ಸಾರಾಂಶ
ದಾನಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಲು ಹಾಗೂ ಸಮುದಾಯದಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸಬೇಕು
ಕನ್ನಡಪ್ರಭ ವಾರ್ತೆ ಚಿಂತಾಮಣಿ
ತಾಲೂಕಿನ ಗಾಣಿಗ ಬಂಧುಗಳು ಸದಸ್ಯತ್ವ ಪಡೆಯಬೇಕು, ಸಂಘವು ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಎಲ್ಲಾ ರಂಗಗಳಲ್ಲಿಯೂ ಮುಂದೆ ಬರಲು ಪಕ್ಷಭೇದ ಮರೆತು ಸಂಘವನ್ನು ಬಲಿಷ್ಟಗೊಳಿಸುವುದರಲ್ಲಿ ಮಾತ್ರ ಜನಾಂಗವು ಅಭಿವೃದ್ಧಿ ಹೊಂದಲು ಸಾಧ್ಯವೆಂದು ಗಾಣಿಗರ ಸಂಘದ ಅಧ್ಯಕ್ಷ ಕುರುಟಹಳ್ಳಿ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.ನಗರದ ಶಿಲ್ಪ ಶಾಲೆಯಲ್ಲಿ ಗಾಣಿಗ ಸಮುದಾಯದ ವತಿಯಿಂದ ಆಗಸ್ಟ್ ೧೧ ರಂದು ನಡೆಯಲಿರುವ ಪ್ರತಿಭಾ ಪುರಸ್ಕಾರ ಮತ್ತು ವಾರ್ಷಿಕ ಸಭೆಯ ಬಗ್ಗೆ ಚರ್ಚಿಸಲು ನಡೆದ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಕಾರ್ಯದರ್ಶಿ ಕೆ.ಆರ್. ನರಸಿಂಹಪ್ಪ ಮಾತನಾಡಿ ೫೦೦ ರೂ ಗಳನ್ನು ಕಟ್ಟಿ ಸದಸ್ಯತ್ವ ಪಡೆಯಬೇಕೆಂದು ಹಾಗೂ ಆಜೀವ ಸದಸ್ಯತ್ವ ಪಡೆಯಲು ೧೧೦೧ ರೂ ಮತ್ತು ಪೋಷಕರ ಸದಸ್ಯತ್ವ ಪಡೆಯಲು ೫೦೦೧ ರೂ. ಗಳನ್ನು ಸಲ್ಲಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕೆಂದರು.ಸಂಘದ ಖಜಾಂಚಿ ಹೆಚ್.ಸಿ. ಆಂಜಪ್ಪ ಮಾತನಾಡಿ ದಾನಿಗಳಿಂದ ಪ್ರತಿಭಾ ಪುರಸ್ಕಾರಕ್ಕೆ ಬೇಕಾದ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕೆಲಸ ಮಾಡಲು ಹಾಗೂ ಸಮುದಾಯದಲ್ಲಿ ಉನ್ನತ ಅಧಿಕಾರಿಗಳಾಗಿ ಸೇವೆ ಸಲ್ಲಿಸಿದ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಹಿರಿಯರನ್ನು ಸನ್ಮಾನಿಸುವ ನಿಟ್ಟಿನಲ್ಲಿ ಸಂಘವು ಕಾರ್ಯೋನ್ಮುಖರಾಗಬೇಕೆಂದರು.
ಸಂಘದ ನಿರ್ದೇಶಕ ಕೆ.ವಿ. ಸುಬ್ರಹ್ಮಣಿ, ಸದಸ್ಯ ಎಂ. ವೆಂಕಟೇಶ್ ಮಾತನಾಡಿದರು, ಸಭೆಯಲ್ಲಿ ಗಂಗಿಶೆಟ್ಟಿ, ರಮೇಶ್, ಕೃಷ್ಣ, ಬುಲೆಟ್ ಎಸ್.ಎಂ.ನಾರಾಯಣಸ್ವಾಮಿ, ಇ.ಲಕ್ಷ್ಮೀವೆಂಕಟೇಶ್, ಶ್ರೀನಿವಾಸಯ್ಯ, ಎನ್.ಶ್ರೀನಿವಾಸಪ್ಪ, ರಾಜ್‌ಕುಮಾರ್, ಎಸ್.ರಾಮಚಂದ್ರ, ರಮೇಶ್ ಹಾಗೂ ಮಹಿಳಾ ಸದಸ್ಯರುಗಳು ಉಪಸ್ಥಿತರಿದ್ದರು.