ಸಾರಾಂಶ
ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ
ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯಿತಿಯ ಪಿಡಿಒಗಳು ಗ್ರಾಪಂ ಅಧ್ಯಕ್ಷರ ಆದೇಶ ಪಾಲಿಸಿ ಜನರ ಕೆಲಸಗಳಿಗೆ ಸ್ಪಂದಿಸಿ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಗ್ರಾಪಂ ಇಡಿಒಗಳಿಗೆ ಸೂಚನೆ ನೀಡಿದರು.ತಾಲೂಕಿನ ವಡ್ಡಗರೆ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಮತ್ತು ಡಿಜಿಟಲ್ ಗ್ರಂಥಾಲಯ ಉದ್ಘಾಟಿಸಿ ಮಾತನಾಡಿ, ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಆದೇಶಗಳನ್ನು ಕೇಳಿ, ಪಾಲಿಸಿ, ಸಮಸ್ಯೆಗಳಿಗೆ ಮನವರಿಕೆ ಮಾಡಿ ಕೊಡಿ ಎಂದು ತಾಕೀತು ಮಾಡಿದರು. ತಾಲೂಕಿನ ವಡ್ಡಗೆರೆ, ಹೊರೆಯಾಲ, ಗೋಪಾಲಪುರದಲ್ಲಿ ಫವರ್ ಸ್ಟೇಷನ್ ಆಗಲಿದ್ದು, ವಡ್ಡಗೆರೆ, ಹೊರೆಯಾಲದಲ್ಲಿ ಫವರ್ ಸ್ಟೇಷನ್‌ಗೆ ಟೆಂಡರ್ ಕೂಡ ಆಗಲಿದ್ದು, ವಡ್ಡಗೆರೆ ಭಾಗದಲ್ಲಿ ವಿದ್ಯುತ್ ಸಮಸ್ಯೆಗೂ ಪರಿಹಾರ ಸಿಗಲಿದೆ ಎಂದರು.
ವಡ್ಡಗೆರೆ ಗ್ರಾಮಸ್ಥರ ಮನವಿ ಮೇರೆಗೆ ಶಾಲಾ ದುರಸ್ತಿ, ಶೌಚಾಲಯ, ಸ್ಮಶಾನದ ರಸ್ತೆ, ಅಂಬೇಡ್ಕರ್ ಬಡಾವಣೆಯ ಚಾವಡಿ ಬೇಕು.ಬಸ್ ಸಮಸ್ಯೆ ಕೂಡ ಭರವಸೆ ನೀಡಿದರು. ರಾಜ್ಯದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನದ ಬಳಿಕ ಈಗ ಅನುದಾನ ಬರುತ್ತಿದೆ. ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾದ ಕೆಲಸ ಬದಲಿಸುವುದಿಲ್ಲ ಅದನ್ನು ಮುಂದುವರಿಸುತ್ತಿದ್ದೇನೆ ಎಂದರು.ಸಭೆಯಲ್ಲಿ ವಡ್ಡಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಹದೇವಮ್ಮ, ಉಪಾಧ್ಯಕ್ಷೆ ಮಂಗಳಮ್ಮ, ಕಾಡಾ ಮಾಜಿ ಅಧ್ಯಕ್ಷ ಎಚ್.ಎಸ್.ನಂಜಪ್ಪ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪಿ.ಬಿ.ರಾಜಶೇಖರ್, ಹಾಪ್ ಕಾಮ್ಸ್ ಮಾಜಿ ಅಧ್ಯಕ್ಷ ವೈ.ಎನ್.ರಾಜಶೇಖರ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಜಿ.ಮಡಿವಾಳಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಪ್ರಭುಸ್ವಾಮಿ, ಮುಖಂಡರಾದ ಟಿ.ಪಿ.ನಾಗರಾಜು, ವಡ್ಡಗೆರೆ ನಾಗಪ್ಪ, ಸುಬ್ಬು, ಕುಂದಕೆರೆ ರಾಜಪ್ಪ, ಗ್ರಾಪಂ ಸದಸ್ಯ ಚನ್ನಬಸಪ್ಪ, ಪ್ರಭಾ ತಾಪಂ ಕಾರ್ಯ ನಿರ್ವಾಹಕಿ ಎನ್.ಪೂರ್ಣಿಮ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯ ಪಾಲಕ ರವಿಕುಮಾರ್, ಗ್ರಾಮ ಪಂಚಾಯಿತಿ ಪಿಡಿಒಗಳಾದ ಮಮತ ಎಚ್.ಪಿ,ಕುಮಾರಸ್ವಾಮಿ, ರವಿಚಂದ್ರ, ಕಾರ್ಯದರ್ಶಿ ಬಿ.ಕೆ.ಗೋವಿಂದರಾಜು ಸೇರಿದಂತೆ ನೂರಾರು ಮಂದಿ ಇದ್ದರು.
ರಸ್ತೆಯ ಅಭಿವೃದ್ಧಿಗೆ ₹30 ಕೋಟಿ ಅನುದಾನ ನೀಡಲು ಸಚಿವ ಸತೀಶ್‌ಗೆ ಮನವಿ: ಗುಂಡ್ಲುಪೇಟೆ: ಕ್ಷೇತ್ರದ ಹಲವು ರಸ್ತೆಗಳು ತುಂಬಾ ಹಾಳಾಗಿದ್ದು, ರಸ್ತೆಯ ಅಭಿವೃದ್ಧಿಗೆ 30 ಕೋಟಿ ಅನುದಾನಬೇಕು ಎಂದು ಲೋಕೋಪಯೋಗಿ ಇಲಾಖೆ ಸಚಿವರಾದ ಸತೀಶ್ ಜಾರಕಿಹೊಳಿ ಅವರಿಗೆ ಮನವಿ ಸಲ್ಲಿಸಿದ್ದೇನೆ, ಅನುದಾನದ ಭರವಸೆ ಸಿಕ್ಕಿದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.ಮುಖ್ಯಮಂತ್ರಿಗಳ ವಿಶೇಷ ಅನುದಾನ 25 ಕೋಟಿ ಸಾಲಲ್ಲ, ಹೆಚ್ಚು ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಮುಖ್ಯಮಂತ್ರಿಗಳೂ ಅನುದಾನದ ಭರವಸೆ ನೀಡದ್ದಾರೆ ಎಂದರು. ಜಿಪಂ, ತಾಪಂ ಚುನಾವಣೆ ನಡೆಯದ ಕಾರಣ ಜಿಪಂ, ತಾಪಂ ಅನುದಾನ ಶಾಸಕರಿಗೆ ಬರುತ್ತಿದೆ ಆ ಅನುದಾನವನ್ನು ಸ್ಥಳೀಯ ಮುಖಂಡರ ಸಲಹೆಯಂತೆ ಅನುದಾನ ಹಂಚಿಕೆ ಮಾಡಿದ್ದೇನೆ ಎಂದರು.