಟ್ಟ ಹೆಚ್ಚಿಸುವಲ್ಲಿ ತಾಯಂದಿರ ಪಾತ್ರ ಅಪಾರವಾಗಿದ್ದು, ಮಕ್ಕಳು ದೂರದರ್ಶನದಿಂದ ದೂರವಿರುವಂತೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.

ಎಸ್.ಡಿ.ಎಂ.ಸಿ ಅಧ್ಯಕ್ಷ ಶಿವಯ್ಯ ಹಿರೇಮಠ, ಪ್ರಭಾರಿ ಮುಖ್ಯಶಿಕ್ಷಕಿ ಭಾಗ್ಯಲಕ್ಷ್ಮೀ ಟಿ.ಎಚ್. ಮಾತನಾಡಿದರು. ಎಸ್‌ಡಿಎಂಸಿ ಸದಸ್ಯರಾದ ಅಮೀನಸಾಬ ನದಾಫ್‌, ಗಾಯಿತ್ರಿ ಚಿತ್ತರಗಿ, ಶಿಕ್ಷಕರಾದ ಶಂಕರರಾವ್ ಕುಲಕರ್ಣಿ, ಶ್ರೀನಿವಾಸ ಈಳಗೇರ, ಕೀರ್ತಿ ಬಡಿಗೇರ, ಬಸವರಾಜ ಚಿಕ್ಕನ್ನವರ, ಬಸವರಾಜ ಸಿಂದಗಿಮಠ, ರಮೇಶ ಕತ್ತಿಕೈ, ರಮೇಶ ಹಂಜಿ, ಕೇಶವ ರಘುವೀರ, ಅಶೋಕ ಪೂಜಾರಿ, ಕಾವ್ಯಾ ಪಾಟೀಲ, ಸಂಗಮೇಶ ಉಳ್ಳಾಗಡ್ಡಿ, ಹನಮಂತ ಬಿ, ದಾನಮ್ಮ ಬಂಡಿಗಣಿ ಉಪಸ್ಥಿತರಿದ್ದರು.