15ಕ್ಕೆ ಕ್ಯಾಮ್ಸ್ ಸಂಘಟನೆಯಿಂದ ಕರಾಳ ದಿನಾಚರಣೆ

| Published : Aug 13 2024, 12:48 AM IST

ಸಾರಾಂಶ

ಕಳೆದ ೫ ವರ್ಷದಿಂದ ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶಗಳನ್ನು ಜಾರಿ ಮಾಡುವ ಮೂಲಕ ನ್ಯಾಯಾಲಯದ ತೀರ್ಪುಗಳನ್ನು ಕಡೆಗಣಿಸಿ ಹೊಸ ಶಿಕ್ಷಣ ಸಂಸ್ಥೆಗಳಿಗೆ ಅಳವಡಿಸುವ ನಿಯಮಗಳನ್ನು ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಹೇರುತ್ತಿದೆ

ಸರ್ಕಾರದ ನೀತಿಗಳಿಂದಾಗಿ ಶಿಕ್ಷಣ ಸಂಸ್ಥೆಗಳಿಗೆ ಸಂಕಷ್ಟ: ಅಧ್ಯಕ್ಷ ಸದಾನಂದ ಆರೋಪ

ಉಸಿರುಗಟ್ಟುವ ವಾತಾವರಣ, ದಿನಕ್ಕೊಂದು ಆದೇಶ, ಭ್ರಷ್ಟಾಚಾರಕ್ಕೆ ದಾರಿ, ಕೋರ್ಟ್‌ ಆದೇಶ ಉಲ್ಲಂಘನೆ, ಕ್ಯಾಮ್ಸ್‌ ಅಧ್ಯಕ್ಷ ಸದಾನಂದ, ಕೋಲಾರ

ಕಳೆದ ೫ ವರ್ಷದಿಂದ ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶಗಳನ್ನು ಜಾರಿ ಮಾಡುವ ಮೂಲಕ ನ್ಯಾಯಾಲಯದ ತೀರ್ಪುಗಳನ್ನು ಕಡೆಗಣಿಸಿ ಹೊಸ ಶಿಕ್ಷಣ ಸಂಸ್ಥೆಗಳಿಗೆ ಅಳವಡಿಸುವ ನಿಯಮಗಳನ್ನು ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಹೇರುತ್ತಿದೆಕನ್ನಡಪ್ರಭ ವಾರ್ತೆ ಕೋಲಾರಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ವಾತಂತ್ರ್ಯ ಇಲ್ಲದೆ ಶಿಕ್ಷಣ ಸಂಸ್ಥೆಗಳು ಉಸಿರುಗಟ್ಟಿಸುವ ವಾತಾವರಣದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಮುಂದುವರೆಸುವುದು ಕಷ್ಟ ಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಕೋಲಾರ ಅಸೋಸಿಯೇಟೆಡ್ ಮ್ಯಾನೇಜ್‌ಮೆಂಟ್ ಆಫ್ ಸ್ಕೂಲ್ಸ್ (ಕ್ಯಾಮ್ಸ್) ಶಿಕ್ಷಣ ಸಂಘಟನೆಯು ಆ.೧೫ರಂದು ಕಪ್ಪು ಪಟ್ಟಿ ಧರಿಸಿ ಕರಾಳ ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ನಿರ್ಧರಿಸಿದೆ ಎಂದು ಕ್ಯಾಮ್ಸ್ ಅಧ್ಯಕ್ಷ ಎ.ಸದಾನಂದ ತಿಳಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೫ ವರ್ಷದಿಂದ ಶಿಕ್ಷಣ ಇಲಾಖೆಯು ದಿನಕ್ಕೊಂದು ಆದೇಶಗಳನ್ನು ಜಾರಿ ಮಾಡುವ ಮೂಲಕ ನ್ಯಾಯಾಲಯದ ತೀರ್ಪುಗಳನ್ನು ಕಡೆಗಣಿಸಿ ಹೊಸ ಶಿಕ್ಷಣ ಸಂಸ್ಥೆಗಳಿಗೆ ಅಳವಡಿಸುವ ನಿಯಮಗಳನ್ನು ಹಳೆಯ ಶಿಕ್ಷಣ ಸಂಸ್ಥೆಗಳಿಗೆ ಹೇರುತ್ತಿದೆ ಎಂದರು.

ಭ್ರಷ್ಟಾಚಾರಕ್ಕೆ ದಾರಿ

ಇದರ ಜೊತೆಗೆ ಅಗ್ನಿ ಸುರಕ್ಷತಾ ಇಲಾಖೆ, ಲೋಕೋಪಯೋಗಿ ಇಲಾಖೆ, ಕಂದಾಯ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಇದರ ಜೊತೆಗೊಡಿ ದಾಖಲೆಗಳನ್ನು ನೀಡಬೇಕೆಂದು ಕಿರುಕುಳ, ದೌರ್ಜನ್ಯವೇಸಗುವ ಮೂಲಕ ಭಾರಿ ಭ್ರಷ್ಟಚಾರಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು. ಸರ್ಕಾರಿ ಶಾಲೆಗಳಿಗೆ ಇಲ್ಲದ ನಿಯಮಗಳು ಖಾಸಗಿ ಶಾಲೆಗಳಿಗೆ ಏಕೆ ಎಂದು ಸಂಘವು ಕೋರ್ಟ್‌ ಮೊರೆ ಹೋಗಿತ್ತು. ಸರ್ಕಾರಿ ಶಾಲೆಗಳಿಗೆ ಒಂದು ನಿಯಮ, ಖಾಸಗಿ ಶಾಲೆಗಳಿಗೊಂದು ನಿಯಮದ ತಾರತಮ್ಯಗಳನ್ನು ಸಂಘವು ನ್ಯಾಯಾಲಯದಲ್ಲಿ ವಿವರಿಸಿದಾಗ ನ್ಯಾಯಾಲಯವು ಸರ್ಕಾರದ ಕೆಲವೊಂದು ಆದೇಶಗಳನ್ನು ರದ್ದುಗೊಳಿಸಿ, ಛೀ ಮಾರಿ ಹಾಕಿ ನಿಯಮಗಳನ್ನು ಪರಿಷ್ಕರಿಸಿ ಹೊಸದಾಗಿ ಆದೇಶವನ್ನು ಜಾರಿ ಮಾಡಿದೆ ಎಂದು ಹೇಳಿದರು.ಕೋರ್ಟ್‌ ಆದೇಶ ಉಲ್ಲಂಘನ

ಆದರೆ ಸರ್ಕಾರವು ನ್ಯಾಯಾಲಯದ ಆದೇಶಗಳನ್ನು ಧಿಕ್ಕರಿಸುವ ಮೂಲಕ ಉಲ್ಲಂಘಿಸುತ್ತಿದೆ. ಖಾಸಗಿ ಶಾಲೆಗಳ ಮೇಲೆ ದೌರ್ಜನ್ಯವನ್ನು ಮುಂದುವರೆಸುತ್ತಿದೆ. ಇದನ್ನು ವಿರೋಧಿಸಿ ಸ್ವಾತಂತ್ರ್ಯ ದಿನಾಚರಣೆಗೆ ಧಕ್ಕೆಯಾಗದಂತೆ ಕಪ್ಪು ಪಟ್ಟಿ ಧರಿಸುವ ಮೂಲಕ ಪ್ರತಿಭಟನೆಯ ಸಂಕೇತ ಪ್ರದರ್ಶಿಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ನೀಡಲಾಗುವುದು ಎಂದು ತಿಳಿಸಿದರು.ಸರ್ಕಾರಿ ಶಾಲೆಗಳಲ್ಲಿ ಸೌಲಭ್ಯ ಇಲ್ಲ

ಆದರೆ ಸರ್ಕಾರಿ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದಿದ್ದರೂ ಪ್ರಶ್ನಿಸುವುದಿಲ್ಲ. ಕೇವಲ ಒಂದೆರಡು ಸೌಲಭ್ಯಗಳ ಕೊರತೆ ಇರುವುದನ್ನು ಮುಂದೆ ಮಾಡಿ ಕಿರುಕುಳ ನೀಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಎಸ್.ಜಗದೀಶ್, ಉಪಾಧ್ಯಕ್ಷ ವಿ.ನಾಗಭೂಷಣ್, ಪದಾಧಿಕಾರಿಗಳಾದ ವೈ.ಸಿ.ಮುನೇಗೌಡ, ನರೇಶ್ ಬಾಬು, ಇ.ಪ್ರಭಾಕರ್, ಡಾ.ಜಿ.ಕೆ.ಹರಿಪ್ರಕಾಶ್, ಜಮೀರ್ ಅಹ್ಮದ್, ಆರ್.ಅಶೋಕ್ ಕುಮಾರ್, ಬಿ. ಮುನಿಶಾಮಿಗೌಡ ಇದ್ದರು.