ಚಾಮರಾಜನಗರದಲ್ಲಿ 20ಕ್ಕೂಹೆಚ್ಚು ಮಂದಿ ಕರಸೇವಕರಿಗೆ ಸನ್ಮಾನ

| Published : Jan 23 2024, 01:47 AM IST

ಚಾಮರಾಜನಗರದಲ್ಲಿ 20ಕ್ಕೂಹೆಚ್ಚು ಮಂದಿ ಕರಸೇವಕರಿಗೆ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ಅಯೋಧ್ಯೆಯಲ್ಲಿ ರಾಮಮಂದಿರ ಲೋರ್ಕಾಪಣೆ ಪ್ರಯುಕ್ತ ಚಾ.ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಅವರಣದಲ್ಲಿ ರಾಮದೇವರ ಪೂಜೆ ಹಾಗೂ ಅಯೋಧ್ಯೆಗೆ ಕರಸೇವೆಗೆ ತೆರಳಿದ್ದ ೨೦ಕ್ಕು ಹೆಚ್ಚು ಮಂದಿಯನ್ನು ಗೌರವಿಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರ ಅಯೋಧ್ಯೆಯಲ್ಲಿ ರಾಮಮಂದಿರ ಲೋರ್ಕಾಪಣೆ ಪ್ರಯುಕ್ತ ಚಾ.ನಗರದ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಅವರಣದಲ್ಲಿ ರಾಮದೇವರ ಪೂಜೆ ಹಾಗೂ ಅಯೋಧ್ಯೆಗೆ ಕರಸೇವೆಗೆ ತೆರಳಿದ್ದ ೨೦ಕ್ಕು ಹೆಚ್ಚು ಮಂದಿಯನ್ನು ಗೌರವಿಸಲಾಯಿತು. ನಗರದ ಹೃದಯ ಭಾಗದಲ್ಲಿರುವ ಶ್ರೀ ಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಶ್ರೀರಾಮನ ಬೃಹತ್ ಫ್ಲೆಕ್ಸ್‌ಗಳನ್ನು ಕಟ್ಟಿ, ಶುಭ ಕೋರಲಾಯಿತು. ಮಧ್ಯಾಹ್ನ ೧೨ ಗಂಟೆಗೆ ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಲೋಕಾರ್ಪಣೆ ಮಾಡುತ್ತಿದ್ದಂತೆ ಡಾ.ಎನ್.ಎಸ್. ಮೋಹನ್ ಬಳಗದವರು ೨೦ ಮಂದಿ ಕರಸೇವಕರಿಗೆ ಹಾರ ಹಾಕಿ ನೆನಪಿನ ಕಾಣಿಕೆ ನೀಡಿ, ಪುಷ್ಪವೃಷ್ಟಿ ಮಾಡುವ ಮೂಲಕ ಅವರ ಸೇವೆಯನ್ನು ಸ್ಮರಿಸಿಕೊಂಡರು.

ಬಳಿಕ ಅನೇಕರು ತಮ್ಮ ಅನುಭವನ್ನು ಹಂಚಿಕೆಕೊಂಡರು. ಡಾ. ಎನ್.ಎಸ್. ಮೋಹನ್ ಗೌರವ ಸನ್ಮಾನಿಸಿ ಮಾತನಾಡಿ, ಇದೊಂದು ಐತಿಹಾಸಿಕ ದಿನವಾಗಿದ್ದು, ಭಾರತೀಯರು ಸುವರ್ಣಕ್ಷರದಲ್ಲಿ ಬರೆದಿರುವ ದಿನವಾಗಿದೆ. ಆಯೋಧ್ಯದಲ್ಲಿ ಜನಿಸಿದ ಶ್ರೀರಾಮನಿಗೆ ಮಂದಿರ ನಿರ್ಮಾಣವಾಗಬೇಕು ಎಂಬುವುದು ಪ್ರತಿಯೊಬ್ಬ ಭಾರತೀಯ ಕನಸಾಗಿದ್ದು, ಇದಕ್ಕಾಗಿ ಬಹಳ ದೊಡ್ಡ ಹೋರಾಟವೇ ಆಗಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಅದಿತ್ಯ ನಾಥ್ ಹಾಗೂ ಕರಸಂಘದ ಸಂಚಾಲಕರು ಶ್ರಮ ಬಹಳಷ್ಟಿದೆ ನಮ್ಮ ಚಾಮರಾಜನಗರದಿಂದಲು ಆಯೋಧ್ಯೆಗೆ ಕರಸೇವೆ ತೆರಳಿದ್ದು ಎಂಬುವುದು ಹೆಮ್ಮೆ ವಿಚಾರ. ಅವರನ್ನು ಗೌರವಿಸುವುದು ನಮ್ಮೆಲ್ಲರ ಪುಣ್ಯ ಎಂದರು.

ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಕುರುಬರಹುಂಡಿ ಲೋಕೇಶ್, ಕಾಡಹಳ್ಳಿ ಕುಮಾರ್, ಚಂದ್ರಶೇಖರ್, ಕುಲಗಾಣ ಶಾಂತಮೂರ್ತಿ, ಸುಂದರರಾಜ್, ಹೇಮಂತ್, ಮಂಜುನಾಥ್‌ಗೌಡ, ಸುದರ್ಶನಗೌಡ, ಎಪಿಎಂಸಿ ಅಧ್ಯಕ್ಷ ಮನೋಜ್‌ಪಟೇಲ್ ಮೊದಲಾದವರು ಇದ್ದರು.