ಶ್ರೀ ಗುರುಗುಂಡ ಬ್ರಹ್ಮೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜ. ೯ ಮತ್ತು ೧೦ರಂದು ಪಟ್ಟನಾಯಕನಹಳ್ಳಿಯಲ್ಲಿ ಏರ್ಪಡಿಸಿರುವ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಹೈನುಗಾರರು ಹೆಚ್ಚು ಹೆಚ್ಚು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಶ್ರೀ ಗುರುಗುಂಡ ಬ್ರಹ್ಮೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ ಜ. ೯ ಮತ್ತು ೧೦ರಂದು ಪಟ್ಟನಾಯಕನಹಳ್ಳಿಯಲ್ಲಿ ಏರ್ಪಡಿಸಿರುವ ತಾಲೂಕು ಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಹೈನುಗಾರರು ಹೆಚ್ಚು ಹೆಚ್ಚು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್ ಆರ್ ಗೌಡ ಹೇಳಿದರು.

ಅವರು ಶನಿವಾರ ನಗರದ ನಂದಿನಿ ಕ್ಷೀರ ಭವನದಲ್ಲಿ ತುಮಕೂರು ಹಾಲು ಒಕ್ಕೂಟದ ವತಿಯಿಂದ ಹಮ್ಮಿಕೊಂಡಿದ್ದ ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮದಲ್ಲಿ ನೂತನ ವರ್ಷದ ೨೦೨೬ರ ಕ್ಯಾಲೆಂಡರ್ ಬಿಡುಗಡೆಗೊಳಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಹಾಲು ಕರಿಯುವ ಸ್ಪರ್ಧೆಯನ್ನು ಇದೇ ಮೊದಲ ಬಾರಿಗೆ ಏರ್ಪಡಿಸಲಾಗಿದೆ. ಮುಂದೆ ಪ್ರತಿ ತಾಲೂಕಿನಲ್ಲಿ ಈ ಕಾರ್ಯಕ್ರಮವನ್ನು ಮಾಡಬೇಕು ಎಂಬ ಉದ್ದೇಶವಿದೆ. ಇದರಿಂದ ರೈತರಿಗೆ ಹೈನುಗಾರಿಕೆಯ ಬಗ್ಗೆ ಹೆಚ್ಚು ಆಸಕ್ತಿ ಮೂಡಲು ಹಾಗೂ ಹೆಚ್ಚು ಹಾಲು ಶೇಖರಣೆ ಮಾಡಲು ಅನುಕೂಲವಾಗಲಿದೆ ಎಂದ ಅವರು ೨೦೨೬ನೇ ವರ್ಷ ಎಲ್ಲರಿಗೂ ಹೊಸ ವರ್ಷ ಹೊಸ ಚೈತನ್ಯ ನೀಡಲಿ ಎಲ್ಲಾ ಭರವಸೆಗಳು ಈಡೇರಲಿ. ಹೈನುಗಾರಿಕ ಕ್ಷೇತ್ರದಲ್ಲಿ ಬದಲಾವಣೆ ಆಗಲಿ ಎಂದರು.

ಹಾಲು ಒಕ್ಕೂಟದಲ್ಲಿ ಕೆಲಸ ನಿರ್ವಹಿಸುವ ಕಾರ್ಯದರ್ಶಿಗಳಿಗೆ ಅವರ ನಿವೃತ್ತಿಯ ನಂತರ ೨ ರು. ಲಕ್ಷ ಹಣ ನೀಡಬೇಕೆಂದು ತುಮಕೂರು ಹಾಲು ಒಕ್ಕೂಟದ ಸಭೆಯಲ್ಲಿ ಒತ್ತಾಯಪಡಿಸಿದ್ದರ ಫಲವಾಗಿ ಬೇಡಿಕೆ ಈಡೇರಿದೆ. ನಂದಿನಿ ಹಾಲನ್ನು ಬಾಂಬೆಗೆ ಸರಬರಾಜು ಮಾಡಬೇಕು. ಕನಿಷ್ಠ ೪ ಲಕ್ಷ ಲೀಟರ್ ಮಾರಾಟ ಆಗಬೇಕು ಎಂಬ ಉದ್ದೇಶವಿದೆ. ಇದಕ್ಕಾಗಿ ಕಳೆದ ವಾರ ಮುಂಬೈಗೆ ಹೋಗಿ ಹಲವು ಸಭೆ ಮಾಡಿ ಮಾತನಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜೆ.ಸಂಪತ್ ಕುಮಾರ್, ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಗಿರೀಶ್, ಮಾಜಿ ತಾ.ಪಂ. ಉಪಾಧ್ಯಕ್ಷ ರಂಗನಾಥ್ ಗೌಡ, ವಿಸ್ತರಣಾಧಿಕಾರಿ ಚೈತ್ರ, ಮುಖಂಡರಾದ ಮುದ್ದು ಗಣೇಶ್, ಡಾ. ಶ್ರೀಕಾಂತ್, ಸಮಾಲೋಚಕರಾದ ಬಾಬಾ ಫಕ್ರುದ್ದೀನ್ ಪಿ,ಎಂ, ಪ್ರವೀಣ್, ವಿ.ಪಿ. ಸೋಮಕುಮಾರ್, ಪಿ ಎಲ್ ಡಿ ಬ್ಯಾಂಕ್ ನಿರ್ದೇಶಕ ಅಜ್ಜಣ್ಣ ಸೇರಿದಂತೆ ತಾಲೂಕಿನ ಹಾಲು ಉತ್ಪದಕರ ಸಂಘಗಳ ಕಾರ್ಯದರ್ಶಿಗಳು ಭಾಗವಹಿಸಿದ್ದರು.