ಸಾರಾಂಶ
ಹತ್ತಿಕುಣಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಶ್ರೀರಾಮೋತ್ಸವ ಆಚರಣೆ ಶ್ರದ್ಧಾ, ಭಕ್ತಿಯಿಂದ ನಡೆಯಿತು
ಕನ್ನಡಪ್ರಭ ವಾರ್ತೆ ಯಾದಗಿರಿ
ಸೋಮವಾರ ಅಯೋಧ್ಯೆ ಭವ್ಯ ಮಂದಿರದಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪನೆಯಾಗುತ್ತಿದ್ದಂತೆಯೇ, ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆ ಹೊಂದಿರುವ ಶ್ರೀರಾಮಲಿಂಗೇಶ್ವರ ದೇವಸ್ಥಾನದಲ್ಲಿ ಅದ್ಧೂರಿಯಾಗಿ ಶ್ರೀರಾಮೋತ್ಸವ ಆಚರಣೆ ಶ್ರದ್ಧಾ, ಭಕ್ತಿಯಿಂದ ನಡೆಯಿತು.ಶ್ರೀರಾಮ ಭಾವಚಿತ್ರಕ್ಕೆ ಶ್ರೀಗಳಾದ ಸುಭಾಶ್ಚಂದ್ರ ಸ್ವಾಮಿಜಿ ಪೂಜೆ ನೆರವೇರಿಸಿದರು. ನಂತರ ನಡೆದ ಸಮಾರಂಭದಲ್ಲಿ ಗ್ರಾಮದ ಹಿರಿಯ ಮುಖಂಡರಾದ ಶರಣಪ್ಪಗೌಡ ಮಾಲಿ ಪಾಟೀಲ್ ಮಾತನಾಡಿ, 5 ಶತಮಾನಗಳ ಹಿಂದೂಗಳ ಹೋರಾಟದ ಫಲವಾಗಿ ಇಂದು ಅಯೋಧ್ಯೆಯಲ್ಲಿ ಭವ್ಯ ಮಂದಿರ ಶ್ರೀರಾಮನ ಮೂರ್ತಿ ಸ್ಥಾಪನೆಯಾಗಿರುವುದು ದೇಶದ ಜನರಲ್ಲಿ ಸಂತಸ ಮೂಡಿದೆ ಎಂದರು.
ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಆಧ್ಯಾತ್ಮಿಕ ಸಂಪತ್ತನ್ನು ನಮ್ಮ ದೇಶ ಹೊಂದಿದೆ. ಈ ಭೂಮಿ ಧರ್ಮ, ಸಂಸ್ಕೃತಿ ನೆಲೆಬೀಡಾಗಿದೆ. ಎಲ್ಲರೂ ಶ್ರೀರಾಮನ ಧರ್ಮ ಪ್ರಜ್ಞೆ, ಸಂದೇಶಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮೂಲಕ ಸಾಮರಸ್ಯದ ರಾಮರಾಜ್ಯ ನಿರ್ಮಾಣಕ್ಕೆ ನಮ್ಮದೇಯಾದ ಕೊಡುಗೆ ನೀಡಬೇಕೆಂದು ತಿಳಿಸಿದರು.ಗ್ರಾಮದ ಹಿರಿಯ ಮುಖಂಡರಾದ ಅಮೀನ್ ರಡ್ಡಿ ಬಿಳ್ಹಾರ, ಅಮೃತರಡ್ಡಿ ಪಾಟೀಲ್, ಯಂಕಾರಡ್ಡಿ ಜಟ್ಟೂರ, ರಾಮರಡ್ಡಿ ಕೌಳೂರ, ಭೀಮರಡ್ಡಿ ನಾಯ್ಕಲ್, ಶ್ರೀಧರ್, ಭೀಮರಡ್ಡಿ ರಾಂಪೂರಹಳ್ಳಿ, ರವಿ ಪಾಟೀಲ್, ಬಸವರಾಜ ಕೊಡ್ಲಾ, ಪ್ರವೀಣರಡ್ಡಿ, ಮಲ್ಲರಡ್ಡಿ ಹೊಸಳ್ಳಿ, ಮಲ್ಲು ಸಿಂಪಿಗೇರ, ರವಿ ಯಲ್ಹೇರಿ, ಶರಣು ಗಡೇದ್, ರಾಜು ಸೇರಿ ನೂರಾರು ಯುವಕರು ಇದ್ದರು. ಇದಕ್ಕೂ ಮೊದಲು ಶ್ರೀರಾಮಲಿಂಗ ಶಿವಲಿಂಗಕ್ಕೆ ಹಾಗೂ ಕಾಲ ಭೈರವನಿಗೆ ಅರ್ಚಕರಿಂದ ವಿಶೇಷ ಪೂಜೆ ಕೈಂಕರ್ಯಗಳು ಜರುಗಿದವು.