2 ತಿಂಗಳಿಂದ ನಮ್ಮ ಕ್ಲಿನಿಕ್‌ ಸಿಬ್ಬಂದಿಗೆ ವೇತನ ಇಲ್ಲ

| Published : May 17 2024, 01:30 AM IST / Updated: May 17 2024, 07:34 AM IST

2 ತಿಂಗಳಿಂದ ನಮ್ಮ ಕ್ಲಿನಿಕ್‌ ಸಿಬ್ಬಂದಿಗೆ ವೇತನ ಇಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ವೈದ್ಯರಿಗೆ ಮಾತ್ರ ಪಾವತಿಯಾಗಿದ್ದು ಉಳಿದವರಿಗೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ ಸಾಮೂಹಿಕ ರಜೆ ಹಾಕಲು ಸಿಬ್ಬಂದಿ ನಿರ್ಧಾರ ಮಾಡಿದ್ದಾರೆ.

 ಬೆಂಗಳೂರು :  ಬಿಬಿಎಂಪಿಯ ‘ನಮ್ಮ ಕ್ಲಿನಿಕ್‌’ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕಳೆದ ಎರಡು ತಿಂಗಳಿನಿಂದ ವೇತನ ಪಾವತಿಸದ ಹಿನ್ನೆಲೆಯಲ್ಲಿ ಸಾಮೂಹಿಕ ರಜೆ ಹಾಕಲು ನಿರ್ಧರಿಸಿದ್ದಾರೆ.

ಬಡವರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವ ಉದ್ದೇಶದಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ‘ನಮ್ಮ ಕ್ಲಿನಿಕ್‌’ ಆರಂಭಿಸಲಾಯಿತು. ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 200ಕ್ಕೂ ಅಧಿಕ ಈ ಕ್ಲಿನಿಕ್‌ ಗಳು ಕಾರ್ಯ ನಿರ್ವಹಿಸುತ್ತಿವೆ.

ಈ ಕ್ಲಿನಿಕ್‌ಗಳಲ್ಲಿ ಡಾಕ್ಟರ್‌, ಲ್ಯಾಬ್‌ ಟೆಕ್ನಿಷಿಯನ್‌, ಸ್ಟಾಫ್‌ ನರ್ಸ್‌ ಹಾಗೂ ಡಿ ಗ್ರೂಪ್‌ ಸಿಬ್ಬಂದಿ ಕಾರ್ಯವಹಿಸುತ್ತಿದ್ದಾರೆ. ಡಾಕ್ಟರ್‌ ಹೊರತು ಪಡಿಸಿ ಸುಮಾರು 700ಕ್ಕೂ ಅಧಿಕ ಮಂದಿ ಕಾರ್ಯ ವಹಿಸುತ್ತಿದ್ದಾರೆ. ಡಾಕ್ಟರ್‌, ಲ್ಯಾಬ್‌ ಟೆಕ್ನಿಷಿಯನ್‌, ಸ್ಟಾಫ್‌ ನರ್ಸ್‌ ಗಳನ್ನು ಬಿಬಿಎಂಪಿಯು ಹೊರ ಗುತ್ತಿಗೆ ಅಧಾರದಲ್ಲಿ ನೇರವಾಗಿ ನೇಮಕ ಮಾಡಿಕೊಂಡು ವೇತನ ಪಾವತಿ ಮಾಡುತ್ತಿದೆ. ‘ಡಿ’ ಗ್ರೂಪ್‌ ಸಿಬ್ಬಂದಿಯನ್ನು ಖಾಸಗಿ ಏಜೆನ್ಸಿ ಮೂಲಕ ನೇಮಕ ಮಾಡಿಕೊಂಡಿದೆ. ಡಾಕ್ಟರ್ ಹೊರತುಪಡಿಸಿ ಇನ್ನುಳಿದ ಸಿಬ್ಬಂದಿಗೆ ಕಳೆದ ಮಾರ್ಚ್, ಏಪ್ರಿಲ್‌ ತಿಂಗಳ ವೇತನ ಪಾವತಿ ಮಾಡಿಲ್ಲ. ಈ ತಿಂಗಳ ಅಂತ್ಯದೊಳಗೆ ವೇತನ ಪಾವತಿ ಮಾಡದಿದ್ದರೆ ಸಾಮೂಹಿಕವಾಗಿ ರಜೆ ಹಾಕುವುದಾಗಿ ಸಿಬ್ಬಂದಿಗಳು ತಿಳಿಸಿದ್ದಾರೆ.ವಾರದಲ್ಲಿ ವೇತನ ಪಾವತಿ: ಕಿಶೋರ್‌

ಈ ಕುರಿತು ಪ್ರತಿಕ್ರಿಯೆ ನೀಡಿದ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ಸುರಳ್ಕರ್ ವಿಕಾಸ್ ಕಿಶೋರ್, ಡಿ ಗ್ರೂಪ್‌ ಸಿಬ್ಬಂದಿಗೆ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲಾಗಿದೆ. ಗುತ್ತಿಗೆ ನೀಡುವ ಸಂದರ್ಭದಲ್ಲಿ 2 ತಿಂಗಳ ವೇತನ ನೀಡಬೇಕು. ನಂತರ ಬಿಬಿಎಂಪಿ ಪಾವತಿ ಮಾಡಲಿದೆ ಎಂದು ಷರತ್ತು ವಿಧಿಸಲಾಗಿದೆ. ಆದರೂ ವೇತನ ನೀಡದ ಬಗ್ಗೆ ಏಜನ್ಸಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಬಿಬಿಎಂಪಿ ನೇಮಕ ಮಾಡಿಕೊಂಡಿರುವ ಲ್ಯಾಬ್‌ ಟೆಕ್ನಿಷಿಯನ್‌, ಸ್ಟಾಫ್‌ ನರ್ಸ್‌ ಗಳ ವೇತನ ಪಾವತಿಗೆ ಸಂಬಂಧಿಸಿದಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು, ಒಂದು ವಾರದಲ್ಲಿ ವೇತನ ಪಾವತಿ ಆಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.