ಮೂಲ್ಕಿ: ಮೂಳೂರು-ಅಡ್ಡೂರು ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ, ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಇನಾಯತ್‌ ಆಲಿ ನೇತೃತ್ವದಲ್ಲಿ ಗುರುಪುರ ಮಾಣಿಬೆಟ್ಟು ಗುತ್ತಿನಲ್ಲಿ ನಡೆದ 3ನೇ ವರ್ಷದ ಮೂಳೂರು- ಅಡ್ಡೂರು ಜೋಡುಕರೆ ಗುರುಪುರ ಹೊನಲು ಬೆಳಕಿನ ಕಂಬಳದಲ್ಲಿ ಒಟ್ಟು 160 ಜೊತೆ ಕೋಣಗಳು ಭಾಗವಹಿಸಿದ್ದವು. ಕನೆ ಹಲಗೆ- 15 ಜೊತೆ, ಅಡ್ಡ ಹಲಗೆ-7 ಜೊತೆ, ಹಗ್ಗ ಹಿರಿಯ-11 ಜೊತೆ, ನೇಗಿಲು ಹಿರಿಯ-21 ಜೊತೆ, ಹಗ್ಗ ಕಿರಿಯ-30 ಜೊತೆ, ನೇಗಿಲು ಕಿರಿಯ- 76 ಜೊತೆ ಪಾಲ್ಗೊಂಡಿದ್ದವು.ಕನೆ ಹಲಗೆ (6.5 ಕೋಲು ನೀರು ಹಾಯಿಸಿದ) ವಿಭಾಗದಲ್ಲಿ ಬೋಳಾರ ತ್ರಿಶಾಲ್ ಕೆ. ಪೂಜಾರಿ ‘ಎ’, (ಹಲಗೆ ಮೆಟ್ಟಿದವರು ತೆಕ್ಕಟ್ಟೆ ಸುಧೀರ್‌), ಅಡ್ಡ ಹಲಗೆ: ಪ್ರ-ಇರುವೈಲು ದೊಡ್ಡಗುತ್ತು ಅಮರ್ಥ್ಯ ಪದ್ಮನಾಭ ಶೆಟ್ಟಿ (ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ), ದ್ವಿ: ನಾರಾವಿ ರಕ್ಷಿತ್ ಜೈನ್ (11.48), (ಹಲಗೆ ಮೆಟ್ಟಿದವರು: ಭಟ್ಕಳ ಪಾಂಡು). ಹಗ್ಗ ಹಿರಿಯ: ಪ್ರ- ಕೊಳಕೆ ಇರ್ವತ್ತೂರು ಭಾಸ್ಕರ ಕೋಟ್ಯಾನ್‌ , (10.67) (ಓಡಿಸಿದವರು- ಕಕ್ಕೆಪದವು ಪೆಂರ್ಗಾಲು ಕೃತಿಕ್), ದ್ವಿ- ನಂದಳಿಕೆ ಶ್ರೀಕಾಂತ್ ಭಟ್ ಬಿ., ಓಡಿಸಿದವರು-ಬಂಬ್ರಾಣಬೈಲು ವಂದಿತ್ ಶೆಟ್ಟಿ, ಹಗ್ಗ ಕಿರಿಯ: ಪ್ರ- ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ (11.27) ಓಡಿಸಿದವರು-ಉಜಿರೆ ಸ್ಪಂದನ್ ಶೆಟ್ಟಿ. ದ್ವಿ: ಪಡೀಲ್ ಕಬತ್ತಾರು ಗುತ್ತು ದಿನಕರ ಜಯರಾಜ ಶೆಟ್ಟಿ (11.56), (ಓಡಿಸಿದವರು: ಮಂದಾರ್ತಿ ಮುದ್ದುಮನೆ ಭರತ್ ನಾಯ್ಕ). ನೇಗಿಲು ಹಿರಿಯ: ಪ್ರ-80 ಬಡಗು ಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (10.73) (ಓಡಿಸಿದವರು: ಮಾಸ್ತಿಕಟ್ಟೆ ಸ್ವರೂಪ್), ದ್ವಿ- ಸುರತ್ಕಲ್ ಪಾಂಚಜನ್ಯ ಯೋಗೀಶ್ ಕರಿಯ ಪೂಜಾರಿ, ಓಡಿಸಿದವರು: ಭಟ್ಕಳ ಶಂಕರ್‌. ನೇಗಿಲು ಕಿರಿಯ: ಪ್ರಥಮ-ನಿಂಜೂರು ಪಡುಮನೆ ಅಮಯ್ ಆದ್ಯ ಶೆಟ್ಟಿ (10.68) (ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ). ದ್ವಿ.: ಹೊಸ್ಮಾರು ಸೂರ್ಯಶ್ರೀ ಜ್ಯೋತಿ ಸುರೇಶ್ ಶೆಟ್ಟಿ ಎ. (ಓಡಿಸಿದವರು ಮುಳಿಕ್ಕಾರು ವಿವೇಕ ದೇವಾಡಿಗ. ಬಹುಮಾನ: ಕನೆಹಲಗೆ 6.5 ಕೋಲು ನೀರು ಹಾಯಿಸಿದ ಕೋಣಕ್ಕೆ ಅರ್ಧ ಪವನ್, ಉಳಿದಂತೆ ಹಗ್ಗ ವಿಭಾಗ ಹಿರಿಯ-ಕಿರಿಯ, ನೇಗಿಲು ವಿಭಾಗ ಹಿರಿಯ-ಕಿರಿಯ, ಅಡ್ಡ ಹಲಗೆ ವಿಭಾಗದಲ್ಲಿ ಪ್ರಥಮ 1 ಪವನ್, ದ್ವಿತೀಯ ಅರ್ಧ ಪವನ್, ತೃತೀಯ 1 ಗ್ರಾಂ ಚಿನ್ನ, ಚತುರ್ಥ 1 ಗ್ರಾಂ ಚಿನ್ನ ಬಹುಮಾನ ನೀಡಲಾಗಿದೆ. ಕನೆಹಲಗೆ ವಿಭಾಗದಲ್ಲಿ ನೀರು ಹಾಯಿಸದಿದ್ದರೂ ಎಲ್ಲ ಕೋಣಗಳಿಗೆ 1 ಗ್ರಾಂ ಚಿನ್ನದ ಪದಕ, ಭಾಗವಹಿಸಿದ ಎಲ್ಲ ಕೋಣಗಳ ಮಾಲೀಕರಿಗೆ ಬೆಳ್ಳಿಯ ನಾಣ್ಯ ಹಾಗೂ 1 ಬ್ಯಾಗ್ ಹುರುಳಿ ನೀಡಲಾಯಿತು. ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಗಣ್ಯರ ಉಪಸ್ತಿತಿಯಲ್ಲಿ ಕಂಬಳ ಸಮಿತಿ ಅಧ್ಯಕ್ಷ ಇನಾಯತ್‌ ಆಲಿಯವರು ಬಹುಮಾನ ವಿತರಿಸಿದರು.

(ಚಿತ್ರ:7ಕಂಬಳ)