ಸಾರಾಂಶ
ಬೇರೆ ಜಿಲ್ಲೆಯವರನ್ನು ನಮ್ಮ ಜಿಲ್ಲೆಯ ಮತದಾರ ಒಪ್ಪಲಾರರು. ಕಳೆದ ಚುನಾವಣೆಯಲ್ಲಿ ಜನತೆ ಸೋಲಿನ ರುಚಿ ತೋರಿಸಿದ್ದಾರೆ. ಮೋದಿ ಬಾಯಲ್ಲಿ ಬರುವುದೆಲ್ಲ ಬರೀ ಬರೀ ಸುಳ್ಳು. ಇಂತಹ ಕೆಟ್ಟ ರಾಜಕಾರಣಿ, ಸರ್ಕಾರ ಮೊದಲು ತೆಗೆಯಲು ಸಂಕಲ್ಪ ಮಾಡಬೇಕು. ತಾಲೂಕಿನ ಜನತೆ ಬುದ್ಧಿವಂತರಿದ್ದು ಚರ್ಚೆ ಮಾಡುವ ಜಾಣ್ಮೆ ಇವರಲ್ಲಿದೆ. ಯುವಕರು ಎಚ್ಚೆತ್ತುಕೊಂಡು ಮತದಾನ ಮಾಡಬೇಕು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜಿಲ್ಲೆಯವರೇ ಸಂಸದರಾಗಬೇಕು ಎಂಬುದನ್ನು ಮತದಾರರು ಅರಿಯಬೇಕು ಎಂದು ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್ ಹೇಳಿದರು.ಸಮೀಪದ ಮಂದಗೆರೆಯಲ್ಲಿ ಲೋಕಸಭಾ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೆಗೌಡ(ಸ್ಟಾರ್‌ಚಂದ್ರು) ಪರ ಮತಯಾಚಿಸಿ ಮಾತನಾಡಿ, ಎಲ್ಲ ಮುಖಂಡರು ಯೋಚಿಸಿ ಸ್ಟಾರ್ ಚಂದ್ರು ಅವರನ್ನು ಒಮ್ಮತದಿಂದ ಆಯ್ಕೆ ಮಾಡಲಾಗಿದೆ ಎಂದರು.
ಎಚ್.ಡಿ.ದೇವೇಗೌಡರನ್ನು ಪ್ರಧಾನಿ ಹಾಗೂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂಬುದನ್ನು ಮರೆಯಬಾರದು. ಇವರಿಗೆ ಬುದ್ಧಿ ಕಲಿಸಲು ಮತದಾರರು ಮರೆಯಬಾರದು ಎಂದು ಹೇಳಿದರು.ಬೇರೆ ಜಿಲ್ಲೆಯವರನ್ನು ನಮ್ಮ ಜಿಲ್ಲೆಯ ಮತದಾರರ ಒಪ್ಪಲಾರರು. ಕಳೆದ ಚುನಾವಣೆಯಲ್ಲಿ ಜನತೆ ಸೋಲಿನ ರುಚಿ ತೋರಿಸಿದ್ದಾರೆ. ಮೋದಿ ಬಾಯಲ್ಲಿ ಬರುವುದೆಲ್ಲ ಬರೀ ಬರೀ ಸುಳ್ಳು. ಇಂತಹ ಕೆಟ್ಟ ರಾಜಕಾರಣಿ, ಸರ್ಕಾರ ಮೊದಲು ತೆಗೆಯಲು ಸಂಕಲ್ಪ ಮಾಡಬೇಕು ಎಂದು ಗುಡುಗಿದರು.
ಕಾಂಗ್ರೆಸ್ ಮುಖಂಡ ಬಿ.ಎಲ್. ದೇವರಾಜು ಮಾತನಾಡಿ, ತಾಲೂಕಿನ ಜನತೆ ಬುದ್ಧಿವಂತರಿದ್ದು ಚರ್ಚೆ ಮಾಡುವ ಜಾಣ್ಮೆ ಇವರಲ್ಲಿದೆ. ಯುವಕರು ಎಚ್ಚೆತ್ತುಕೊಂಡು ಮತದಾನ ಮಾಡಬೇಕು ಎಂದು ತಿಳಿಸಿದರು.ಅಭ್ಯರ್ಥಿ ವೆಂಕಟರಮಣೇಗೌಡ ಮಾತನಾಡಿ, ಜಿಲ್ಲೆಯ ಮಗ ತಾನಾಗಿದ್ದು, ತಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿಎಂದು ಮನವಿ ಮಾಡಿದರು. ಈ ವೇಳೆ ಮಾಜಿ ಶಾಸಕ ಬಿ. ಪ್ರಕಾಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ನಾಗೇಂದ್ರಕುಮಾರ್, ಮೈಶುಗರ್ ಅಧ್ಯಕ್ಷ ಸಿ.ಡಿ. ಗಂಗಾಧರ್, ಮುಖಂಡರಾದ ಬಸ್ತಿರಂಗಪ್ಪ, ಮಾದಾಪುರ ರಾಮಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಪದ್ಮನಾಭ ನೇಮಕ
ಮಂಡ್ಯ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಉದ್ಯಮಿ, ನಿರ್ಮಾಪಕ ಪದ್ಮನಾಭ ಅವರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಆದೇಶ ಹೊರಡಿಸಿದ್ದಾರೆ. ನಾಗಮಂಗಲ ತಾಲೂಕು ದೇವಲಾಪುರ ಗ್ರಾಮದ ಪದ್ಮನಾಭ ಅವರು ಉದ್ಯಮಿಯಾಗಿರುವ ಜೊತೆಗೆ ಚಲನಚಿತ್ರ ನಿರ್ಮಾಪಕರೂ ಆಗಿದ್ದಾರೆ. ಕಾಂಗ್ರೆಸ್ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರಿಂದ ಅವರ ಕಾರ್ಯದಕ್ಷತೆ ಮೆಚ್ಚಿ ಹುದ್ದೆ ನೀಡಲಾಗಿದೆ. ತಕ್ಷಣದಿಂದಲೇ ಅಧಿಕಾರ ವಹಿಸಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗುವಂತೆ ಸೂಚಿಸಲಾಗಿದೆ.