ಪಾಂಡವಪುರ:

ಜಿಪಂ ಅನುದಾನದ 50-54 ವಿಶೇಷ ಯೋಜನೆಯಡಿ ತಾಲೂಕಿನ ವಿವಿಧ ಗ್ರಾಮದಲ್ಲಿ 90 ಲಕ್ಷರು. ವೆಚ್ಚದ ಸಿಸಿ ಕಾಮಗಾರಿಗಳಿಗೆ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಭೂಮಿ‌ಪೂಜೆ ಸಲ್ಲಿಸಿದರು.

ಬಳಿಕ‌ ಮಾತನಾಡಿದ ಅವರು, ಜಿಪಂ ವಿಶೇಷ ಯೋಜನೆಯಿಡಿ ತಾಲೂಕಿನ ವಿವಿಧ ಗ್ರಾಮದಲ್ಲಿ ಪೂಜೆ ಸಲ್ಲಿಸಿದ್ದೇನೆ. ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ 10 ಲಕ್ಷ ರು., ಕಾವೇರಿಪುರ ಗ್ರಾಮ15 ಲಕ್ಷ ರು., ಮಾಡರಹಳ್ಳಿ 7 ಲಕ್ಷ ರು., ಎಲೆಕೆರೆ ಗ್ರಾಮ 10 ಲಕ್ಷ ರು., ಟಿ.ಎಸ್.ಛತ್ರ ಗ್ರಾಮ 8 ಲಕ್ಷ ರು., ಶಂಭೂನಹಳ್ಳಿ 15 ಲಕ್ಷ ರು., ಚಂದ್ರೆ ಗ್ರಾಮ 10 ಲಕ್ಷ ರು., ಕಡಬ ಗ್ರಾಮದ 10 ಲಕ್ಷ ರು. ಕಾಮಗಾರಿಗೆ‌ ಒಂದೇಕಡೆ ಭೂಮಿ ಪೂಜೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಭತ್ತ ಖರೀದಿಗೆ ಕ್ರಮ:

ತಾಲೂಕಿನಲ್ಲಿ ಭತ್ತದ ಕಟಾವು ಮುಕ್ತಾಯ ಹಂತಕ್ಕೆ ಬಂದಿರುವುದರಿಂದ ಭತ್ತ ಖರೀದಿ‌ ಕೇಂದ್ರ ಆರಂಭಿಸಲು ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ. ಜತೆಗೆ ಸೊಸೈಟಿಗಳ ಮೂಲಕ ಭತ್ತ ಖರೀದಿಸಲು ಕ್ರಮ ವಹಿಸಲಾಗಿದೆ ಎಂದರು.


ಈ ವೇಳೆ ಜಿಪಂ‌ ಎಇಇ ರಮ್ಯಾ, ಎಇ ಮಂಜುನಾಥ್, ಸ್ಪೂರ್ತಿ, ರೈತ‌ ಮುಖಂಡ ತಮ್ಮೇಗೌಡ, ಪ್ರಕಾಶ್, ಸುರೇಶ್, ಬಸವಲಿಂಗೇಗೌಡ, ವರದರಾಜು, ದೇವರಾಜು, ಮಹೇಶ್, ಪುಟ್ಟೇಗೌಡ, ಭಾರತಿ, ಕೃಷ್ಣೇಗೌಡ ಸೇರಿದಂತೆ ಹಲವರು ಹಾಜರಿದ್ದರು.ಸಿ.ಅಶೋಕ್ ಹುಟ್ಟುಹಬ್ಬ ಅಭಿನಂದನೆ

ಪಾಂಡವಪುರ:ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಸಿ.ಅಶೋಕ್ ಅವರ ಹುಟ್ಟುಹಬ್ಬದ ಅಂಗವಾಗಿ ಅಭಿಮಾನಿಗಳು, ಕಾರ್ಯಕರ್ತರು ತಾಲೂಕಿನ ವಿವಿಧಡೆ ಕೇಕ್ ಕತ್ತರಿಸಿ ಅಭಿನಂದಿಸಿದರು.

ತಾಲೂಕಿನ ಚಿನಕುರಳಿ ಗ್ರಾಮದ ಶ್ರೀಗಣಪತಿ ದೇವಸ್ಥಾನದಲ್ಲಿ ಅಭಿಮಾನಿಗಳು ವಿಶೇಷ ಪೂಜೆ ಸಲ್ಲಿಸಿದರು, ಬಳಿಕ ದೇವಸ್ಥಾನದ ಮುಂಭಾಗ ಅಭಿನಂಧಿಸಿ‌ ಕೇಕ್ ಕತ್ತರಿಸಿ ಸಿಹಿತಿನ್ನಿಸಿದರು. ಪಟ್ಟಣ ಸೇರಿದಂತೆ ವಿವಿಧ ಭಾಗದಲ್ಲಿ ಅಭಿಮಾನಿಗಳು, ಕಾರ್ಯಕರ್ತರು ಹುಟ್ಟುಹಬ್ಬ ಆಚರಣೆ ಮಾಡಿ ಅಭಿನಂದಿಸಿದರು.ಸಿ.ಅಶೋಕ್ ಮಾತನಾಡಿ, ನನ್ನ ಹುಟ್ಟುಹಬ್ಬದ ಅಂಗವಾಗಿ ಕ್ಷೇತ್ರದ ಎಲ್ಲಾ ನನ್ನ ಸ್ನೇಹಿತರು ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು ಎಲ್ಲರು ಪ್ರೀತಿಯಿಂದ ಅಭಿನಂದನೆ ಸಲ್ಲಿಸಿ ಹರಸಿ ಹಾರೈಸಿದ್ದಾರೆ. ನಿಮ್ಮೆಲ್ಲರ ಪ್ರೀತಿಗೆ ನಾನು ಚಿರಖುಣಿಯಾಗಿದ್ದೇವೆ. ಮುಂದೆಯೂ ನಿಮ್ಮೆಲ್ಲರ‌ ಪ್ರೀತಿ ವಿಶ್ವಾಸ ನಮ್ಮೊಡನೆ ಇರಲಿ ಎಂದರು.

ಈ ವೇಳೆ ಜೆಡಿಎಸ್ ಮುಖಂಡರಾದ ಸಿ.ಎ.ಲೋಕೇಶ್, ಮಂಜುನಾಥ್, ರಮೇಶ್, ರಾಮಕೃಷ್ಣೇಗೌಡ, ಸಿ.ಪ್ರಕಾಶ್, ಸಿ.ಡಿ.ಮಹದೇವು, ಬನ್ನಂಗಾಡಿ ಪ್ರಸನ್ನ, ಚಿಕ್ಕಾಡೆ ಗಿರೀಶ್, ಪಿ.ಎಲ್.ಆದರ್ಶ ಸೇರಿದಂತೆ ಹಲವರು ಹಾಜರಿದ್ದರು.