ಮರಿಯಮ್ಮನಹಳ್ಳಿ: ನೀರು ಅಮೂಲ್ಯವಾಗಿದ್ದು, ಮಿತವಾಗಿ ಬಳಸಿ. ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಜಿಪಂ ಮಾಜಿ ಸದಸ್ಯ ಗೋವಿಂದರ ಪರಶುರಾಮ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಆವರಣದಲ್ಲಿ ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯುಕೇಷನಲ್ ಟ್ರಸ್ಟ್ ಹಾಗೂ ಎಸ್.ಎಲ್.ಆರ್ ಮೆಟಾಲಿಕ್ಸ್ ಸಹಯೋಗದಲ್ಲಿ ಸಿ.ಎಸ್.ಆರ್ ಯೋಜನೆ ಅಡಿಯಲ್ಲಿ ಹಮ್ಮಿಕೊಂಡಿದ್ದ ಕುಡಿಯುವ ನೀರಿನ ಅರವಟ್ಟಿಗೆ ಉದ್ಘಾಟಿಸಿ ಅವರು ಮಾತನಾಡಿದರು.ಒಂದರಿಂದ ಎರಡು ದಿನಗಳ ಕಾಲ ಊಟ ಇಲ್ಲದೇ ಜೀವಿಸಬಹುದು. ಆದರೆ ನೀರು ಇಲ್ಲದೇ ಒಂದು ದಿನ ಕೂಡ ಬದುಕುಳಿಯುವುದಕ್ಕೆ ಸಾಧ್ಯವಿಲ್ಲ. ಹಾಗಾಗಿ ನೀರು ಅಮೂಲ್ಯವಾಗಿದೆ. ಜೀವ ಉಳಿಸುವ ಶಕ್ತಿ ನೀರಿಗೆ ಇದೆ. ಪ್ರತಿಯೊಬ್ಬರು ನೀರನ್ನು ಮಿತವಾಗಿ ಬಳಸಿ ನಾವು ಮುಂದಿನ ಪೀಳಿಗಗೆ ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.
ಪ್ರಾದೇಶಿಕ ಸಾರಿಗೆ ನಿವೃತ್ತ ಅಧಿಕಾರಿ ಎಲ್.ಪರಮೇಶ್ವರಪ್ಪ ಮಾತನಾಡಿ, ಬಿರು ಬೇಸಿಗೆ ಸಮಯದಲ್ಲಿ ಎರಡು ತಿಂಗಳ ಕಾಲ ಸಾರ್ವಜನಿಕರಿಗೆ ಕುಡಿಯುವ ನೀರಿನ ಅರವಟ್ಟಿಗೆ ಮಾಡಿರುವುದು ಒಳ್ಳೆಯ ಕಾರ್ಯವಾಗಿದೆ.ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಹೆಚ್ಚು ಇರುತ್ತದೆ. ಈ ಸಮಯದಲ್ಲಿ ನಾವು ನೀರನ್ನು ಬಳಕೆ ಮಾಡಬೇಕು. ಪ್ರತಿ ವರ್ಷ ಎಸ್.ಎಲ್.ಆರ್ ಮೆಟಾಲಿಕ್ಸ್ ನವರು ನಮ್ಮ ಊರಿನವರಿಗೆ ಒಂದಲ್ಲ ಒಂದು ರೀತಿಯಲ್ಲಿ ಸಾಮಾಜಿಕ ಒಳ್ಳೆಯ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ನಮ್ಮ ಸಹಕಾರ ಇವರಿಗೆ ಇರುತ್ತದೆ. ಇನ್ನು ಮುಂದಿನ ದಿನಗಳಲ್ಲಿ ಹೆಚ್ಚಿನ ರೀತಿಯಲ್ಲಿ ಕೆಲಸ ಕಾರ್ಯಗಳನ್ನ ಕೈಗೊಳ್ಳಲಿ ಎಂದರು.
ಇದೇ ವೇಳೆ ಮರಿಯಮ್ಮನಹಳ್ಳಿ ಪಪಂ ಮುಖ್ಯ ಅಧಿಕಾರಿ ಜಿ.ಕೆ. ಮಲ್ಲೇಶಪ್ಪ ಮಾತನಾಡಿ, ನಮ್ಮ ಮನವಿ ಮೇರೆಗೆ ಸಿ.ಎಸ್.ಆರ್ ಯೊಜನೆ ಅಡಿಯಲ್ಲಿ ಕುಡಿಯುವ ನೀರಿನ ಅರವಟ್ಟಿಗೆ ಮಾಡಿದ್ದಾರೆ, ಇದರ ಜೊತೆಗೆ ಜೋಡಿ ರಥೋತ್ಸವ ಇರುವುದರಿಂದ ಮರಿಯಮ್ಮನಹಳ್ಳಿ ಪಟ್ಟಣದಲ್ಲಿ ಪ್ರತಿ ವಾರ್ಡ್ ಗಳಿಗೆ ನೀರಿನ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಎಸ್.ಎಲ್.ಆರ್ ಕಂಪನಿಯ ಸಿ.ಎಸ್.ಆರ್ ವಿಭಾಗದ ಮುಖ್ಯಸ್ಥ ಮಲ್ಲಿಕಾರ್ಜುನ, ಮಾರುತಿ ಗೋಸಂಗಿ, ಚೈತನ್ಯ ಗ್ರಾಮೀಣ ಅಭಿವೃದ್ಧಿ ಎಜ್ಯೂಕೇಷನಲ್ ಟ್ರಸ್ಟ್ ನ ಅಧ್ಯಕ್ಷ ಭೀಮರಾಜ.ಯು, ಮರಿಯಮ್ಮನಹಳ್ಳಿ ಪಟ್ಟಣದ ಮುಖಂಡರಾದ ಸಜ್ಜದ್ ವಿಶ್ವನಾಥ, ಎಲೆಗಾರ ಮಂಜುನಾಥ, ರೋಗಾಣಿ ಮಂಜುನಾಥ, ನಾಗೇಶ್ ಉಪಸ್ಥಿತರಿದ್ಧರು.