ಗವಿಮಠಕ್ಕೆ ಮೇಘಾಲಯ ರಾಜ್ಯಪಾಲ ವಿಜಯಶಂಕರ ಭೇಟಿ

| Published : Feb 23 2025, 12:30 AM IST

ಸಾರಾಂಶ

ಜಾತ್ರೆಯಲ್ಲಿ ತೆಗೆದ ಫೋಟೋಗಳನ್ನು ನೋಡಿದ ರಾಜ್ಯಪಾಲರು, ಮುಂಬರುವ ವರ್ಷ ಜಾತ್ರೆಗೆ ಆಗಮಿಸುತ್ತೇನೆ. ನಾನು ಇರುವಾಗಲೇ ಮೇಘಾಲಯಕ್ಕೆ ಒಮ್ಮೆ ಬನ್ನಿ ಎಂದು ಆಹ್ವಾನ ಸಹ ನೀಡಿದರು.

ಕೊಪ್ಪಳ:

ಇಲ್ಲಿನ ಗವಿಸಿದ್ದೇಶ್ವರ ಮಠಕ್ಕೆ ಮೇಘಾಲಯ ರಾಜ್ಯಪಾಲ ಚಂದ್ರಶೇಖರ ಎಚ್. ವಿಜಯಶಂಕರ ಶನಿವಾರ ಭೇಟಿ ನೀಡಿ, ಗವಿ ಮಠದ ಗದ್ದುಗೆಯ ದರ್ಶನ ಪಡೆದರು. ಬಳಿಕ ಗವಿಸಿದ್ಧೇಶ್ವರ ಶ್ರೀಗಳ ಆಶೀರ್ವಾದ ಪಡೆದ ಪ್ರಸಾದ ಸ್ವೀಕರಿಸಿದರು.

ಈ ವೇಳೆ ಪರಸ್ಪರ ಚರ್ಚೆ ನಡೆಸಿದರು. ಮೇಘಾಲಯದಲ್ಲಿ ರಾಸಾಯನಿಕ ಮುಕ್ತ ಆಹಾರ ಇರುವ ಕುರಿತು ಹೇಳಿದ ರಾಜ್ಯಪಾಲರು ಶ್ರೀಗಳಿಗೆ ಅಲ್ಲಿಂದ ತಂದಿದ್ದ ಆಹಾರ ಸಾಮಗ್ರಿ ಸಹ ನೀಡಿ, ವಿವರಣೆ ನೀಡಿದರು.

ಜಾತ್ರೆಯಲ್ಲಿ ತೆಗೆದ ಫೋಟೋಗಳನ್ನು ನೋಡಿದ ರಾಜ್ಯಪಾಲರು, ಮುಂಬರುವ ವರ್ಷ ಜಾತ್ರೆಗೆ ಆಗಮಿಸುತ್ತೇನೆ. ನಾನು ಇರುವಾಗಲೇ ಮೇಘಾಲಯಕ್ಕೆ ಒಮ್ಮೆ ಬನ್ನಿ ಎಂದು ಆಹ್ವಾನ ಸಹ ನೀಡಿದರು. ಆಗ ಶ್ರೀಗಳು, ನಾನು ಸಹ ಆ ಭಾಗವನ್ನು ನೋಡುವ ಬಯಕೆ ಇದ್ದು ಖಂಡಿತ ಬರುವೇ ಎಂದು ತಿಳಿಸಿದರು. ಚರ್ಚೆ ನಡೆಯುವಾಗ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ, ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಕಾಲದ ರಾಜಕೀಯ ಮೆಲುಕು ಹಾಕಿದರು.

ಈ ವೇಳೆ ಶಾಸಕ ಕೆ. ರಾಘವೇಂದ್ರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಶಿವರಾಮೆಗೌಡ, ಮಾಜಿ ಶಾಸಕ ಬಸವರಾಜ ದಢೇಸೂಗೂರು, ಡಾ. ಬಸವರಾಜ, ಸಿ.ವಿ. ಚಂದ್ರಶೇಖರ, ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಸೀಲ್ದಾರ್‌ ವಿಠ್ಠಲ್ ಚೌಗಲಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.