ಸಾರಾಂಶ
ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಯ ಸಹಕಾರಿ ಸಪ್ತಾಹ ಸಂಭ್ರಮ 2025 ಸಪ್ತ ಸಂಧ್ಯಾ- ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಉದ್ಘಾಟಿಸಲಾಯಿತು.
ಎಂ. ಜಾರ್ಜ್ ಮೋನಿಸ್ ಅವರಿಗೆ ‘ಸಹಕಾರ ಕಲ್ಪವೃಕ್ಷ ಪ್ರಶಸ್ತಿ’ ಪ್ರದಾನ
ಮೂಡುಬಿದಿರೆ: ರಾಷ್ಟ್ರೀಕೃತ ಬ್ಯಾಂಕುಗಳು ವಿಲೀನ ಪ್ರಕ್ರಿಯೆಯಿಂದಾಗಿ ಸಂಕುಚಿತವಾಗುತ್ತಿರುವ ಇಂದಿನ ಕಾಲ ಘಟ್ಟದಲ್ಲಿ ಸಹಕಾರಿ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿಯೂ ಸರಿಸಾಟಿ ಇಲ್ಲದ ಸೇವೆ ನೀಡಿ ವಿಕಸನಗೊಳ್ಳುತ್ತಿವೆ. ಈ ಪೈಕಿ ಹಿಂದೆ ಬ್ಯಾಂಕುಗಳೆನಿಸಿದ್ದ ಸಹಕಾರಿ ಸಂಸ್ಥೆಗಳನ್ನು ಮತ್ತೆ ಅದೇ ಸ್ಥಾನಮಾನ ನೀಡುವ ಬಗ್ಗೆ ಕೇಂದ್ರ ಸಹಕಾರಿ ಸಚಿವರ ಗಮನ ಸೆಳೆಯಲಾಗಿದೆ ಎಂದು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ.ಮೂಡುಬಿದಿರೆ ಕೋ-ಆಪರೇಟಿವ್ ಸರ್ವೀಸ್ ಸೊಸೈಟಿ ಯ ಸಹಕಾರಿ ಸಪ್ತಾಹ ಸಂಭ್ರಮ 2025 ಸಪ್ತ ಸಂಧ್ಯಾ- ಸಹಕಾರಿ ಚಿಂತನ ಸರಣಿ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಸೊಸೈಟಿಯ ಕಲ್ಪವೃಕ್ಷ ಸಭಾಭವನದಲ್ಲಿ ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿರುವ 451 ಡಿಸಿಸಿ ಬ್ಯಾಂಕ್‌ಗಳಲ್ಲಿ ದ.ಕ. ಜಿಲ್ಲೆಯ ಡಿಸಿಸಿ ಬ್ಯಾಂಕ್ ಹಾಗೂ ಜಿಲ್ಲೆಯಲ್ಲಿರುವ ಸಹಕಾರಿ ಸಂಘಗಳು ಮಾದರಿಯಾಗಿವೆ. ಜಿಲ್ಲೆಯ ಜನರ ಉತ್ತಮ ಸಾಲ ಮರುಪಾವತಿ ಹಾಗೂ ಠೇವಣಿ ಸಂಸ್ಕೃತಿಯೇ ಇದಕ್ಕೆ ಕಾರಣ ಎಂದು ನಬಾರ್ಡ್ ಅಧಿಕಾರಿಗಳು ಪ್ರಶಂಸಿರುವುದು ಜಿಲ್ಲೆಯ ಸಹಕಾರಿ ರಂಗದ ಸಾಧನೆ ಎಂದವರು ಹೇಳಿದರು. ಸೊಸೈಟಿಯ ನೂತನ ಋಣ ಪರಿಹಾರ ನಿಧಿ ಯೋಜನೆಗೆ ಅವರು ಚಾಲನೆ ನೀಡಿದರು.ಮೈಸೂರು ಕೆಥೋಲಿಕ್ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ರೆ.ಫಾ ಪ್ರಾನ್ಸಿಸ್ ಸೆರಾವೊ ಆಶೀವರ್ಚನ ನೀಡಿದರು. ‘ಸಹಕಾರ ಕಲ್ಪವೃಕ್ಷ ಪ್ರಶಸ್ತಿ’ ಪ್ರದಾನ:
ಸೊಸೈಟಿಯ ಹಿರಿಯ ನಿರ್ದೇಶಕ ಎಂ. ಜಾರ್ಜ್ ಮೋನಿಸ್ ಅವರಿಗೆ 25 ಸಾವಿರ ರು. ನಗದು, 10 ಗ್ರಾಂ ಚಿನ್ನದ ಪದಕ, ಬೆಳ್ಳಿಯ ಸ್ಮರಣಿಕೆ, ಶಾಲು, ಹಾರ, ಫಲಪುಷ್ಪ ಸಮ್ಮಾನದೊಂದಿಗೆ ‘ಸಹಕಾರ ಕಲ್ಪವೃಕ್ಷ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಸೊಸೈಟಿ ನಿರ್ದೇಶಕ ಸಿ.ಎಚ್ ಗಫೂರ್ ಅಭಿನಂದನಾ ಮಾತುಗಳನ್ನಾಡಿದರು. ಸೊಸೈಟಿಯ ಉನ್ನತ ಪ್ರಶಸ್ತಿಯ ಗೌರವವನ್ನು ನೀಡಿರುವ ಪ್ರೀತಿಗಾಗಿ ಋುಣಿಯಾಗಿರುವುದಾಗಿ ಜಾರ್ಜ್ ಮೊನಿಸ್ ಹೇಳಿದರು. ಸೊಸೈಟಿಯ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಅಧ್ಯಕ್ಷತೆ ವಹಿಸಿ ಮಾತನಾಡಿ ಆತ್ಮನಿರ್ಭರ ಭಾರತಕ್ಕೆ ಸಹಕಾರಿ ರಂಗದ ಕೊಡುಗೆ ಅನನ್ಯವಾಗಿದೆ ಎಂದರು.ಮೂಡುಬಿದಿರೆ ಕೋರ್ಪುಸ್ ಕ್ರಿಸ್ತಿ ಚರ್ಚ್ ಧರ್ಮಗುರು ರೆ.ಫಾ ಒನಿಲ್ ಡಿಸೋಜ, ಮಾಜಿ ಸಚಿವ , ಸೊಸೈಟಿ ನಿರ್ದೇಶಕ ಕೆ.ಅಭಚಯಂದ್ರ ಜೈನ್, ಶಿರ್ತಾಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್. ಪ್ರವೀಣ್ ಕುಮಾರ್, ದ.ಕ ಜಿಲ್ಲೆ ಸಹಕಾರ ಸಂಘಗಳ ಉಪನಿಬಂಧಕ, ಡಾ. ಎಚ್.ಎನ್ ರಮೇಶ್, ದ.ಕ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಲ್ಯೊಟ್ಟು ಉಪಸ್ಥಿತರಿದ್ದರು.ಸಹಕಾರಿ ಶಿಕ್ಷಣ ನಿಧಿಗೆ ರು.11 ಲಕ್ಷ, ಶಿರ್ತಾಡಿ ಕೃಷಿ ಪತ್ತಿನ ಸಂಘಕ್ಕೆ ಒಂದು ಲಕ್ಷ ರು. ದೇಣಿಗೆ ಹಾಗೂ ಕಲ್ಪವೃಕ್ಷ ಆರೋಗ್ಯ ಕಾರ್ಡ್ ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಸೊಸೈಟಿಯ ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ. ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ರಘುವೀರ ಕಾಮತ್ ವಂದಿಸಿದರು. ಚೇತನಾ ರಾಜೇಂದ್ರ ಹೆಗ್ಡೆ ನಿರೂಪಿಸಿದರು.
ಬಳಿಕ ಆಳ್ವಾಸ್ ಧೀಂ ಕಿಟ ಯಕ್ಷಗಾನ ಅಧ್ಯಯನ ಕೇಂದ್ರ ವಿದ್ಯಾರ್ಥಿ ಕಲಾವಿದರಿಂದ ಸಿಂಧೂರ ಸಂಗ್ರಾಮ ಯಕ್ಷಗಾನ ಪ್ರದರ್ಶನ ನಡೆಯಿತು. ಸಾಂಸ್ಕೃತಿಕ ಕಲಾಪವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಉದ್ಘಾಟಿಸಿದರು. ಶ್ರೀಶಾ ಪ್ರಭು ಮೂಡುಬಿದಿರೆ ಅವರಿಂದ ಸ್ಯಾಕ್ಸೋಫೋನ್ ವಾದನ ನಡೆಯಿತು. ...............................................ನನಗೆ ರಾಜಕೀಯ ಬೇಡ: ಎಂ.ಎನ್.ರಾಜೇಂದ್ರ ಕುಮಾರ್ಹತ್ತು ವರ್ಷಗಳ ಹಿಂದೆ ಮೂಡುಬಿದಿರೆಯ ಇದೇ ಸಹಕಾರಿ ಸೊಸೈಟಿಯಲ್ಲಿ ಮೊದಲ ‘ಸಹಕಾರ ಕಲ್ಪವೃಕ್ಷ ಪ್ರಶಸ್ತಿ’ ಪಡೆಯುವ ಸೌಭಾಗ್ಯ ನನ್ನದಾಯಿತು. ಆ ಬಳಿಕ ಸಹಕಾರ ರಂಗದಲ್ಲಿ ಅನೇಕ ಗೌರವ, ಸ್ಥಾನ ಮಾನಗಳು ಅರಸಿ ಬಂದವು. ಹಿಂದೆ ನೋಡುವ ಅವಕಾಶವೇ ಇಲ್ಲವಾಯಿತು. ಸಹಕಾರಿ ರಂಗದಲ್ಲಿ ಸಾಕಷ್ಟು ಬೆಳೆಯುವ ಅವಕಾಶಗಳೂ ಲಭಿಸಿವೆ. ರಾಜಕೀಯಕ್ಕೆ ಸೇರುವ, ಮಂತ್ರಿಯಾಗುವ ಯಾವ ಆಸೆಯೂ ನನಗಿಲ್ಲ, ನಾನು ಅತ್ತ ಹೋಗುವುದೂ ಇಲ್ಲ ಎಂದು ಎಂ.ಎನ್.ರಾಜೇಂದ್ರ ಕುಮಾರ್ ಸ್ಪಷ್ಟಪಡಿಸಿದರು. ಎಂಎನ್ ಆರ್ ಸಹಕಾರಿ ಮಂತ್ರಿಯಾಗಲಿ ಎನ್ನುವ ಮಾತುಗಳು ವೇದಿಕೆಯಲ್ಲಿ ಕೇಳಿ ಬಂದ ಹಿನ್ನೆಲೆಯಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸಹಕಾರಿ ರತ್ನ ಗೌರವ ನೀಡಲಾಗುತ್ತಿದೆ. ಆದರೆ ತಾವು ಜಿಲ್ಲೆಯಲ್ಲಿ ಸಹಕಾರಿ ಮಾಣಿಕ್ಯ ಗೌರವ ಆರಂಭಿಸಿ ಮೊದಲ ಪ್ರಶಸ್ತಿಯನ್ನು ಇದೇ ಸೊಸೈಟಿಗೆ ಕಳೆದ ವರ್ಷ ನೀಡಿರುವುದನ್ನು ಅವರು ಉಲ್ಲೇಖಿಸಿದರು.;Resize=(128,128))
;Resize=(128,128))
;Resize=(128,128))