ಸಾರಾಂಶ
ಉಡುಪಿ: ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ವತಿಯಿಂದ ಮಕ್ಕಳ ದಿನಾಚರಣೆ ಪ್ರಯುಕ್ತ ಸಾಧಕ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಶುಕ್ರವಾರ ಉಡುಪಿ ಶಾಖೆಯಲ್ಲಿ ಸಂಭ್ರಮದಿಂದ ಜರಗಿತು.ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಕ್ಕಳಾದ ಸಾನಿಧ್ಯ ಆಚಾರ್ಯ ಪೆರ್ಡೂರು, ಆರ್ಯ, ಮುತಹ್ಹರ್ ಮಲೈಕ, ವೈಷ್ಣವಿ ವಿಶ್ವನಾಥ್, ರಿತುಶ್ರೀ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಶೇಕ್ ವಹೀದ್ ದಾವೂದು, ಉಮೇಶ್ ಪೂಜಾರಿ ಹಾಗೂ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಭಟ್ ಅವರನ್ನು ಅಭಿನಂದಿಸಲಾಯಿತು.ಮುಖ್ಯ ಅತಿಥಿಯಾಗಿ ಎನ್.ಎಚ್.ಆರ್.ಸಿ. ಉಡುಪಿ ಜಿಲ್ಲಾಧ್ಯಕ್ಷೆ ಸ್ಮಿತಾ ಸುಧೀರ್ ಮಾತನಾಡಿ, ಇಂದು ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಎಲ್ಲಾ ಕಡೆ ಅವಕಾಶಗಳು ಸಿಗುತ್ತಿವೆ. ಅದನ್ನು ಮಕ್ಕಳು ಬಳಸಿಕೊಂಡು ಇನ್ನಷ್ಟು ಸಾಧನೆ ಮಾಡಬೇಕು ಎಂದು ತಿಳಿಸಿದರು.ಕಾಪು ರಂಗತರಂಗ ಸಂಗೀತ ನಿರ್ದೇಶಕ ಶರತ್ ಉಚ್ಚಿಲ, ಮಹಾಲಕ್ಷ್ಮಿ ಕೋ ಆಪರೇಟಿವ್ ಬ್ಯಾಂಕ್ ಉಡುಪಿಯ ಆಡಳಿತ ಕಚೇರಿ ವ್ಯವಸ್ಥಾಪಕಿ ವಿಜೇತ ಶೆಟ್ಟಿ ಮಾತನಾಡಿದರು. ಮಲಬಾರ್ ಗೋಲ್ಡ್ ನ ಶಾಖಾ ಮುಖ್ಯಸ್ಥರಾದ ಹಫೀಝ್ ರೆಹಮಾನ್, ಪ್ರಮುಖರಾದ ಹರೀಶ್ ಎಮ್ ಜಿ, ಸಂದೀಫ್ ಸಫಲ್ಯ, ದಿವ್ಯ ಉಪಸ್ಥಿತರಿದ್ದರು. ಮಾರುಕಟ್ಟೆ ವ್ಯವಸ್ಥಾಪಕ ತಂಝೀಮ್ ಶಿರ್ವ ಉಪಸ್ಥಿತರಿದ್ದರು. ವಿಘ್ನೇಶ್ ಸ್ವಾಗತಿಸಿ ನಿರೂಪಿಸಿದರು.
;Resize=(128,128))
;Resize=(128,128))
;Resize=(128,128))