- ಬೆ.10ರಿಂದ ಸಂ.5.30 ರವರೆಗೆ ಕರೆಂಟ್ ಇರಲ್ಲ: ಬೆಸ್ಕಾಂ ಪ್ರಕಟಣೆ

- - -

ಹರಿಹರ: ನಗರದ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜೂ.22ರಂದು ಬೆಳಗ್ಗೆ 10 ರಿಂದ ಸಂಜೆ 5.30 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ ಆಗಲಿದೆ. ಗ್ರಾಹಕರು ಸಹಕರಿಸಲು ಬೆಸ್ಕಾಂ ಕೋರಿದೆ.

ಶಿವಮೊಗ್ಗ ರಸ್ತೆ, ಬೈಪಾಸ್ ಏರಿಯಾ, ತರಳಬಾಳು ಬಡಾವಣೆ, ವಿದ್ಯಾನಗರ ಎ, ಬಿ ಮತ್ತು ಸಿ ಬ್ಲಾಕ್, ಇಂದಿರಾ ನಗರ, ಪ್ರಶಾಂತ ನಗರ, ಕಾಳಿದಾಸ ನಗರ, ಬೆಂಕಿನಗರ, ಜೆ.ಸಿ. ಬಡಾವಣೆ, ದೇವಸ್ಥಾನ ರಸ್ತೆ, ಮೂರ್ಕಲ್ ಕಾಂಪೌಂಡ್, ವೀರಭದ್ರೇಶ್ವರ ದೇವಸ್ಥಾನ, ಬಾಹರ್ ಮಕಾನ್ ವಿ.ಆರ್.ಎಲ್.‌ ರಸ್ತೆ, ರಾಮ ಮಂದಿರ, 1ನೇ ರೈಲ್ವೆ ಗೇಟ್, ಜ್ಯೋತಿರ್ ಮಠ ಏರಿಯಾ, ಆಂಜನೇಯ ಆಗ್ರೋಟೆಕ್, ಎಫ್-2 ಬಾಲಾಜಿ, ಎಫ್-3 ಹರಿಹರೇಶ್ವರ ಎಫ್-4 ವಿದ್ಯಾನಗರ ಫೀಡರ್, ಹಳ್ಳದಕೇರಿ, ಕೈಲಾಸ ನಗರ, ಗಂಗಾನಗರ, ತೆಗ್ಗಿನಕೇರಿ, ದೋಸ್ತಾನ ರೈಸ್ ಮಿಲ್, ಟೆಂಪಲ್ ರೋಡ್, ಜಾಮೀಯ ಮಸೀದಿ, ಹಳೇ ಬಂಬೂ ಬಜಾರ್, ಹಳೇ ತಹಸೀಲ್ದಾರ್ ರೋಡ್, ಶಿಬಾರಾ ಸರ್ಕಲ್, ನಡುವಲ ಪೇಟೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ.

ಅಲ್ಲದೆ, ಬೆಳ್ಳೂಡಿ ಶಾಖಾ ವ್ಯಾಪ್ತಿ: ಕೆ.ಐ.ಏ.ಡಿ.ಬಿ. ಕೈಗಾರಿಕಾ ಪ್ರದೇಶ, ಹನಗವಾಡಿ ಗ್ರಾಮ, ಈ5-ವೀರಭದ್ರೇಶ್ವರ ಐಪಿ ವಲಯ ಮತ್ತು ಎಫ್ 7-ಬಸವೇಶ್ವರ ಐಪಿ ವಲಯ ಹಾಗೂ ಸುತ್ತಲಿನ ಪ್ರದೇಶ.


ಕುರುಬರಹಳ್ಳಿ 66/11 ಕೆ.ವಿ. ವಿದ್ಯುತ್ ವಿತರಣಾ ಕೇಂದ್ರ ವ್ಯಾಪ್ತಿಯ ಎಫ್ 5- ಚಿಕ್ಕಬಿದರಿ, ಎಫ್ 6- ಹೊಸ ಸಾರಥಿ, ಎಫ್ 10-ಕಲ್ಪತರು, ಎಫ್ 9-ಕೊಂಡಜ್ಜಿ ನಿರಂತರ ಜ್ಯೋತಿ, ಎಫ್ 7-ಕೊಂಡಜ್ಜಿ, ಎಫ್ 8-ಕೆಂಚನಹಳ್ಳಿ, ಎಫ್2- ಹೊಟಿಗೇನಹಳ್ಳಿ, ಎಫ್ 12- ಕೆ.ಎಸ್.ಎಸ್.ಐ.ಡಿ.ಸಿ. ಫೀಡರ್‌ಗೆ ಬರುವ ಐಪಿ ವಲಯಗಳು ಹಾಗೂ ಗ್ರಾಮೀಣ ಪ್ರದೇಶಗಳಾದ ಚಿಕ್ಕಬಿದರಿ, ಕುರಬರಹಳ್ಳಿ, ಸಾರಥಿ, ಕೊಂಡಜ್ಜಿ, ಕೆಂಚನಹಳ್ಳಿ, ಬುಳ್ಳಾಪುರ, ಹೊಟಿಗೇನಹಳ್ಳಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

- - -