ಕನ್ನಡಪ್ರಭ ವಾರ್ತೆ ಕಾಗವಾಡ ನನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ₹50 ಕೋಟಿ ವಿಶೇಷ ಅನುದಾನ ನೀಡಿದ್ದು, ಶಿಕ್ಷಣ, ಆರೋಗ್ಯ, ನೀರಾವರಿ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ನನ್ನ ಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ₹50 ಕೋಟಿ ವಿಶೇಷ ಅನುದಾನ ನೀಡಿದ್ದು, ಶಿಕ್ಷಣ, ಆರೋಗ್ಯ, ನೀರಾವರಿ ಮತ್ತು ಮೂಲಭೂತ ಸೌಲಭ್ಯಗಳ ಅಭಿವೃದ್ಧಿ ಜೊತೆಗೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ ಎಂದು ಶಾಸಕ ರಾಜು ಕಾಗೆ ಹೇಳಿದರು.ತಾಲೂಕಿನ ಮಂಗಸೂಳಿ ಮಲಯ್ಯ ದೇವಸ್ಥಾನದ ಬಳಿ ಉದ್ಯಾನ ಅಭಿವೃದ್ಧಿಗಾಗಿ ಅರಣ್ಯ ಇಲಾಖೆಯ ₹ 1 ಕೋಟಿ ಅನುದಾನದ ಪೈಕಿ ₹ 60 ಲಕ್ಷವನ್ನು ಕಾಮಗಾರಿಗೆ ಮತ್ತು ಉಗಾರಖುರ್ದ ಗ್ರಾಮದಲ್ಲಿ ₹ 40 ಲಕ್ಷ ಅನುದಾನದ ಭಗತಸಿಂಗ್ ಸರ್ಕಲ್ ರಸ್ತೆ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು. ಮಲ್ಲಯ್ಯನ ದೇವಸ್ಥಾನದ ಬಳಿ ಸುಂದರ ಉದ್ಯಾನವನ್ನು ಅಭಿವೃದ್ಧಿ ಪಡಿಸಲಾಗುತ್ತಿದ್ದು, ಇನ್ನೂ 40 ಲಕ್ಷ ಅನುದಾನ ಬರಬೇಕಿದೆ. ಅದು ಬಂದ ಮೇಲೆ ಸುಂದರ ಉದ್ಯಾನವನ ಪೂರ್ಣಗೊಳ್ಳಲಿದೆ. ಜೊತೆಗೆ ಕೆರೆ ತುಂಬಿಸಿ ಬೋಟಿಂಗ್ ವ್ಯವಸ್ಥೆ ಮಾಡಲಾಗುವುದು. ಜೊತೆಗೆ ಕಾಗವಾಡ, ಶೇಡಬಾಳ, ಲೋಕುರ ಗ್ರಾಮಗಳ ಒಟ್ಟು 6 ಕೆರೆ ತುಂಬುವ ಯೋಜನೆಗೆ ₹ 26 ಕೋಟಿಯ ಟೆಂಡರ್‌ ಪ್ರಕ್ರಿಯೆ ಮುಗಿದ್ದು, ಶೀಘ್ರ ಕಾಮಗಾರಿ ಕೈಗೊಳ್ಳುವುದಾಗಿ ತಿಳಿಸಿದರು.

ಈ ವೇಳೆ ತಾಪಂ ಇಒ ವಿರಣ್ಣ ವಾಲಿ, ಎಸಿಎಫ್ ಭೀಮಗೊಂಡ, ಅರಣ್ಯಾಧಿಕಾರಿ ರಾಕೇಶ ಅರ್ಜುನವಾಡ, ಉಗಾರ ಪುರಸಭೆ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಅಭಿಯಂತರ ಮಡಿವಾಳಪ್ಪ ಪಾಟೀಲ, ಇಂಜಿನಿಯರ್‌ ಸಂತೊಷ, ನಾಗರಾಜ, ಜಿಪಂ ಮಾಜಿ ಸದಸ್ಯ ರವಿಂದ್ರ ಪೂಜಾರಿ, ಮುಕುಂದ ಪೂಜಾರಿ, ಮಂಗಸೂಳಿ ಗ್ರಾಪಂ ಅಧ್ಯಕ್ಷ ಬಾಳು ಭಜಂತ್ರಿ, ಪಿಡಿಒ ಸಂಜಯ ಸೂರ್ಯವಂಶಿ, ಸಂಜಯ ತಳವಲಕರ, ಸಮಿವುಲ್ಲಾ ಬಾರಗೀರ, ಶೇರಅಲಿ ಬಾರಗೀರ, ಎಚ್.ಎನ್.ನದಾಫ, ಮಹಾದೇವ ಕಟಗೇರಿ, ಸುರೇಶ ಕಟಗೇರಿ, ಉಗಾರ ಪುರಸಭೆ ಉಪಾಧ್ಯಕ್ಷ ಸತೀಶ ಜಗತಾಪ ಸೇರಿದಂತೆ ಇನ್ನು ಹಲವರು ಹಾಜರಿದ್ದರು.